AR Rahman: ಶಿವರಾಜ್‌ಕುಮಾರ್ ಮತ್ತು ರಾಮ್ ಚರಣ್ ಸಿನಿಮಾಕ್ಕೆ ಮ್ಯೂಸಿಕ್ ಮಾಂತ್ರಿಕನ ಸಂಗೀತ
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಉಪ್ಪೇನ ನಿರ್ದೇಶಕನ ಹೊಸ ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ರಾಮ್‌ಚರಣ್ ಅವರ ಮುಂದಿನ ಸಿನಿಮಾದಲ್ಲಿ ಶಿವಣ್ಣ ಸೇರಿಕೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಅವರೇ ಮಾಹಿತಿ ನೀಡಿದ್ದರು. ಇನ್ನು, ಹೊಸ ಸುದ್ದಿಯ ಪ್ರಕಾರ ಈ ಸಿನಿಮಾಕ್ಕೆ ಮ್ಯೂಸಿಕ್ ಮಾಂತ್ರಿಕ ಎ.ಆರ್.ರೆಹಮಾನ್ ಕೈ ಜೋಡಿಸಿದ್ದಾರೆ.
ಉಪ್ಪೇನಾ ಡೈರೆಕ್ಟರ್ ಬುಚ್ಚಿ ಬಾಬು ಸಾನಾ ಮುಂದೆ ರಾಮ್ ಚರಣ್ ಅವರಿಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಈ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಕೂಡ ನಟಿಸಲಿದ್ದಾರೆ. ಶಿವಣ್ಣ ಅವರು ಈ ಬಗ್ಗೆ ತಮಿಳು ಸಂದರ್ಶನ ಒಂದರಲ್ಲಿ ಮಾಹಿತಿ ನೀಡಿದ್ದರು. ಈಗ ಹೆಸರಿಡದ ಈ ಸಿನಿಮಾಕ್ಕೆ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.

ಆರು ರಾಷ್ಟ್ರ ಪ್ರಶಸ್ತಿ ಪಡೆದಿರುವ ಎ.ಆರ್.ರಹಮಾನ್
ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಕೂಡ ಎ.ಆರ್. ರಹಮಾನ್ ಹೆಸರು ಕೇಳದವರೇ ಇಲ್ಲವೇನೋ. ವಿದೇಶದಲ್ಲಿಯೂ ಈ ಸಂಗೀತ ಮಾಂತ್ರಿಕನ ಸಂಗೀತಕ್ಕೆ ತಲೆ ತೂಗದವರಿಲ್ಲ. ಎರಡೆರಡು ಆಸ್ಕರ್ ಪ್ರಶಸ್ತಿ ಗೆದ್ದು ದೇಶಕ್ಕೆ ಕೀರ್ತಿ ತಂದವರು. ಏಷ್ಯಾದಲ್ಲೇ ಆಸ್ಕರ್ ಗೆದ್ದ ಮೊದಲಿಗೆ ಎನ್ನುವ ಖ್ಯಾತಿ ಅವರಿಗೆ ಇದೆ. ಆರು ರಾಷ್ಟ್ರ ಪ್ರಶಸ್ತಿ, ಎರಡು ಅಕಾಡೆಮಿ ಮತ್ತು ಎರಡು ಗ್ರ್ಯಾಮಿ ಪ್ರಶಸ್ತಿ, 15 ಫಿಲ್ಮಪೇರ್ ಪ್ರಶಸ್ತಿ, ಭಾರತ ಸರ್ಕಾರದಿಂದ ಪದ್ಮಭೂಷಣ ಪ್ರಶಸ್ತಿ ಪಡೆದಿರುವ ಇವರು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಎ.ಆರ್. ರಹಮಾನ್ ಜನ್ಮದಿನಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಜೊತೆಗೆ ಹೊಸ ಸಿನಿಮಾಗಳು ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ಅವರು ಉಪ್ಪೇನ ನಿರ್ದೇಶಕ ಮತ್ತು ರಾಮ್ ಚರಣ್ ಕಾಂಬಿನೇಷನ್‌ನ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದು ಅಧಿಕೃತವಾಗಿ ಕನ್ಫರ್ಮ್ ಆಗಿದೆ. ರಹಮಾನ್ ಜನ್ಮದಿನಕ್ಕೆ ಶುಭಾಶಯ ಕೋರಿ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ.

ಬುಚ್ಚಿ ಬಾಬು ಸಾನಾ ಮತ್ತು ರಾಮ್ ಚರಣ್
ಎಸ್ ಎಸ್ ರಾಜಮೌಳಿ ಅವರ ಆರ್‌ಆರ್‌ಆರ್ ಸಿನಿಮಾ ಮೂಲಕ ಗ್ಲೋಬಲ್ ಸ್ಟಾರ್ ಪಟ್ಟಕ್ಕೇರಿರುವ ರಾಮ್ ಚರಣ್ ಸದ್ಯಕ್ಕೆ ಗೇಮ್ ಚೇಂಜರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಉಪ್ಪೇನಾ ನಿರ್ದೇಶಕ ಬುಚ್ಚಿ ಬಾಬು ಸಾನಾ ಜೊತೆಗೆ ಕೈ ಜೋಡಿಸಿದ್ದಾರೆ. ಮೊದಲ ಸಿನಿಮಾದಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದಿರುವ ಬುಚ್ಚಿ ಬಾಬು ಸಾನಾ ಹಾಗೂ ರಾಮ್ ಚರಣದ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಸಿನಿಮಾಗೆ ಎಆರ್ ರಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.
ಬುಚ್ಚಿ ಬಾಬು ಸನಾ ಕಥೆ ಬರೆದು ಆಕ್ಷನ್ ಕಟ್ ಹೇಳಲಿರುವ ಈ ಸಿನಿಮಾವನ್ನು ವೃದ್ಧಿ ಸಿನಿಮಾಸ್ ಹಾಗೂ ಸುಕುಮಾರ್ ರೈಟಿಂಗ್ಸ್ ಬ್ಯಾನರ್ ನಡಿ ವೆಂಕಟ ಸತೀಶ್ ಕಿಲಾರು ನಿರ್ಮಾಣ ಮಾಡುತ್ತಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಈ ಚಿತ್ರವನ್ನು ಪ್ರಸ್ತುತಪಡಿಸಲಿದೆ.


Click it and Unblock the Notifications











