ಒಂಟೆ ಸವಾರಿ ಮಾಡಿ ಗಾಯ ಮಾಡಿಕೊಂಡ 'ಮಳೆ 2' ಹುಡುಗಿ
ನಿರ್ದೇಶಕ ಶಶಾಂಕ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜುಗಲ್ ಬಂದಿಯಲ್ಲಿ ಮೂಡಿಬರುತ್ತಿರುವ 'ಮುಂಗಾರು ಮಳೆ 2' ನಾಯಕಿ ನೇಹಾ ಶೆಟ್ಟಿ ಒಂಟೆ ಸವಾರಿ ಮಾಡಲು ಹೋಗಿ ಬಿದ್ದು ಗಾಯ ಮಾಡಿಕೊಂಡಿದ್ದಾರೆ.
ಹೌದು 'ಮುಂಗಾರು ಮಳೆ 2' ಚಿತ್ರತಂಡ, ಹಾಡುಗಳ ಚಿತ್ರೀಕರಣಕ್ಕಾಗಿ ರಾಜಸ್ಥಾನದಲ್ಲಿ ಬೀಡು ಬಿಟ್ಟಿದ್ದು, ಈ ಸಂದರ್ಭದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ನೇಹಾ ಶೆಟ್ಟಿ ಅವರು ಒಂಟೆ ಸವಾರಿ ಮಾಡಿದ್ದಾರೆ.

ಆದರೆ ಆಚಾನಕ್ಕಾಗಿ ನಟಿ ನೇಹಾ ಅವರು ಕೆಳಗೆ ಬಿದ್ದಿರುವುದರಿಂದ ಗಾಯಗೊಂಡಿದ್ದಾರೆ. ಕಳೆದ ಗುರುವಾರ (ಡಿಸೆಂಬರ್ 3) ರಾಜಸ್ಥಾನದ ಮರುಭೂಮಿಯಲ್ಲಿ ಹಾಡಿನ ಚಿತ್ರೀಕರಣ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.[ಮುಂಗಾರು ಮಳೆಯಲ್ಲಿ ಗಣೇಶ್ ಜೊತೆಯಾದ ಕುಡ್ಲದ ಬಾಲೆ]
'ಗಣೇಶ್ ಮತ್ತು ನೇಹಾ ಅವರನ್ನು ಹೊತ್ತ ಒಂಟೆ ವೇಗವಾಗಿ ನಡೆಯುವಾಗ ನಟಿ ನೇಹಾ ಶೆಟ್ಟಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಗಣೇಶ್ ಕೂಡ ಬಿದ್ದಿದ್ದಾರೆ. ಆದರೆ ಅವರಿಗೆ ಯಾವುದೇ ರೀತಿಯ ಪೆಟ್ಟಾಗಲಿಲ್ಲ'.
ನಟಿ ನೇಹಾ ಅವರಿಗೆ ಗಾಯವಾಗಿದೆ. ಆದರೆ ವಿಷ್ಯಾ ಏನಪ್ಪಾ ಅಂದ್ರೆ ಶೂಟಿಂಗ್ ಎಲ್ಲಾ ಮುಗಿದ ನಂತರ ಈ ಘಟನೆ ನಡೆದಿರುವುದರಿಂದ ನಟಿಗಾದ ಗಾಯದಿಂದ ಸಿನಿಮಾ ಶೂಟಿಂಗ್ ಗೆ ಯಾವುದೇ ರೀತಿಯ ತೊಂದರೆ ಉಂಟಾಗಿಲ್ಲ ಎಂದು ನಿರ್ದೇಶಕ ಶಶಾಂಕ್ ಅವರು ತಿಳಿಸಿದ್ದಾರೆ.

ಚಿತ್ರೀಕರಣದ ಸ್ಥಳದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ನಟಿ ನೇಹಾ ಅವರನ್ನು ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ. ಚೇತರಿಸಿಕೊಂಡಿರುವ ನಟಿ ಸದ್ಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದು, ಮುಂದಿನ ವಾರ ಚಿತ್ರೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿಗೆ ಒಂಟೆ ಮೇಲೆ ಹತ್ತಿದ್ದ ನಟಿ ಇನ್ನು ಮುಂದೆ ಎಂದಿಗೂ ಒಂಟೆ ಮೇಲೆ ಪ್ರಯಾಣ ಮಾಡುವುದಿಲ್ಲ ಎಂದು ಶಪಥ ಮಾಡಿದ್ದಾರಂತೆ.
ಅಂದಹಾಗೆ ಈ ಸಿನಿಮಾ ಶುರುವಾಗುವಾಗ 'ಈ ಸಿನಿಮಾದ ಚಿತ್ರೀಕರಣದ ವೇಳೆ ಯಾವ ಪ್ರಾಣಿಗೂ ಯಾವುದೇ ರೀತಿಯ ಹಾನಿಯಾಗಿಲ್ಲ, ಆದರೆ ಚಿತ್ರದ ನಟಿಗೆ ಗಾಯ ಆಗಿದೆ ಎಂದು ಬದಲಾಯಿಸಿದರೆ ಹೇಗಿರಬಹುದು ಊಹಿಸಿ. ಸಖತ್ ಮಜಾ ಇರಬಹುದು ಅಲ್ವಾ? ನೀವೇನಂತೀರಾ?.


Click it and Unblock the Notifications











