ಮುಗುಳುನಗೆ ಸೆಟ್‌ ನಲ್ಲಿ 'ಮುಂಗಾರು ಮಳೆ' ದಶಕದ ಸೆಲೆಬ್ರೇಷನ್

By Suneel

ಕಾಮಿಡಿ ಸ್ಟಾರ್ ಗಣೇಶ್‌ ಗೆ ಗೋಲ್ಡೆನ್ ಸ್ಟಾರ್ ಹೆಸರು ತಂದು ಕೊಟ್ಟಿದ್ದು ಹಾಗೂ ಕನ್ನಡ ಚಲನಚಿತ್ರಗಳಿಗೆ ವೇಗ ತಂದುಕೊಟ್ಟ ಕ್ರೆಡಿಟ್ 'ಮುಂಗಾರು ಮಳೆ' ಸಿನಿಮಾಗೆ ಸಲ್ಲುತ್ತದೆ. ಈ ವಿಷಯ ಈಗ ಏಕೆ ಹೇಳ್ತಿದ್ದೀವಿ ಅಂದ್ರೆ ಡಿಸೆಂಬರ್ 29 2016 ಕ್ಕೆ ಸರಿಯಾಗಿ 'ಮುಂಗಾರು ಮಳೆ' ಸಿನಿಮಾ ಬಂದು ದಶಕ ಕಳೆಯಿತು. ಈ ಸಿನಿಮಾದ ಯಶಸ್ಸಿನಿಂದಲೇ ಹಲವರು ಸ್ಟಾರ್ ಆದದ್ದು ಇನ್ನೂ ವಿಶೇಷತೆ.[ಮುಂಗಾರು ಮಳೆ ಫೋಟೋ ಗ್ಯಾಲರಿ]

ಹತ್ತು ವರ್ಷಗಳ ಹಿಂದಿನ ಮುಂಗಾರು ಮಳೆಯ ಎಫೆಕ್ಟ್‌ ಇಂದಿಗೂ ಸೋನೆ ರೂಪದಲ್ಲಿ ಕನ್ನಡ ಚಿತ್ರರಂಗ ಮತ್ತು ಸಿನಿಮಾದಲ್ಲಿ ಅಭಿನಯಿಸಿದ ಎಲ್ಲರನ್ನೂ ಕಾಡುತ್ತಿದೆ. 'ಮುಂಗಾರು ಮಳೆ' ಸಿನಿಮಾ ರಿಲೀಸ್ ಆಗಿ 10 ವರ್ಷ ಆದ ಸಂತೋಷವನ್ನು ಇತ್ತೀಚೆಗೆ ತಾನೆ ಗಣೇಶ್‌ ರವರು ಮುಗುಳುನಗೆ ಚಿತ್ರ ಸೆಟ್‌ ನಲ್ಲಿ ಸಂಭ್ರಮದಿಂದ ಆಚರಣೆ ಮಾಡಿಕೊಂಡರು. ಗಣೇಶ್ ರವರು ಈ ಸಂಭ್ರಮಾಚರಣೆ ಮತ್ತು ಮುಂಗಾರು ಮಳೆ ಸಿನಿಮಾ ಶೂಟಿಂಗ್ ದೃಶ್ಯಗಳನ್ನು 10 ವರ್ಷದ ನೆನಪಿನೊಂದಿಗೆ ಫೇಸ್‌ಬುಕ್‌ ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಗಣೇಶ್ ಅಪ್‌ಲೋಡ್ ಮಾಡಿದ ಫೋಟೋಗಳು ಮತ್ತು ಮುಂಗಾರು ಮಳೆ ಬ್ರೇಕ್ ಮಾಡಿದ ರೆಕಾರ್ಡ್‌ ಗಳ ಮಾಹಿತಿ ಇಲ್ಲಿದೆ ನೋಡಿ.[ವಿಮರ್ಶೆ: 'ಮುಂಗಾರು ಮಳೆ' ಅಮರ, 'ಮುಂಗಾರು ಮಳೆ-2' ಒಂಥರಾ.!]

'ಮುಂಗಾರು ಮಳೆ' ಶೂಟಿಂಗ್ ದೃಶ್ಯ

'ಮುಂಗಾರು ಮಳೆ' ಶೂಟಿಂಗ್ ದೃಶ್ಯ

'ಮುಂಗಾರು ಮಳೆ' ಸಿನಿಮಾ ಶೂಟಿಂಗ್ ವೇಳೆಯಲ್ಲಿ ಯೋಗರಾಜ್‌ ಭಟ್ ರವರು ಸೀನ್ ಹೇಳುವ ವೇಳೆ ಡಯಲಾಗ್‌ ಗಳನ್ನು ಎಂಜಾಯ್‌ ಮಾಡುತ್ತ ಕೇಳುತ್ತಿರುವ ಗೋಲ್ಡೆನ್ ಸ್ಟಾರ್ ಗಣೇಶ್. ಈ ಫೋಟೋಗಳನ್ನು ಗಣೇಶ್ ಫೇಸ್‌ಬುಕ್‌ ನಲ್ಲಿ ಪೋಸ್ಟ್‌ ಮಾಡಿ ಈ ರೀತಿಯಲ್ಲಿಯೇ ಬರೆದುಕೊಂಡಿದ್ದಾರೆ.

