For Quick Alerts
  ALLOW NOTIFICATIONS  
  For Daily Alerts

  ಬಹುಭಾಷಾ ನಟಿ ಸೌಂದರ್ಯ ತಾಯಿ ನಿಧನ

  |

  ಬಹುಭಾಷಾ ನಟಿ ದಿವಂಗತ ಸೌಂದರ್ಯ ಅವರ ತಾಯಿ ಕೆ ಎಸ್ ಮಂಜುಳಾ ಅವರು ನಿಧನ ಹೊಂದಿದ್ದಾರೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ಸಂಜೆ ಮೃತಪಟ್ಟಿದ್ದಾರೆ.

  ಸೌಂದರ್ಯ ಕುಟುಂಬ ಮೂಲತಃ ಬೆಂಗಳೂರಿನವರಾಗಿದ್ದರು. ಬೇರೆ ಬೇರೆ ಭಾಷೆಗಳಲ್ಲಿ ಸೌಂದರ್ಯ ಸಿನಿಮಾ ಮಾಡುತ್ತಿದ್ದರೂ, ಅವರ ಕುಟುಂಬ ಇಲ್ಲಿಯೇ ವಾಸವಾಗಿತ್ತು. ಇನ್ನು ನಿನ್ನೆ ಬೆಂಗಳೂರಿನ ಅದೇ ಮನೆಯಲ್ಲಿ ಸೌಂದರ್ಯ ತಾಯಿ ಕೆ ಎಸ್ ಮಂಜುಳಾ ವಿಧಿವಶರಾಗಿದ್ದಾರೆ.

  ನಟಿ ಸೌಂದರ್ಯರನ್ನು ಜೀವಂತವಾಗಿಟ್ಟ ಅತ್ತಿಗೆ ನಿರ್ಮಲಾ

  ವಿಮಾನ ದುರಂತದಿಂದ ಚಿಕ್ಕ ವಯಸ್ಸಿನಲ್ಲಿ ನಟಿ ಸೌಂದರ್ಯ ಅಕಾಲಿಕ ಮರಣ ಹೊಂದಿದ್ದರು. ಆ ಬಳಿಕ ಮಂಜುಳಾ ಅವರು ತುಂಬ ನೊಂದು ಹೋಗಿದ್ದರು. ಅಲ್ಲಿಂದ ಅವರ ಆರೋಗ್ಯ ಸಮಸ್ಯೆಗಳು ಹೆಚ್ಚಾಯ್ತು. 2004ರಲ್ಲಿ ಮಗಳು ಸೌಂದರ್ಯ ಇಹಲೋಕ ತ್ಯಜಿಸಿದ್ದು, ಆ ಘಟನೆಯ ನಂತರ 14 ವರ್ಷ ತಾಯಿ ನೋವಿನಲ್ಲಿ ಕಳೆದರು.

  ಖ್ಯಾತ ನಟಿ ಸೌಂದರ್ಯ ವಿಮಾನ ಅಪಘಾತದಲ್ಲಿ ದುರ್ಮರಣ

  ನಿನ್ನೆ ನಿಧನರಾಗಿರುವ ಮಂಜುಳಾ ಅವರ ಅಂತ್ಯ ಸಂಸ್ಕಾರ ಬೆಂಗಳೂರಿನಲ್ಲಿ ನಡೆಯಲಿದ್ದು, ಅವರ ನಿಧನಕ್ಕೆ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.

  English summary
  Multilingual actress Soundarya's mother Manjula is no more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X