»   » ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ

ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ

Posted By:
Subscribe to Filmibeat Kannada
ದೀಪಿಕಾ ಪಡುಕೋಣೆ, ಬಾಲಿವುಡ್ ನಟಿಗೆ ಪದ್ಮಾವತಿ ಸಿನಿಮಾ ವಿಚಾರವಾಗಿ ಜೀವ ಬೆದರಿಕೆ | FIlmibeat Kannada

'ಪದ್ಮಾವತಿ' ಸಿನಿಮಾ ಬಿಡುಗಡೆಯಾದ್ರೆ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇವೆ ಎಂದು ರಜಪೂತ ಕರಣಿ ಸೇನೆ ಸದಸ್ಯರು ಬೆದರಿಕೆಯೊಡ್ಡಿದ ಬೆನ್ನಲ್ಲೆ ಈಗ ಉತ್ತರ ಪ್ರದೇಶದ ಕ್ಷತ್ರಿಯ ಸಮಾಜ ದೀಪಿಕಾ ಹಾಗೂ ಸಂಜಯ್ ಲೀಲಾ ಬನ್ಸಾಲಿ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ಬಹುಮಾನ ಘೋಷಿಸಿದೆ.

'ಪದ್ಮಾವತಿ' ವಿವಾದಕ್ಕೆ ಸಂಬಂಧಪಟ್ಟಂತೆ ಕ್ಷತ್ರಿಯ ಸಮಾಜದ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಠಾಕೂರ್ ಅಭಿಷೇಕ್ ಸೋಮ್, ದೀಪಿಕಾ ಹಾಗೂ ಸಂಜಯ್ ರುಂಡ ಕತ್ತರಿಸುವವರಿಗೆ 5 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಅನಾಹುತವಾಗುವ ಮೊದಲು ದೇಶ ಬಿಟ್ಟು ತೆರಳುವಂತೆ ದೀಪಿಕಾಗೆ ಬೆದರಿಕೆ ಹಾಕಿದ್ದಾರೆ.

'ಪದ್ಮಾವತಿ' ರಿಲೀಸ್ ಆದ್ರೆ ದೀಪಿಕಾ ಮೂಗು ಕತ್ತರಿಸುತ್ತೇವೆ: ರಜಪೂತರು ಎಚ್ಚರಿಕೆ.!

Mumbai Police Increase Deepika Padukone's Security

ಈ ಹಿನ್ನೆಲೆಯಲ್ಲಿ ನಟಿ ದೀಪಿಕಾ ಅವರಿಗೆ ಮುಂಬೈನ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ದೀಪಿಕಾ ಹಾಗೂ ನಿರ್ದೇಶಕರ ಮನೆ ಹಾಗೂ ಕಛೇರಿಗಳಿಗೆ ಪೊಲೀಸ್ ಭದ್ರತೆ ನೀಡಿದ್ದಾರೆ.

ಪದ್ಮಾವತಿ 'ದೀಪಿಕಾ' ರಕ್ಷೆಗೆ ನಿಂತ ನಟ ಪ್ರಕಾಶ್ ರೈ

'ಪದ್ಮಾವತಿ' ಚಿತ್ರದಲ್ಲಿ ರಜಪೂತರ ರಾಣಿ ಪದ್ಮಾವತಿ ಬಗ್ಗೆ ಅವಹೇಳನ ಮಾಡಲಾಗಿದೆ ಎಂದು ಆರೋಪಿಸಿ ಡಿಸೆಂಬರ್‌ 1ಕ್ಕೆ ಭಾರತ್‌ ಬಂದ್‌ಗೆ ಕರೆ ನೀಡಿದ್ದಾರೆ.

English summary
Mumbai Police Increase Deepika Padukone's Security After Rajput Karni Sena's Threat! ರಜಪೂತ್ ಕರಣಿ ಸೇನೆಯಿಂದ ಬೆದರಿಕೆ ಬಂದ ನಂತರ ನಟಿ ದೀಪಿಕಾ ಪಡುಕೋಣೆಗೆ ಭದ್ರತೆ ಹೆಚ್ಚಿಸಲಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada