twitter
    For Quick Alerts
    ALLOW NOTIFICATIONS  
    For Daily Alerts

    'ಕುರುಕ್ಷೇತ್ರ' ವಿಚಾರಕ್ಕೆ ಮುನಿರತ್ನ ಸಿಕ್ಕಾಪಟ್ಟೆ ಟ್ರೋಲ್: ಯಾಕೆ ಹೀಗೆ ಆಯ್ತು?

    |

    ಡಿ-ಬಾಸ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರ ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಪ್ರಪಂಚದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಇತ್ತೀಚಿಗಷ್ಟೆ ನಿರ್ಮಾಪಕ ಮುನಿರತ್ನ ಅವರೇ ಅಧಿಕೃತವಾಗಿ ರಿಲೀಸ್ ದಿನಾಂಕ ಘೋಷಿಸಿದ್ದಾರೆ.

    ಅಲ್ಲಿಯವರೆಗೂ ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದ ಅಭಿಮಾನಿಗಳು ಈಗ ಸ್ವಲ್ಪ ಬೇಸರವಾದಂತೆ ಕಾಣುತ್ತಿದೆ. ಅದು ಕುರುಕ್ಷೇತ್ರ ಅಥವಾ ದರ್ಶನ್ ವಿಚಾರಕ್ಕೆ ಅಲ್ಲ. ಸಿನಿಮಾ ನಿರ್ಮಾಪಕರ ನಿರ್ಧಾರಗಳ ಬಗ್ಗೆ ಎನ್ನುವುದು ಗೊತ್ತಾಗುತ್ತಿದೆ.

    'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ? 'ಕುರುಕ್ಷೇತ್ರ' ಚಿತ್ರಕ್ಕೆ ನಿಖಿಲ್ ಕುಮಾರ್ ಡಬ್ಬಿಂಗ್ ಮಾಡಿದ್ರಾ ಇಲ್ವಾ?

    ಈಗಾಗಲೇ ಎರಡು ಟೀಸರ್ ರಿಲೀಸ್ ಮಾಡಿ ತಕ್ಕ ಮಟ್ಟಿಗೆ ಹೈಪ್ ಹೆಚ್ಚಿಸಿದ್ದ ಮುನಿರತ್ನ, ಮೊನ್ನೆಯಷ್ಟೇ ಮೂರನೇ ಟೀಸರ್ ರಿಲೀಸ್ ಮಾಡಿದ್ದರು. ಈ ಟೀಸರ್ ನಿಂದಾಗಿ ಈಗ ಮುನಿರತ್ನ ಟ್ರೋಲ್ ಆಗ್ತಿದ್ದಾರೆ. ಅದೇ ರೀತಿ ಮುನಿರತ್ನ ಅವರ ನಿರ್ಧಾರಗಳ ಬಗ್ಗೆಯೂ ಬೇಸರ ವ್ಯಕ್ತವಾಗುತ್ತಿದೆ. ಅಷ್ಟಕ್ಕೂ, ಟೀಸರ್ ನಲ್ಲಿ ಅಂತಹ ಪ್ರಮಾದ ಏನಾಗಿದೆ?

    ನಿರ್ದೇಶಕರಿಗೆ ಗೌರವ ಕೊಟ್ಟಿಲ್ಲ

    ನಿರ್ದೇಶಕರಿಗೆ ಗೌರವ ಕೊಟ್ಟಿಲ್ಲ

    ಇತ್ತೀಚಿಗಷ್ಟೆ ರಿಲೀಸ್ ಆದ ಟೀಸರ್ ನಲ್ಲಿ ಎಲ್ಲಿಯೂ ನಿರ್ದೇಶಕರ ಹೆಸರು ಬಂದಿಲ್ಲ. ಕೇವಲ ನಿರ್ಮಾಪಕ ಮುನಿರತ್ನ ಎನ್ನುವುದು ಮಾತ್ರ ಹೈಲೈಟ್ ಆಗುವಂತೆ ಗ್ರಾಫಿಕ್ಸ್ ಮಾಡಲಾಗಿದೆ. ದರ್ಶನ್ 50ನೇ ಸಿನಿಮಾ ಹಾಗೂ ಕಥೆ-ನಿರ್ಮಾಪಕ ಮುನಿರತ್ನ ಎಂದು ಮಾತ್ರ ಇದೆ. ನಿರ್ದೇಶಕರ ಹೆಸರು ಯಾಕೆ ಹಾಕಿಲ್ಲ?

    ಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನಕುರುಕ್ಷೇತ್ರ ಹೊಸ ಟೀಸರ್: ಕರ್ಣ, ಅರ್ಜುನ, ದ್ರೌಪದಿ, ಕೃಷ್ಣಾವತಾರ ದರ್ಶನ

    ನಿರ್ದೇಶಕರು ಯಾರು?

    ನಿರ್ದೇಶಕರು ಯಾರು?

