Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Kabza: 'ಕಬ್ಜ' ಅಡ್ಡಕ್ಕೆ ಎಂಟ್ರಿ ಕೊಟ್ಟ ತೆಲುಗು ನಟರು!
ಕನ್ನಡದ 'ಕಬ್ಜ' ಸಿನಿಮಾ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಒಂದು. 'ಕಬ್ಜ' ಚಿತ್ರ ಈಗಾಗಲೇ ಪ್ರತೀ ಹಂತದಲ್ಲೂ ಕೂಡ ಹೆಚ್ಚಾಗಿ ಸದ್ದು ಮಾಡುತ್ತಾಲೇ ಬಂದಿದೆ. ಈ ಚಿತ್ರದಲ್ಲಿ ನಾಯಕ ನಟ ಉಪೇಂದ್ರ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
'ಕಬ್ಜ' ದೊಡ್ಡ ಕಲಾವಿದರ ಬಳಗ ಇರುವ ಸಿನಿಮಾ. ಈ ಚಿತ್ರದಲ್ಲಿ ನಟ ಉಪೇಂದ್ರ ಜೊತೆಗೆ ದೊಡ್ಡ ಕಲಾವಿದರು ಅಭಿನಯಿಸುತ್ತಿದ್ದಾರೆ. ಈಗಾಗಲೇ ರಿವೀಲ್ ಆಗಿರುವ ಸಿನಿಮಾದ ತುಣುಕುಗಳು ಸಾಕಷ್ಟು ನಿರೀಕ್ಷೆಗೆ ಕಾರಣ ಆಗಿವೆ. ಈ ಚಿತ್ರದಲ್ಲಿ ಉಪ್ಪಿ ಜೊತೆಗೆ ನಟ ಸುದೀಪ್ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದು ವಿಶೇಷ.
ಕೊಂಬಿರುವ
ಕುದುರೆ
ಏರಿ
ಬಂದ
ಉಪೇಂದ್ರ;
ಟೈಟಲ್
ಬಗ್ಗೆ
ಹೇಳಿದ್ದೇನು?
Recommended Video
ಸುದೀಪ್ ಮಾತ್ರ ಅಲ್ಲ, ನಿರ್ದೇಶಕ ಆರ್. ಚಂದ್ರು ಈ ಚಿತ್ರಕ್ಕಾಗಿ ಆದಷ್ಟು ಹೆಚ್ಚು ಹೆಸರಾಂತ ಕಲಾವಿದರನ್ನು ತರಲು ಪ್ರಯತ್ನ ನಡೆಸಿದ್ದಾರೆ. ಹಾಗಾಗಿ 'ಕಬ್ಜ' ಚಿತ್ರ ಕಲಾವಿದರ ಮೂಲಕವೇ ಹೊಸ ದಾಖಲೆ ಮಾಡುವ ಸೂಚನೆ ಕೊಟ್ಟಿದೆ. ಈಗ ತೆಲುಗಿನ ಹೆಸರಾಂತ ಕಲಾವಿದರು ಈ ಚಿತ್ರಕ್ಕೆ ಜೊತೆಯಾಗಿದ್ದಾರೆ.

'ಕಬ್ಜ'ಗೆ ಮುರಳಿ ಶರ್ಮಾ,ಪೊಸನಿ ಕೃಷ್ಣ ಮುರಳಿ!
ನಿರ್ದೇಶಕ ಆರ್.ಚಂದ್ರು 'ಕಬ್ಜ' ಚಿತ್ರದ ಒಂದೊಂದೆ ಅಂಶಗಳನ್ನು ರಿವೀಲ್ ಮಾಡುತ್ತಿದ್ದಾರೆ. ಒಂದೊಂದೆ ಪಾತ್ರಗಳನ್ನು ಪರಿಚಯ ಮಾಡಿ ಕೊಡುತ್ತಾ ಇದ್ದಾರೆ. ಇತ್ತೀಚೆಗೆ ಚಿತ್ರದ ನಾಯಕಿ ಶ್ರಿಯಾ ಸರಣ್ ಅವರನ್ನು ಪರಿಚಯಿಲಾಗಿತ್ತು. ಈಗ ತೆಲುಗಿನ ಪೊಸನಿ ಕೃಷ್ಣ ಮುರಳಿ ಮತ್ತು ಮುರಳಿ ಶರ್ಮಾ ಅವರು 'ಕಬ್ಜ' ಚಿತ್ರಕ್ಕೆ ಜೊತೆಯಾಗಿದ್ದಾರೆ. ಪೋಸ್ಟರ್ ಹಂಚಿಕೊಳ್ಳುವ ಮೂಲಕ ಈ ವಿಚಾರವನ್ನು ಆರ್. ಚಂದ್ರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಉಪ್ಪಿ
ಜೊತೆ
'ಕಬ್ಜಾ'
ಚಿತ್ರದಲ್ಲಿ
ನಟಿಸಬೇಕಾ:
ಇಲ್ಲಿದೆ
ಸುವರ್ಣ
ಅವಕಾಶ!

