ಇವರ್ಯಾರೋ ಹೊಸ ಸ್ವಾಮೀಜಿ ಅಂತ ಕನ್ಫೂಸ್ ಆಗ್ಬೇಡಿ, ಹೊಸ ಗೆಟಪ್ ಅಷ್ಟೇ

ಲಘು ಹೃದಯಾಘಾತದ ನಂತರ ಚೇತರಿಸಿಕೊಂಡಿರುವ ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ ಸದ್ಯ ಸಂಗೀತ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಲಾಕ್ ಡೌನ್ ನಡುವೆಯೂ ಕೆಲಸ ಮಾಡುತ್ತಿರುವ ಅರ್ಜುನ್ ಜನ್ಯ ಗೆಟಪ್ ಅನ್ನು ಬದಲಾಯಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

Recommended Video

ಲಾಕ್ ಡೌನ್ ಎಫೆಕ್ಟ್ ನಿಂದ ಸ್ವಾಮೀಜಿಯಾದ ಅರ್ಜುನ್ ಜನ್ಯ..! | Arjun janya | Filmibeat Kannada

ಪಕ್ಕಾ ಸ್ವಾಮೀಜಿ ಅವತಾರದಲ್ಲಿ ಕಾಣಿಸಿಕೊಂಡಿರುವ ಅರ್ಜುನ್ ನೋಡಿ ಅನೇಕರು ಸ್ವಾಮೀಜಿ ಆಗ್ವೀಟ್ರಾ ಅಂತ ಕನ್ಫೂಸ್ ಆಗ್ತಿದ್ದಾರೆ. ಹಾಗಂತ ಅರ್ಜುನ್ ಜನ್ಯ ಸ್ವಾಮಿಜಿ ಆಗಿಲ್ಲ, ಇದು ಅವರ ಹೊಸ ಅವತಾರವಷ್ಟೆ. ಕೆಂಪು ಪಂಚೆ, ಪೇಟ ತೊಟ್ಟು ಗಡ್ಡಧಾರಿಯಾಗಿ ಗಂಭೀರ ನೋಟ ಬೀರುತ್ತ ಕುಳಿತಿರುವ ಅರ್ಜುನ್ ಜನ್ಯ ಫೋಟೋ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಅಂದ್ಹಾಗೆ ಸ್ಟೂಡಿಯೋದಲ್ಲಿ ರೆಕಾರ್ಡಿಂಗ್ ಮಾಡುತ್ತಿರುವ ಫೋಟೋವನ್ನು ನಿರ್ದೇಶಕ ಪ್ರೇಮ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಜೊತೆಗೆ ಅರ್ಜುನ್ ಜನ್ಯ ಗೆಟಪ್ ಬಗ್ಗೆ ಬರೆದುಕೊಂಡಿದ್ದಾರೆ. "ಇವ್ರ್ಯಾರೋ ಹೊಸ ಸ್ವಾಮೀಜಿ ಅಂತ ಗೊಂದಲ ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ. Updated ಸಾಂಗ್'ಗಳನ್ನು ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ update ಮಾಡ್ಕೊಂಡಿದ್ದಾರೆ" ಎಂದಿದ್ದಾರೆ.

Music Director Arjun Janya New Getup Viral

ಅರ್ಜುನ್ ಜನ್ಯ ಸದ್ಯ 'ಏಕ್ ಲವ್ ಯಾ' ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಲಾಕ್ ಡೌನ್ ನಲ್ಲಿ ರೆಕಾರ್ಡಿಂಗ್ ಕೆಲಸದಲ್ಲಿ ನಿರತವಾಗಿದ್ದಾರೆ. ಸದ್ಯ ಚಿತ್ರದ ಕೆಲಸ ಬಿರುಸಿನಿಂದ ನಡೆಯುತ್ತಿದ್ದು, ಸಧ್ಯದಲ್ಲೇ ಆಡಿಯೋ ರಿಲೀಸ್ ಆಗಲಿದೆ ಎಂದು ಪ್ರೇಮ್ ಹೇಳಿದ್ದಾರೆ.

'ಏಕ್ ಲವ್ ಯಾ' ನಟಿ ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಅಭಿನಯಿಸುತ್ತಿರುವ ಸಿನಿಮಾ. ಚಿತ್ರದಲ್ಲಿ ನಟಿ ರಚಿತಾ ರಾಮ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಅಂದರೆ ನಟಿ ರಕ್ಷಿತಾ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಮದುವೆ ನಂತರ ರಕ್ಷಿತಾ ಬಣ್ಣಹಚ್ಚಿದ ಮೊದಲ ಸಿನಿಮಾ ಇದಾಗಿದೆ.

More from Filmibeat

English summary
Music Director Arjun Janya new getup viral. Arjun Janya currently busy with Ek love ya film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X