    ಕುರುಕ್ಷೇತ್ರ ಆರಂಭವಾದಾಗನಿಂದಲೂ ನಾಗಣ್ಣ ಈ ಚಿತ್ರಕ್ಕೆ ನಿರ್ದೇಶಕ ಎಂದೇ ಹೇಳಲಾಗಿದೆ. ಮೊನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ ನಾಗಣ್ಣ ಅವರು ಮಾತ್ರ ನಿರ್ದೇಶಕರಾಗಿ ಭಾಗವಹಿಸಿದ್ದರು. ಆದ್ರೆ, ಆಂತರಿಕ ಮಾಹಿತಿ ಪ್ರಕಾರ, ನಾಗಣ್ಣ ಜೊತೆಗೆ ಇನ್ನು ಕೆಲವರು ನಿರ್ದೇಶಕರಾಗಿ ಕೆಲಸ ಮಾಡಿರುವುದರಿಂದ ಒಬ್ಬರಿಗೆ ಕ್ರೆಡಿಟ್ ನೀಡದಿರಲು ಹೀಗೆ ಮಾಡಿರಬಹುದು ಎನ್ನಲಾಗಿದೆ. ಬಟ್, ನಾಗಣ್ಣ ಅವರ ಕೆಲಸ ಬಗ್ಗೆ ಮುನಿರತ್ನ ಹಾಗೂ ಚಿತ್ರತಂಡ ಶ್ಲಾಘನೆ ವ್ಯಕ್ತಪಡಿಸಿದೆ. ಹೀಗಿರಬೇಕಾದರೇ ನಿರ್ದೇಶಕರ ಹೆಸರು ಯಾಕೆ ಮರೆತರು?

    'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?'ಕುರುಕ್ಷೇತ್ರ'ದ ಟಿವಿ ಹಕ್ಕು ಖರೀದಿ ಮಾಡಿದ ಜೀ ಕನ್ನಡ: ಎಷ್ಟು ಕೋಟಿ ಗೊತ್ತಾ?

    ಗ್ರಾಫಿಕ್ಸ್ ಮೇಲೆ ಕೆಲಸ ಆಗಬೇಕಿದೆ

    ಗ್ರಾಫಿಕ್ಸ್ ಮೇಲೆ ಕೆಲಸ ಆಗಬೇಕಿದೆ

    ಕುರುಕ್ಷೇತ್ರ ಚಿತ್ರೀಕರಣ ಮುಗಿಸಿ ಬಹಳ ದಿನ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಹಾಗೂ ಗ್ರಾಫಿಕ್ಸ್ ಕೆಲಸದಿಂದ ಬಿಡುಗಡೆ ವಿಳಂಬವಾಗುತ್ತಿದೆ ಎಂಬುದು ಗೊತ್ತಿರುವ ವಿಚಾರ. ಇಷ್ಟು ಸಮಯ ತೆಗೆದುಕೊಂಡ ಮೇಲೆ ಅದಕ್ಕೆ ತಕ್ಕಂತೆ ಗ್ರಾಫಿಕ್ಸ್ ಕೆಲಸ ಆಗಬೇಕಿತ್ತು. ಆದರೇ, ಅಭಿಮಾನಿಗಳು ಈ ಗ್ರಾಫಿಕ್ಸ್ ನಿಂದ ತೃಪ್ತಿಯಾಗಿಲ್ಲ. ಇನ್ನು ಸಮಯ ತೆಗೆದುಕೊಂಡರು ಪರವಾಗಿಲ್ಲ, ಗ್ರಾಫಿಕ್ಸ್ ಮೇಲೆ ಹೆಚ್ಚು ಕೆಲಸ ಮಾಡಿ ಎಂದು ಮನವಿ ಮಾಡುತ್ತಿದ್ದಾರೆ.

    ಕಥೆ ಮುನಿರತ್ನ ಬರೆದರಾ?

    ಕಥೆ ಮುನಿರತ್ನ ಬರೆದರಾ?

    ಹೇಳಿ ಕೇಳಿ ಕುರುಕ್ಷೇತ್ರ ಪೌರಾಣಿಕ ಕಥೆ. ಕುರುಕ್ಷೇತ್ರ ಕತೆ ಬಗ್ಗೆ ಹಲವು ಕಾದಂಬರಿ, ಪುಸ್ತುಕ, ಮಹಾಕಾವ್ಯಗಳು ಇದೆ. ಹೀಗಿದ್ದರೂ ಮುನಿರತ್ನ ಕಥೆ ಬರೆದರಾ ಎಂಬ ಚರ್ಚೆ ನಡೆಯುತ್ತಿದೆ. ಚಿತ್ರಕಥೆ ಬರೆದಿದ್ದಾರೆ ಎಂದರೇ ನಂಬಬಹುದು ಬಟ್ ಕಥೆ ಹೇಗೆ ಸಾಧ್ಯ ಎಂದು ಕೇಳುತ್ತಿದ್ದಾರೆ.