'ಮುಂಗಾರು ಮಳೆ' ದಶಕದ ಸಂಭ್ರಮಾಚರಣೆ

'ಮುಂಗಾರು ಮಳೆ' ದಶಕದ ಸಂಭ್ರಮಾಚರಣೆ

'ಮುಂಗಾರು ಮಳೆ' ದಶಕದ ಸಂಭ್ರಮವನ್ನು ಇತ್ತೀಚೆಗೆ ಗಣೇಶ್ ಮತ್ತು ಯೋಗರಾಜ್‌ ಭಟ್ ರವರು 'ಮುಗುಳುನಗೆ' ಸೆಟ್ ನಲ್ಲಿ ಆಚರಣೆ ಮಾಡುತ್ತಿರುವುದು.

ಮುಗುಳುನಗೆ ಸೆಟ್‌ ನಲ್ಲಿ ಎಲ್ಲರೂ ನಕ್ಕಿದ್ದು ಹೀಗೆ

ಮುಗುಳುನಗೆ ಸೆಟ್‌ ನಲ್ಲಿ ಎಲ್ಲರೂ ನಕ್ಕಿದ್ದು ಹೀಗೆ

'ಮುಗುಳುನಗೆ' ಸೆಟ್‌ ನಲ್ಲಿ 'ಮುಂಗಾರು ಮಳೆ' ದಶಕದ ಸಂಭ್ರಮ ಆಚರಣೆಗೆ ಕೇಕ್ ಕತ್ತರಿಸುವ ವೇಳೆ ಫೋಟೋ ತೆಗೆಯಲು ಇಲ್ಲಿ ನೋಡಿ ಸ್ವಲ್ಪ ಮುಗುಳುನಗೆ ನೀಡಿ ಎಂದಿದ್ದಕ್ಕೆ ಎಲ್ಲರೂ ನಕ್ಕಿದ್ದು ಹೀಗೆ.

'ಮುಂಗಾರು ಮಳೆ' ದಶಕದ ಸಂಭ್ರಮದಲ್ಲಿ ಸೆಲ್ಫಿ

'ಮುಂಗಾರು ಮಳೆ' ದಶಕದ ಸಂಭ್ರಮದಲ್ಲಿ ಸೆಲ್ಫಿ

ಗಣೇಶ್ 'ಮುಗುಳುನಗೆ' ಸೆಟ್‌ ನಲ್ಲಿ 'ಮುಂಗಾರು ಮಳೆ' ದಶಕದ ಸಂಭ್ರಮ ಆಚರಣೆ ನಂತರ ಎಲ್ಲರೊಂದಿಗೆ ಗಣೇಶ್ ಸೆಲ್ಫಿ ತೆಗೆದುಕೊಂಡ ಫೋಟೋ.

ಮುಂಗಾರು ಮಳೆ ರಭಸಕ್ಕೆ ಸ್ಟಾರ್ ನಿರ್ದೇಶಕರಾದ ಯೋಗರಾಜ್‌ ಭಟ್

ಮುಂಗಾರು ಮಳೆ ರಭಸಕ್ಕೆ ಸ್ಟಾರ್ ನಿರ್ದೇಶಕರಾದ ಯೋಗರಾಜ್‌ ಭಟ್

2006 ರ ಡಿಸೆಂಬರ್ 29 ರಂದು ಥಿಯೇಟರ್‌ ಗಳಲ್ಲಿ ಮುಂಗಾರು ಮಳೆ ಸುರಿಯಲು ಆರಂಭಿಸಿತು. ಈ ಮಳೆಯ ರಭಸಕ್ಕೆ ಹಲವು ಹೊಸ ಪ್ರತಿಭೆಗಳು ಸ್ಯಾಂಡಲ್‌ ವುಡ್‌ ಗೆ ಪರಿಚಯವಾದವು. 2 ಚಿತ್ರಗಳನ್ನು ನಿರ್ದೇಶಿಸಿಯೂ ಯಶಸ್ಸು ಕಾಣದ ಯೋಗರಾಜ್‌ ಭಟ್ ಮುಂಗಾರು ಮಳೆ ರಭಸಕ್ಕೆ ಸ್ಟಾರ್ ನಿರ್ದೇಶಕರಾದರು. ಗಣೇಶ್ ಗೋಲ್ಡನ್ ಸ್ಟಾರ್ ಆದರು. ಈಗ ಈ ದಶಕದ ಸಂಭ್ರಮಾಚರಣೆಯ ಸಮಯದಲ್ಲಿ ಸ್ಟಾರ್ ನಿರ್ದೇಶಕ ಮತ್ತು ಗೋಲ್ಡನ್ ಸ್ಟಾರ್ ಒಬ್ಬರಿಗೊಬ್ಬರು ಕೇಕ್‌ ತಿನಿಸಿಕೊಳ್ಳುತ್ತಿದ್ದಾರೆ.