ಕಬ್ಜ ರಾಣಿ ಆದ ಶ್ರಿಯಾ ಸರಣ್!
ಎಲ್ಲದಕ್ಕಿಂತ ಹೆಚ್ಚಾಗಿ ಕಬ್ಜ ಚಿತ್ರದ ನಾಯಕಿ ಬಗ್ಗೆ ಸಾಕಷ್ಟು ಕುತೂಹಲ ಇತ್ತು. ಅದಕ್ಕೂ ಈಗ ತೆರೆ ಬಿದ್ದಿದೆ. ಈ ಚಿತ್ರಕ್ಕೆ ನಾಯಕಿ ಆಗಿ ಶ್ರಿಯಾ ಸರಣ್ ಎಂಟ್ರಿ ಕೊಟ್ಟಿದ್ದಾರೆ. ಶ್ರಿಯಾ ರಾಣಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ರಾಣಿಯ ಅವತಾರದಲ್ಲಿರುವ ಶ್ರಿಯಾ ಪೋಸ್ಟರ್‌ಗಳು ಪಾತ್ರದ ಮೇಲೆ ನಿರೀಕ್ಷೆ ಹುಟ್ಟು ಹಾಕಿವೆ. ಇನ್ನು ಈಗ ಈ ಚಿತ್ರಕ್ಕೆ ಮತ್ತಿಬ್ಬರು ಹೆಸರಾಂತ ಕಲಾವಿದರು ಸೇರಿಕೊಂಡ ಕಾರಣ ಕಥೆಯ ಮೇಲೆ ಕುತೂಹಲ ಹೆಚ್ಚಾಗಿದೆ.

'ಕಬ್ಜ'ದಲ್ಲಿ ಸುದೀಪ್ 'ಭಾರ್ಗವ ಬಕ್ಷಿ'!
ನಟ ಸುದೀಪ್ ಕಬ್ಜ ಚಿತ್ರದಲ್ಲಿ 'ಭಾರ್ಗವ ಬಕ್ಷಿ' ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಪೊಲೀಸ್ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಸುದೀಪ್ ಭಾಗದ ಶೂಟಿಂಗ್ ಮುಕ್ತಾಯ ಆಗಿದೆ. ಈ ಹಿಂದೆ ಕಿಚ್ಚ ಸೆಟ್‌ನಲ್ಲಿ ಇರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. 'ಕಬ್ಜ' ಚಿತ್ರದ ಶೂಟಿಂಗ್‌ಗಾಗಿ ಮಿನರ್ವ ಮಿಲ್‌ನಲ್ಲಿ ಬೃಹತ್ ಸೆಟ್ ಹಾಕಲಾಗಿದೆ. ಈ ಸೆಟ್‌ನಲ್ಲಿಯೆ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿದಿದೆ.
Upendra
Song:
'ಹುಷಾರ್'
ಉಪ್ಪಿ
ಮತ್ತೆ
ಮೈಕ್
ಹಿಡಿದು
ನಿಂತ್ರು

ಎರಡು ಭಾಗಗಳಲ್ಲಿ ಬರಲಿದೆ 'ಕಬ್ಜ'!
'ಕಬ್ಜ' ಸಿನಿಮಾವನ್ನು ದೊಡ್ಡ ಕ್ಯಾನ್‌ವರ್ಸ್‌ನಲ್ಲಿ ಮಾಡಲಾಗುತ್ತಿದೆ. ಕನ್ನಡದ ಬಹು ದೊಡ್ಡ ಸಿನಿಮಾಗಳಲ್ಲಿ ಇದು ಕೂಡ ಒಂದಾಗಲಿದೆ. ಯಾಕೆಂದರೆ ಈ ಚಿತ್ರದ ಎರಡೂ ಭಾಗಗಳಲ್ಲಿ ತೆರೆಗೆ ಬರ್ತಿದೆ. ಭಾಗ 1ರ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ಈಗ ಒಬ್ಬ ನಾಯಕಿಯ ಹೆಸರನ್ನು ರಿವೀಲ್ ಮಾಡಿದ್ದಾರೆ ನಿರ್ದೇಶಕರು. ಹಾಗಾಗಿ ಚಿತ್ರದ ಬಗ್ಗೆ ಹಲವು ಕುತೂಹಲಗಳು ಹುಟ್ಟಿಕೊಂಡಿವೆ. ಇನ್ನೂ ಭಾಗ2 ಈ ಚಿತ್ರಕ್ಕಿಂತಲೂ ಒಂದು ಕೈ ಮೇಲೆ ಇರಲಿದೆ ಎನ್ನುವ ಸುಳಿವು ಬಿಟ್ಟು ಕೊಟ್ಟಿದ್ದಾರೆ ನಿರ್ದೇಶಕ ಆರ್. ಚಂದ್ರು.