    ಜೆಕೆ ಭೈರವಿ ಚಿತ್ರಕಥೆ.!

    ಜೆಕೆ ಭೈರವಿ ಚಿತ್ರಕಥೆ.!

    ಸ್ವತಃ ಮುನಿರತ್ನ ಅವರ ವೃಷಭಾದ್ರಿ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್ ನಲ್ಲಿ ಅಪ್ ಲೌಡ್ ಆಗಿರುವ ವಿವರಣೆಯನ್ನ ಗಮನಿಸಿದರೇ, ಮುನಿರತ್ನ ನಿರ್ಮಾಪಕ ಮಾತ್ರ. ಇದಕ್ಕೆ ಚಿತ್ರಕಥೆ ಬರೆದಿರುವುದು ಜೆ.ಕೆ ಭೈರವಿ (ಭರವಿ). ರನ್ನ ಕವಿಯ ಗದಾಯುದ್ಧ ಕಾವ್ಯದ ಅಧಾರದ ಮೇಲೆ ಕಥೆ ಮಾಡಲಾಗಿದೆ. ಅದನ್ನೂ ಜೆ.ಕೆ ಭೈರವಿ (ಭರವಿ) ಅವರ ಹೆಸರಿನಲ್ಲಿಯೇ ಇದೆ. ಬಟ್, ಮುನಿರತ್ನ ಕಥೆ ಹೇಗೆ ಆಯ್ತು?

    'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?'ಕುರುಕ್ಷೇತ್ರ' ಸುದ್ದಿಗೋಷ್ಠಿಗೆ ದರ್ಶನ್-ನಿಖಿಲ್ ಬರಲಿಲ್ಲ: ಮುನಿರತ್ನ ಕೊಟ್ಟ ಕಾರಣವೇನು?

    ರಿಲೀಸ್ ದಿನಾಂಕದ ಬಗ್ಗೆಯೂ ಬೇಸರ

    ರಿಲೀಸ್ ದಿನಾಂಕದ ಬಗ್ಗೆಯೂ ಬೇಸರ

    ಕುರುಕ್ಷೇತ್ರ ರಿಲೀಸ್ ದಿನಾಂಕ ಘೋಷಣೆ ಆಯ್ತು ಎಂಬ ಖುಷಿ ಡಿ ಬಾಸ್ ಭಕ್ತರಲ್ಲಿ ಹೆಚ್ಚಾಗಿದೆ. ಆದ್ರೆ, ಇಂಡಸ್ಟ್ರಿಯಲ್ಲಿ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಯಾಕಂದ್ರೆ, ಪೈಲ್ವಾನ್ ಮತ್ತು ಅವನೇ ಶ್ರೀಮನ್ನಾರಾಯಣ ಅಂತಹ ಸಿನಿಮಾಗಳು ವರಮಹಾಲಕ್ಷ್ಮಿ ಹಬ್ಬಕ್ಕೆ ಬರ್ತಿವಿ ಹೇಳಿದ್ಮೇಲೂ ಇಂತಹ ದೊಡ್ಡ ಚಿತ್ರವನ್ನ ಅದೇ ದಿನ ಬಿಡುಗಡೆ ಮಾಡಲು ಮುಂದಾಗಿರುವುದು ನಿಜಕ್ಕೂ ಅಚ್ಚರಿ ಎನ್ನುತ್ತಿದ್ದಾರೆ.

    ದರ್ಶನ್ ಮಾತ್ರ ಕಾಪಾಡಲು ಸಾಧ್ಯ?

    ದರ್ಶನ್ ಮಾತ್ರ ಕಾಪಾಡಲು ಸಾಧ್ಯ?

    ಇದನ್ನೆಲ್ಲಾ ಗಮನಿಸಿದ ನೆಟ್ಟಿಗರು ಕುರುಕ್ಷೇತ್ರ ಚಿತ್ರದ ಮೇಲೆ ಅಪಾರವಾದ ನಂಬಿಕೆ ಇದೆ. ಆದ್ರೆ, ಮುನಿರತ್ನ ಅವರ ನಿರ್ಧಾರಗಳನ್ನ ನೋಡಿದ್ರೆ ಆತುರ ಆತುರವಾಗಿ ಮಾಡೋದಕ್ಕೆ ಮುಂದಾಗಿ ಏನೋ ಮಾಡಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಈ ಚಿತ್ರವನ್ನ ಮತ್ತು ಮುನಿರತ್ನ ಅವರನ್ನ ದರ್ಶನ್ ಅವರೇ ಕಾಪಾಡಬೇಕು ಎಂದು ಸ್ಯಾಂಡಲ್ ವುಡ್ ಅಭಿಮಾನಿಗಳಲ್ಲಿ ಚರ್ಚೆಯಾಗ್ತಿದೆ.

    English summary
    Muniratna Kurukshetra teaser is an all-producer's show. Surprised that even the director's name is not mentioned.
    Wednesday, May 22, 2019, 13:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X