»   » 'ಸ್ಟೈಲ್ ಕಿಂಗ್' ಪ್ರೊಮೋಷನಲ್ ಹಾಡಿಗೆ ವಾಯ್ಸ್ ನೀಡಿದ ಅರ್ಜುನ್ ಜನ್ಯಾ

'ಸ್ಟೈಲ್ ಕಿಂಗ್' ಪ್ರೊಮೋಷನಲ್ ಹಾಡಿಗೆ ವಾಯ್ಸ್ ನೀಡಿದ ಅರ್ಜುನ್ ಜನ್ಯಾ

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಬುಗುರಿ' ಚಿತ್ರದ ನಂತರ 'ಸ್ಟೈಲ್ ಕಿಂಗ್' ಎಂಬ ಬಹುನಿರೀಕ್ಷಿತ ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

ಡಿಸೆಂಬರ್ ಮೊದಲನೇ ವಾರದಲ್ಲಿ ಚಿತ್ರದ ಬಿಡುಗಡೆ ಮಾಡಲು 'ಸ್ಟೈಲ್ ಕಿಂಗ್' ಚಿತ್ರತಂಡ ಭರ್ಜರಿ ತಯಾರಿ ನಡೆಸುತ್ತಿದೆ.

ಯಾವಾಗಲೂ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದ ಗೋಲ್ಡನ್ ಸ್ಟಾರ್ ಗಣೇಶ್ ಅವರು 'ಸ್ಟೈಲ್ ಕಿಂಗ್' ಚಿತ್ರದಲ್ಲಿ ಎರಡು ಪಾತ್ರಗಳಲ್ಲಿ ಮಿಂಚಿದ್ದು, ಗ್ಯಾಂಗ್ ಸ್ಟರ್ ರೋಲ್ ನಲ್ಲಿ ಮಿಂಚಿದ್ದಾರೆ.['ರಾಜ್ಯೋತ್ಸವ'ದಲ್ಲಿ ನಂದೇ ಸ್ಟೈಲ್, ಎಂದ ಚಿನ್ನದ ಹುಡುಗ ]

Music director Arjun Janya To Feature In Promotional Song 'Dhaga Dhaga' Of Style King

ಇದೀಗ ಚಿತ್ರದ ಲೇಟೆಸ್ಟ್ ಮಾಹಿತಿ ಏನಪ್ಪಾ ಅಂದ್ರೆ, 'ಇದೀಗ ಬಂದ ಸುದ್ದಿ ಕೇಳ್ರಿ, ಸ್ಟೈಲ್ ಗೊಬ್ಬ ಕಿಂಗ್ ಅವ್ನೆ, ಖಾಲಿ ಪೋಲಿ ಪಾಪಿಗಳಿಗೆ ಹಿಗ್ಗಾ ಮುಗ್ಗಾ ಹೊಡಿತಾವ್ನೆ' ಎಂಬ ಚಿತ್ರದ ಪ್ರೊಮೋಷನಲ್ ಹಾಡು ಬಿಡುಗಡೆಗೆ ತಯಾರಾಗಿದ್ದು, ಈ ಹಾಡನ್ನು ಸಂಗೀತ ಮಾಂತ್ರಿಕ ಅರ್ಜುನ್ ಜನ್ಯಾ ಅವರು ಹಾಡಿದ್ದಾರೆ.

ಚಿತ್ರಕ್ಕೂ ಅರ್ಜುನ್ ಜನ್ಯಾ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಇನ್ನೇನು ಸದ್ಯದಲ್ಲೇ ಚಿತ್ರದ ಹಾಡುಗಳು ಬಿಡುಗಡೆಯಾಗಲಿವೆ. ಈ ಮೊದಲು ನಿರ್ದೇಶಕ ಪಿ.ಸಿ ಶೇಖರ್ ಆಕ್ಷನ್-ಕಟ್ ಹೇಳಿದ್ದ 'ರೋಮಿಯೋ ಚಿತ್ರದ 'ಬೆಳಗೆದ್ದು ಕಾಫಿ ಕುಡಿ' ಹಾಡಿಗೆ ಕೂಡ ಅರ್ಜುನ್ ಜನ್ಯಾ ಅವರೇ ತಮ್ಮ ಧ್ವನಿ ನೀಡಿದ್ದರು.[ಮುಂಗಾರು ಮಳೆ ಲವರ್ ಬಾಯ್ ಇದೀಗ ಗ್ಯಾಂಗ್ ಸ್ಟರ್]

Music director Arjun Janya To Feature In Promotional Song 'Dhaga Dhaga' Of Style King

ಇದೀಗ 'ಸ್ಟೈಲ್ ಕಿಂಗ್' ಚಿತ್ರಕ್ಕೂ ನಿರ್ದೇಶಕ ಪಿ.ಸಿ ಶೇಖರ್ ಅವರೇ ಆಕ್ಷನ್-ಕಟ್ ಹೇಳಿದ್ದು, ನಿರ್ದೇಶಕರ ಆಲೋಚನೆಯ ಮೇರೆಗೆ ಮತ್ತೊಮ್ಮೆ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ ಅವರು 'ಸ್ಟೈಲ್ ಕಿಂಗ್' ಚಿತ್ರದ ಪ್ರೊಮೋಷನ್ ಹಾಡಿಗೆ ತಮ್ಮ ವಾಯ್ಸ್ ನೀಡಿದ್ದಾರೆ.

ಈಗಾಗಲೇ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ನಲ್ಲಿ ಗಣೇಶ್ ಅವರ ಗ್ಯಾಂಗ್ ಸ್ಟರ್ ಲುಕ್, ಚಿತ್ರದ ಬಗ್ಗೆ ಭಾರಿ ಕುತೂಹಲ ಮೂಡಿಸುತ್ತಿದೆ. ಅಲ್ಲದೇ ಅಭಿಮಾನಿಗಳನ್ನು ಚಿತ್ರಬಿಡುಗಡೆಗೆ ಕಾಯುವಂತೆ ಮಾಡಿದೆ.

English summary
Kannada movie 'Style King' is that a promotional song of the movie will be soon released which will feature Kannada reputed music director Arjun Janya. Kannada Actor Ganesh, Actress Remya Nambeesen in the lead role. The movie is directed by PC Shekar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada