For Quick Alerts
  ALLOW NOTIFICATIONS  
  For Daily Alerts

  ಪ್ರೀತಂ ಗುಬ್ಬಿ ಹೊಸ ಚಿತ್ರಕ್ಕೆ ಸಿಕ್ತು ಟೈಟಲ್

  By Suneetha
  |

  ಕನ್ನಡ ಚಿತ್ರರಂಗದ ಫೇಮಸ್ ಮ್ಯೂಸಿಕ್ ಕಂಪೋಸರ್ ಹಾಗೂ ಗಾಯಕ ಜಿ.ಕೆ ವೆಂಕಟೇಶ್ ಅವರ ಮೊಮ್ಮಗ ಪೃಥ್ವಿ ಅವರು ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಆಕ್ಷನ್-ಕಟ್ ನಲ್ಲಿ ಮೂಡಿಬರುತ್ತಿರುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ ಅಲ್ವಾ.

  ಇದೀಗ ಈ ಚಿತ್ರಕ್ಕೆ ನಿರ್ದೇಶಕ ಪ್ರೀತಮ್ ಗುಬ್ಬಿ ಅವರು ಟೈಟಲ್ ಫೈನಲ್ ಮಾಡಿದ್ದು, 'ನಾನು ಮತ್ತು ವರಲಕ್ಷ್ಮಿ' ಎಂದು ಹೆಸರಿಟ್ಟಿದ್ದಾರೆ. ಈಗಾಗಲೇ ಚಿತ್ರದ ಫಸ್ಟ್ ಶೆಡ್ಯೂಲ್ ನ ಶೂಟಿಂಗ್ ಅನ್ನು ಊಟಿಯಲ್ಲಿ ಭಾನುವಾರದಂದು ಚಿತ್ರತಂಡ ಮುಕ್ತಾಯಗೊಳಿಸಿದೆ.

  ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶಕ ಕಮ್ ನಿರ್ದೇಶಕ ಹರ್ಷ ಅವರು ನೃತ್ಯ ನಿರ್ದೇಶನ ಮಾಡಿದ್ದು, ಫೈಟ್ ಮಾಸ್ಟರ್ ರವಿವರ್ಮಾ ಸಾಹಸ ಸಂಯೋಜನೆ ಮಾಡಿದ್ದಾರೆ.

  ಇದೇ ಮೊದಲ ಬಾರಿಗೆ ಕ್ಯಾಮರಾ ಮುಂದೆ ನಟಿಸಲು ಅಣಿಯಾಗಿರುವ ಪೃಥ್ವಿ ಈಗಾಗಲೇ ನಟನೆ, ನೃತ್ಯ, ಸಾಹಸ ಸೇರಿದಂತೆ ಸಿನಿಮಾಗೆ ಬೇಕಿರುವ ಹಲವು ಬಗೆಯ ತರಬೇತಿ ಪಡೆದು, ಪೂರ್ಣ ಪ್ರಮಾಣದ ತಯಾರಿ ನಡೆಸಿದ್ದಾರೆ.[ಬಣ್ಣ ಹಚ್ಚಿದ ಜಿ.ಕೆ.ವೆಂಕಟೇಶ್ ಮೊಮ್ಮಗ ಪೃಥ್ವಿ]

  ಇನ್ನು ಚಿತ್ರದಲ್ಲಿ ವಿಶೇಷವಾಗಿ ಪ್ರತಿಭಾವಂತ ನಟ ಪ್ರಕಾಶ್ ರೈ ಅವರು ಕಾಣಿಸಿಕೊಂಡಿದ್ದು, ಬೈಕ್ ರೈಡಿಂಗ್ ಕೋಚ್ ಆಗಿ ಮಿಂಚಿದ್ದಾರೆ. ಒಟ್ನಲ್ಲಿ 'ನಾನು ಮತ್ತು ವರಲಕ್ಷ್ಮಿ' ಬೈಕ್ ರೇಸಿಂಗ್ ಕಥೆಯಾಧರಿತ ಚಿತ್ರವಾಗಿದೆ.

  ಇನ್ನುಳಿದಂತೆ ಪೃಥ್ವಿಯ ಜೊತೆಗೆ ಮಾಳವಿಕ ಮೋಹನ್ ನಾಯಕಿಯಾಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಪವಿತ್ರ ಲೋಕೇಶ್, ಅಚ್ಯುತ್ ಕುಮಾರ್, ಸಾಧು ಕೋಕಿಲ, ರಂಗಾಯಣ ರಘು ಮತ್ತು ಸಂಪತ್ ಸೇರಿದಂತೆ ಅನೇಕರ ತಾರಾಗಣವಿದೆ.

  English summary
  Sandalwood music composer GK Venkatesh's grandson Prithvi has finally got a title. The film directed by Preetham Gubbi is called 'Naanu Mattu Varalakshmi'. The first schedule of shooting for the film was completed in Ooty on Sunday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X