'ಮುಂಗಾರು ಮಳೆ' ಬ್ರೇಕ್ ಮಾಡಿದ ರೆಕಾರ್ಡ್‌

'ಮುಂಗಾರು ಮಳೆ' ಬ್ರೇಕ್ ಮಾಡಿದ ರೆಕಾರ್ಡ್‌

'ಮುಂಗಾರು ಮಳೆ' ಸಿನಿಮಾ 2006 ಡಿಸೆಂಬರ್ 29 ರಂದು ರಿಲೀಸ್ ಆಯಿತು. ಕೇವಲ 70 ಲಕ್ಷ ಬಜೆಟ್‌ ನಲ್ಲಿ ನಿರ್ಮಾಣವಾದ ಈ ಸಿನಿಮಾ 300 ದಿನಗಳಲ್ಲಿ ಬಾಕ್ಸ್‌ ಆಫೀಸ್‌ ಗೆ ರೂ.50 ಕೋಟಿ ಗಳಿಸಿಕೊಟ್ಟಿತ್ತು.

ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚು ದಿನ ರನ್ ಆದ ಸಿನಿಮಾ

ಮಲ್ಟಿಪ್ಲೆಕ್ಸ್ ಗಳಲ್ಲಿ ಹೆಚ್ಚು ದಿನ ರನ್ ಆದ ಸಿನಿಮಾ

ಕನ್ನಡ ಚಿತ್ರ ರಂಗದಲ್ಲಿ ಅತಿ ಹೆಚ್ಚು ದಿನ ಮಲ್ಟಿಪ್ಲೆಕ್ಸ್‌ ಗಳಲ್ಲಿ ರನ್‌ ಆದ ಎಲ್ಲಾ ಚಿತ್ರಗಳ ರೆಕಾರ್ಡ್‌ ಅನ್ನು 'ಮುಂಗಾರು ಮಳೆ' ಬ್ರೇಕ್‌ ಮಾಡಿತ್ತು. 'ಮುಂಗಾರು ಮಳೆ' ಸಿನಿಮಾ ಒಟ್ಟಾರೆ 865 ದಿನ ಮಲ್ಟಿಪ್ಲೆಕ್ಸ್ ಥಿಯೇಟರ್‌ಗಳನ್ನು ಶೋ ಆಗುವ ಮುಖಾಂತರ 75 ಕೋಟಿ ಹಣ ಗಳಿಸಿಕೊಟ್ಟಿತು.

'ಮುಂಗಾರು ಮಳೆ' ಚಿತ್ರದಲ್ಲಿ ನಟಿಸಿದ್ದವರು ಇವರು..!

'ಮುಂಗಾರು ಮಳೆ' ಚಿತ್ರದಲ್ಲಿ ನಟಿಸಿದ್ದವರು ಇವರು..!

'ಮುಂಗಾರು ಮಳೆ' ಚಿತ್ರದಲ್ಲಿ ಗಣೇಶ್, ಪೂಜಾ ಗಾಂಧಿ, ಅನಂತನಾಗ್, ಸುಧಾ ಬೆಲ್ವಾಡಿ, ಪದ್ಮಜಾ ರಾವ್, ನಿನಾಸಂ ಅಶ್ವಥ್, ದಿಗಂತ್, ಜೈ ಜಗದೀಶ್, ಸಂಚಿತಾ ಶೆಟ್ಟಿ ರವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.

ಮುಂಗಾರು ಮಳೆಗೆ 10 ಪ್ರಶಸ್ತಿಗಳು

ಮುಂಗಾರು ಮಳೆಗೆ 10 ಪ್ರಶಸ್ತಿಗಳು

ಕರ್ನಾಟಕ ರಾಜ್ಯ ಪ್ರಶಸ್ತಿ ಮತ್ತು 61 ನೇ ಫಿಲ್ಮ್‌ಫೇರ್ ಅವಾರ್ಡ್ ಸೌತ್ ವತಿಯಿಂದ ಮುಂಗಾರು ಮಳೆ ಚಿತ್ರ ಒಟ್ಟಾರೆ 10 ಪ್ರಶಸ್ತಿಗಳನ್ನು ನಿರ್ದೇಶಕ, ನಟ, ನಟಿ, ಹಾಡುಗಾರರು, ಸಾಹಿತ್ಯ, ಸಂಭಾಷಣೆ ರಚನಾಕಾರರಿಗೆ ತಂದುಕೊಟ್ಟಿದೆ.

More from Filmibeat

English summary
Mungaru Male is a 2006 Indian Kannada-language musical romance film co-written and directed by Yogaraj Bhat, and produced by E. Krishnappa. It stars Ganesh, Pooja Gandhi and Anant Nag in lead roles. Mungaru Male Tenth Aniversary celebrated in the set of Mugulunage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X