ಶ್ರುತಿ ಹರಿಹರನ್ ವಿರುದ್ಧ ಸಿಡಿದೆದ್ದ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ
Metoo ಅಭಿಯಾನದ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದು, ಖ್ಯಾತ ನಟರ ಹೆಸರು ಅಂಟಿಕೊಳ್ಳುವ ಸೂಚನೆ ಸಿಕ್ಕಿದೆ. ಸದ್ಯ, ಸ್ಟಾರ್ ನಟಿ ಶ್ರುತಿ ಹರಿಹರನ್ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಅವರ ವಿರುದ್ಧ ಲೈಂಗಿಕ ಕಿರುಕುಳದ ಬಾಂಬ್ ಸಿಡಿಸಿದ್ದಾರೆ.
'ವಿಸ್ಮಯ' ಸಿನಿಮಾ ಮಾಡಬೇಕಾದರೇ, ಅರ್ಜುನ್ ಸರ್ಜಾ ಅವರು ತನ್ನ ಬಳಿ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪ ಮಾಡಿದ್ದಾರೆ. ಚಿತ್ರೀಕರಣ ವೇಳೆ ತಬ್ಬಿಕೊಂಡು ಅನುಚಿತವಾಗಿ ವರ್ತನೆ ಮಾಡಿದ್ದರು, ಅಷ್ಟೇ ಅಲ್ಲದೇ 'ರೆಸಾರ್ಟ್ ಗೆ ಹೋಗೋಣ ಬಾ' ಎಂದಿದ್ದರು ಎಂದು ಶ್ರುತಿ ದೂರಿದ್ದಾರೆ.
ಇದು ಸಹಜವಾಗಿ ಇಂಡಸ್ಟ್ರಿಗೆ ಆಘಾತ ನೀಡಿದೆ. ಸುಮಾರು 30 ಇಂಡಸ್ಟ್ರಿಯಲ್ಲಿದ್ದ ಹಿರಿಯ ನಟನೆ ಮೇಲೆ ಇಂತಹ ಆರೋಪ ಬಂದಿರುವುದನ್ನ ಚಿತ್ರರಂಗದ ಕೆಲವು ಖಂಡಿಸಿದ್ದಾರೆ. 'ಕುರುಕ್ಷೇತ್ರ' ಚಿತ್ರದ ನಿರ್ಮಾಪಕ ಹಾಗೂ ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಶ್ರುತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಏನಂದ್ರು ಮುಂದೆ ಓದಿ....

ಶ್ರುತಿ ತಪ್ಪಾಗಿ ಅರ್ಥೈಸುತ್ತಿದ್ದಾರೆ
''ಅರ್ಜುನ್ ಸರ್ಜಾ ಬಾಲಕಲಾವಿದನಾಗಿ ಚಿತ್ರರಂಗ ಪ್ರವೇಶ ಮಾಡಿದ್ದವರು. ಇದುವರೆಗೂ ಸೌತ್ ಇಂಡಸ್ಟ್ರಿಯಲ್ಲೇ ಅವರ ಮೇಲೆ ಯಾರೂ ಆರೋಪ ಮಾಡಿಲ್ಲ. ನಟಿಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಆ ಹುಡುಗಿಯ ತಪ್ಪನ್ನ ತಿದ್ದಿದ್ದಾರೆ ಹೊರತು ಆ ರೀತಿ ನಡೆದುಕೊಂಡಿರಲ್ಲ. ಶ್ರುತಿ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಇದು ಬಹಳ ತಪ್ಪು'' ಎಂದು ಮುನಿರತ್ನ ಖಂಡಿಸಿದ್ದಾರೆ.

ಮೊದಲು ನಟನೆ ಕಲಿಯಲಿ
'ಮೊದಲು ನಟನೆ ಕಲಿಯಲಿ. ನಟನೆ ಪೂರ್ತಿ ಕಲಿತ ಮೇಲೆ ಇಂತಹ ಆರೋಪ ಮಾಡಲಿ. ಸಿನಿಮಾ ಚೆನ್ನಾಗಿ ಬರಲಿ, ಇದರಿಂದ ನಿರ್ಮಾಪಕರಿಗೆ ಒಳ್ಳೆಯದಾಗಲಿ, ಅಭಿನಯ ಚೆನ್ನಾಗಿರಲಿ ಎಂದು ಹೇಳ್ತಾರೆ ಹೊರತು ಅರ್ಜುನ್ ಸರ್ಜಾ ಇಂತಹ ಕಲಾವಿದ ಅಲ್ಲ' ಎಂದು ಮುನಿರತ್ನ ಕಿಡಿಕಾರಿದ್ದಾರೆ.

