ಕಲರ್ ಫುಲ್ 'ಮುಂದಿನ ನಿಲ್ದಾಣ'ಕ್ಕೆ ಪುನೀತ್ ಮೆಚ್ಚುಗೆ
''ಇನ್ನೂನು ಬೇಕಾಗಿದೆ... ಒಲವು ಇನ್ನೂನು ಬೇಕಾಗಿದೆ..'' ಮುಂದಿನ ನಿಲ್ದಾಣ' ಸಿನಿಮಾದ ಈ ಹಾಡು ದೊಡ್ಡ ಮಟ್ಟದ ಹಿಟ್ ಆಗಿದೆ. ಇದೀಗ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ.
ಸಿನಿಮಾ ಹೊಸತನದಿಂದ ಕೂಡಿದೆ. ಮೇಕಿಂಗ್ ತುಂಬ ಫ್ರೆಶ್ ಆಗಿದೆ. ಪ್ರತಿ ಶಾಟ್ ತುಂಬ ಚೆನ್ನಾಗಿ ಕಾಣುತ್ತಿದೆ. ಲವ್ ಸ್ಟೋರಿ ಸಿನಿಮಾ ಎನ್ನುವುದು ಟ್ರೇಲರ್ ಮೂಲಕ ತಿಳಿಯುತ್ತಿದೆ. ಯೂಟ್ಯೂಬ್ ನಲ್ಲಿ ಟ್ರೇಲರ್ 2 ಲಕ್ಷಕ್ಕೂ ಅಧಿಕ ಹಿಟ್ಸ್ ಪಡೆದುಕೊಂಡಿದೆ. ನಟ ಪುನೀತ್ ರಾಜ್ ಕುಮಾರ್ ಟ್ರೇಲರ್ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಪ್ರವೀಣ್ ತೇಜ್, ರಾಧಿಕಾ ನಾರಾಯಣ್ ಹಾಗೂ ಅನನ್ಯ ಕಶ್ಯಪ್ ಸಿನಿಮಾದಲ್ಲಿ ನಟಿಸಿದ್ದಾರೆ. ಹಿರಿಯ ನಟ ದತ್ತಣ್ಣ ಇವರಿಗೆ ಸಾಥ್ ನೀಡಿದ್ದಾರೆ. ಟ್ರೇಲರ್ ಭಾವನಾತ್ಮಕ ದೃಶ್ಯಗಳಿಂದ ಕೂಡಿದೆ. ಸುಂದರ ತಾಣಗಳನ್ನು ಇನ್ನಷ್ಟು ಸುಂದರವಾಗಿ ತೋರಿಸಿದ್ದಾರೆ.

ನಟಿ ರಾಧಿಕಾ ನಾರಾಯಣ್ ಈ ಹಿಂದಿನ ಸಿನಿಮಾಗಳಿಗಿಂತ ಸ್ಟೈಲಿಷ್ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಹೇರ್ ಸ್ಟೈಲ್, ಡ್ರೆಸ್ ಎಲ್ಲವೂ ಅಂದ ಹೆಚ್ಚು ಮಾಡಿದೆ. ಟ್ರೇಲರ್ ನಲ್ಲಿ ಇದೊಂದು ತ್ರಿಕೋನ ಪ್ರೇಮಕಥೆ ಎನ್ನುವ ಸುಳಿವು ಸಿಗುತ್ತಿದೆ.
ವಿನಯ್ ಭಾರಧ್ವಜ್ ಕಥೆ, ಚಿತ್ರಕತೆ ಬರೆದು, ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಅಭಿಮನ್ಯು ಸದಾನಂದನ್ ಕ್ಯಾಮರಾ ವರ್ಕ್ ಸೊಗಸಾಗಿದೆ. ವಾಸುಕಿ ವೈಭವ್ ಸೇರಿದಂತೆ ಆರು ಸಂಗೀತ ನಿರ್ದೇಶಕರು ಸಿನಿಮಾಗೆ ಕೆಲಸ ಮಾಡಿದ್ದಾರೆ. ಇದೇ ತಿಂಗಳು ಸಿನಿಮಾ ಬಿಡುಗಡೆ ಆಗುತ್ತಿದೆ.


Click it and Unblock the Notifications











