ಕನ್ನಡ ಡೈರೆಕ್ಟರ್ ವಿರುದ್ಧ ವಂಚನೆ ಆರೋಪ ಮಾಡಿದ ಐಟಂ ಡ್ಯಾನ್ಸರ್
ಮುಂಬೈ ಮೂಲದ ಐಟಂ ಡ್ಯಾನ್ಸರ್ ಶರಣ್ಯಾ ಸ್ಯಾಂಡಲ್ ವುಡ್ ಡೈರೆಕ್ಟರ್ ಮೆಲ್ವಿನ್ ಅವರ ವಿರುದ್ಧ ವಂಚನೆ ಆರೋಪದಡಿ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲದೆ ನನ್ನನ್ನು ಲೈಂಗಿಕವಾಗಿ ಬಳಸಿಕೊಳ್ಳಲು ನಿರ್ದೇಶಕ ಮೆಲ್ವಿನ್ ಮುಂದಾಗಿದ್ದರು ಎಂದು ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.
ಟಿವಿ ವಾಹಿನಿಯ ಜೊತೆ ಮಾತನಾಡಿದ ಶರಣ್ಯಾ '' 'ಹುತ್ತದ ಸುತ್ತಾ' ಚಿತ್ರದ ಐಟಂ ಹಾಡಿಗೆ ಹೆಜ್ಜೆ ಹಾಕಲು 1 ದಿನಕ್ಕೆ 15000ರೂ ಸಂಭಾವನೆ ನೀಡುವುದಾಗಿ ಒಪ್ಪಿದ್ದರು. ಆದ್ರೆ, ನನಗೆ ಹಣ ಕೊಡದೆ ಮೋಸ ಮಾಡಿದ್ದಾರೆ. ಇದರ ಜೊತೆಗೆ ಫಿಲ್ಮಂ ಬಗ್ಗೆ ಮಾತನಾಡುವುದಾಗಿ ಕರೆದು ಅಸಹ್ಯವಾಗಿ ವರ್ತಿಸುತ್ತಾರೆ ಹಾಗೂ ಸೆಕ್ಸ್‌ಬಗ್ಗೆ ಮಾತನಾಡುತ್ತಾರೆ ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಡೈರೆಕ್ಟರ್ ಮೆಲ್ವಿನ ''ಶರಣ್ಯಾ ಬೆಂಗಳೂರಿಗೆ ಬಂದಾಗ ಅವರಿಗೆ ವಾಸಿಸಲು ಲಾಡ್ಜ್ ಬದಲು, ಹೆಣ್ಣುಮಕ್ಕಳು ವಾಸಿಸುವ ಮನೆಯೊಂದರಲ್ಲಿ ವಾಸ್ತವ್ಯ ನೀಡಲಾಗಿತ್ತು. ಅವರ ಎಲ್ಲಾ ಖರ್ಚುಗಳನ್ನ ನಾವೇ ನೋಡಿಕೊಂಡಿದ್ದೇವೆ. ಆದರೆ ಶೂಟಿಂಗ್ ವೇಳೆ ಅವರು ಜ್ವರದಿಂದ ಬಳಲುತ್ತಿದ್ದರು. ಹೀಗಾಗಿ, ಬೇರೆ ಐಟಂ ಡ್ಯಾನ್ಸರ್ ಜೊತೆ ಶೂಟಿಂಗ್ ಮುಗಿಸಿದೆವು. ಈ ವೇಳೆ ಮುಂಬೈಯಿಂದ ಬಂದಿದ್ದಕ್ಕಾಗಿ 3000 ಖರ್ಚು ವೆಚ್ಚವನ್ನ ಕೊಟ್ಟು ಕಳುಹಿಸಿದ್ದೇವೆ. ಆದರೆ ಶರಣ್ಯಾ ಪೂರ್ತಿ 15 ಸಾವಿರ ಹಣ ನೀಡುವಂತೆ ಪೀಡಿಸುತ್ತಿದ್ದಳು. ಡ್ಯಾನ್ಸ್ ಮಾಡದೇ ಹೇಗೆ ಹಣ ನೀಡುವುದು ಎಂದು ಕೇಳಿದ್ದೇವು ಅಷ್ಟೇ ಎಂದು ಪ್ರತಿಕ್ರಯಿಸಿದ್ದಾರೆ.

ಇದೆಲ್ಲ ಸುಳ್ಳು. ನನ್ನ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡ್ತಿದ್ದಾರೆ. ನಾನು ಮಾನನಷ್ಟ ಮೊಕದ್ದಮೆ ಹಾಕುತ್ತೇನೆ ಶರಣ್ಯಾ ವಿರುದ್ಧ 'ಹುತ್ತದ ಸುತ್ತಾ' ಚಿತ್ರದ ಡೈರೆಕ್ಟರ್ ಮೆಲ್ವಿನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click it and Unblock the Notifications











