twitter
    For Quick Alerts
    ALLOW NOTIFICATIONS  
    For Daily Alerts

    'ಮಲ್ಟಿಫ್ಲೆಕ್ಸ್'ಗಳಿಗೆ ಸಿದ್ದು ಸರ್ಕಾರ ಶಾಕ್: ಚಿತ್ರಪ್ರೇಮಿಗಳಿಗೆ 'ಸಿನಿಮಾ ಭಾಗ್ಯ'

    By Bharath Kumar
    |

    'ಮಲ್ಟಿಫ್ಲೆಕ್ಸ್'ಗಳ ಅಟ್ಟಹಾಸಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬ್ರೇಕ್ ಹಾಕಿದೆ. 2017ನೇ ಸಾಲಿನ ರಾಜ್ಯ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡ ಚಿತ್ರಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿದ್ದಾರೆ.[ಕನ್ನಡ ಚಲನಚಿತ್ರ ನೋಡಬಯಸುವವರ ಶ್ಯಾವಿಗೆ ಪಾಯಸ]

    ರಾಜ್ಯದ 'ಮಲ್ಟಿಫ್ಲೆಕ್ಸ್'ಗಳಲ್ಲಿ ಏಕ ನೀತಿಯ ಪ್ರವೇಶ ದರ ನೀತಿಯನ್ನ ಜಾರಿಗೊಳಿಸಿದ್ದು, ಇನ್ಮುಂದೆ ತಮಗಿಷ್ಟ ಬಂದಂತೆ ಹಣ ವಸೂಲಿ ಮಾಡುವಂತಿಲ್ಲ. ಹೀಗಾಗಿ, ನಿರಾಳವಾಗಿ ಚಿತ್ರಪ್ರೇಮಿಗಳು ಮಲ್ಟಿಫ್ಲೆಕ್ಸ್ ನಲ್ಲಿ ಕೂತು ಸಿನಿಮಾ ನೋಡಬಹುದು. ಇವುಗಳ ಜೊತೆಗೆ ರಾಜ್ಯ ಬಜೆಟ್ ಮಂಡನೆಯಲ್ಲಿ ಕನ್ನಡ ಚಿತ್ರರಂಗಕ್ಕೆ ನೀಡಿರುವ ಮತ್ತಷ್ಟು ಉಡುಗೊರೆಯನ್ನ ಮುಂದೆ ಓದಿ....

    'ಮಲ್ಟಿಫ್ಲೆಕ್ಸ್'ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್!

    'ಮಲ್ಟಿಫ್ಲೆಕ್ಸ್'ಗಳಲ್ಲಿ ಟಿಕೆಟ್ ದರ 200 ರೂ ಫಿಕ್ಸ್!

    ರಾಜ್ಯದ ಎಲ್ಲ 'ಮಲ್ಟಿಪ್ಲೆಕ್ಸ್'ಗಳಲ್ಲೂ ಏಕರೀತಿಯ ಪ್ರವೇಶದರ ನೀತಿಗೆ ರಾಜ್ಯ ಸರ್ಕಾರ ಬಜೆಟ್ ಮಂಡನೆಯಲ್ಲಿ ಆದೇಶ ನೀಡಿದೆ. ಹೀಗಾಗಿ, ಇನ್ಮುಂದೆ ಯಾವುದೇ ಚಿತ್ರಕ್ಕಾಗಲಿ, ಯಾವುದೇ ಚಿತ್ರಮಂದಿರದಲ್ಲಾಗಲಿ 200 ರೂಗಳಿಗಿಂತ ಹೆಚ್ಚು ಹಣವನ್ನ ಪಡೆಯುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.

    ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ!

    ಕನ್ನಡ ಚಿತ್ರ ಪ್ರದರ್ಶನ ಕಡ್ಡಾಯ!

    'ಮಲ್ಟಿಫ್ಲೆಕ್ಸ್'ಗಳಲ್ಲಿ ಕನ್ನಡ ಚಿತ್ರಗಳಿಗೆ ಪ್ರದರ್ಶನವಾಗುತ್ತಿಲ್ಲ ಎಂಬ ಆರೋಪ ಹಿನ್ನಲೆ, ಕನ್ನಡ ಚಿತ್ರಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಿ ದಿನ ಒಂದು ಪರದೆಯಲ್ಲಿ ಮಧ್ಯಾಹ್ನ 1.30 ರಿಂದ 7.30 ರವರೆಗಿನ ಪ್ರಮುಖ ಅವಧಿಯಲ್ಲಿ ಕನ್ನಡ ಚಲನಚಿತ್ರ ಪ್ರದರ್ಶನ ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.

    ಕಾರ್ಮಿಕ ನಿಧಿಗೆ ಒತ್ತು!

    ಕಾರ್ಮಿಕ ನಿಧಿಗೆ ಒತ್ತು!

    ಚಲನಚಿತ್ರೋದ್ಯಮದ ಕಾರ್ಮಿಕರು, ತಂತ್ರಜ್ಞರು ಹಾಗೂ ಕಲಾವಿದರ ಆರೋಗ್ಯ ಸೇವೆಗಾಗಿ ಸ್ಥಾಪಿಸಿರುವ ದತ್ತಿ ನಿಧಿಯ ಮೊತ್ತ 1 ಕೋಟಿ ರು.ಗಳಿಂದ 10 ಕೋಟಿ ರು.ಗಳಿಗೆ ಹೆಚ್ಚಳ ಮಾಡಲಾಗಿದೆ.

    ಫಿಲ್ಮ್ ಸಿಟಿ ಆರಂಭಕ್ಕೆ ಸಿದ್ದತೆ!

    ಫಿಲ್ಮ್ ಸಿಟಿ ಆರಂಭಕ್ಕೆ ಸಿದ್ದತೆ!

    ಇನ್ನೂ ಮೈಸೂರು ಬಳಿಯ ಹಿಮ್ಮಾವಿನಲ್ಲಿ ಕನ್ನಡ ಚಿತ್ರೋದ್ಯಮದ ಅಭಿವೃದ್ಧಿಗಾಗಿ ಫಿಲ್ಮ್ ಸಿಟಿ ನಿರ್ಮಿಸುವುದಾಗಿ ಸಿದ್ದರಾಮಯ್ಯ ರಾಜ್ಯ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.

    English summary
    In an excellent move by Karnataka Government, the ticket prices in Karnataka multiplexes have been capped at Rs 200. The official request to cap ticket prices was made by Karnataka Film Chamber of Commerce president Sa Ra Govindu and Karnataka Chalanachitra Academy chairman Rajendra Singh Babu to the government during the pre budget meeting recently.
    Wednesday, March 15, 2017, 17:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X