ಪ್ರಚಾರ ಸಿಗುತ್ತೆ ಎಂಬ ಕಾರಣ ಅಷ್ಟೇ
'ಸಾಮಾನ್ಯವಾಗಿ ಶ್ರುತಿ ಅವರ ಸಿನಿಮಾಗಳು ಮಾರ್ನಿಂಗ್ ಶೋ ಭರ್ತಿಯಾಗಲ್ಲ. ಅರ್ಜುನ್ ಸರ್ಜಾ ಅಂತಹ ನಟರ ಜೊತೆ ಸಿನಿಮಾ ಮಾಡಿದ್ರೆ, ಮೊದಲ ಶೋ ಫುಲ್ ಆಗುತ್ತೆ. ಈ ರೀತಿ ಇಂತಹ ನಟರ ಮೇಲೆ ಆರೋಪ ಮಾಡಿದ್ರೆ, ಇದರಿಂದ ಕ್ರೇಜ್ ಹೆಚ್ಚಾಗುತ್ತೆ, ಪ್ರಚಾರ ಸಿಗುತ್ತೆ ಎಂಬ ಕಾರಣಕ್ಕೆ ಹೀಗೆ ಮಾಡುವ ಕಲಾವಿದರಿವರು' - ಮುನಿರತ್ನ, ನಿರ್ಮಾಪಕ

ಆವತ್ತೇ ಯಾಕೆ ಮಾಡಿಲ್ಲ
'ಒಂದು ವೇಳೆ ತಪ್ಪು ಮಾಡಿದ್ರೆ, ಆವತ್ತೇ ಶೂಟಿಂಗ್ ಬಿಟ್ಟು ಮನೆಗೆ ಹೋಗಬಹುದಿತ್ತು. ಅರ್ಜುನ್ ಸರ್ಜಾ ಹೀಗೆ ಮಾಡಿದ್ದಾರೆ ಎಂದು ಹೇಳಬಹುದಿತ್ತು. ಇವತ್ತು ಯಾಕೆ ಆರೋಪ ಮಾಡ್ತಿದ್ದಾರೆ. ಅರ್ಜುನ್ ಸರ್ಜಾ ಜೊತೆ ಖ್ಯಾತ ನಟಿಯರು ಅಭಿನಯಿಸಿದ್ದಾರೆ. ಅವರೆಲ್ಲಾ ಏನೂ ಹೇಳಿಲ್ಲ. ಯಾವತ್ತು ತಪ್ಪು ಆಗುತ್ತೋ ಅಂದೇ ದೂರು ನೀಡಬೇಕು' -
ಮುನಿರತ್ನ, ನಿರ್ಮಾಪಕ

ದೊಡ್ಡ ಕುಟುಂಬದ ನಟ
'ಅರ್ಜುನ್ ಸರ್ಜಾ ಕುಟುಂಬ ತುಂಬಾ ದೊಡ್ಡದು. ದೊಡ್ಡ ದೊಡ್ಡ ಸಿನಿಮಾಗಳನ್ನ ಮಾಡಿರುವ ನಟ ಅವರು. ಅವರ ಮೇಲೆ ಇಂತಹ ಆರೋಪಗಳು ಬಂದ್ರೆ ಅದು ಸತ್ಯಕ್ಕೆ ದೂರವಾದದ್ದು. ಒಳ್ಳೆಯ ವ್ಯಕ್ತಿತ್ವ. ಅವರೊಬ್ಬರ ಒಳ್ಳೆಯ ನಟ. ಇಂತಹದನ್ನ ಪ್ರೋತ್ಸಾಹಿಸಬೇಡಿ. ಇಂತವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಲು ಹೇಳುತ್ತೇನೆ ಎಂದು' ಎಂದು ನಿರ್ಮಾಪಕ ಮುನಿರತ್ನ ಹೇಳಿದ್ದಾರೆ.


Click it and Unblock the Notifications











