For Quick Alerts
  ALLOW NOTIFICATIONS  
  For Daily Alerts

  ಇಡೀ ಭಾರತದಲ್ಲಿ 'ಇವರೇ' ಮೊದಲು.! ಯಾವುದರಲ್ಲಿ? ಯಾರವರು?

  By Harshitha
  |

  ಕನ್ನಡ ನಟರು ನಿರ್ದೇಶಕರಾಗುವುದು, ನಿರ್ದೇಶಕರು ನಟರಾಗುವುದು, ಸಂಗೀತ ನಿರ್ದೇಶಕರು ಡೈರೆಕ್ಟರ್ ಕ್ಯಾಪ್ ತೊಡುವುದು, ಕೆಲವೊಮ್ಮೆ ನಿರ್ದೇಶಕರೇ ಸಂಗೀತ ಸಂಯೋಜಿಸುವುದು, ಛಾಯಾಗ್ರಾಹಕರು ನಿರ್ದೇಶನ ಮಾಡುವುದು...ಇಂತಹ ಹಲವು ಬೆಳವಣಿಗೆಗಳನ್ನ ನೀವೆಲ್ಲಾ ಎಲ್ಲಾ ಭಾಷೆಯ ಚಿತ್ರರಂಗಗಳಲ್ಲಿ ನೋಡಿದ್ದೀರಾ.

  ಇನ್ನೂ ಕೆಲವರೂ ಒಂದು ಸ್ಟೆಪ್ ಮುಂದೆ ಹೋಗಿ, 'ಒನ್ ಮ್ಯಾನ್ ಶೋ'...ಅಂದ್ರೆ ನಟನೆ, ನಿರ್ದೇಶನ, ಸಂಗೀತ ನಿರ್ದೇಶನ, ನಿರ್ಮಾಣ ಮಾಡಿದ್ದೂ ಇದೇ. ಏನೇ ಮಾಡಿದರೂ, ಸಂಗೀತ ನಿರ್ದೇಶನ ಮಾಡಿದವರು ಛಾಯಾಗ್ರಹಣ (Cinematography) ಮಾಡಿದ ಉದಾಹರಣೆ ಭಾರತೀಯ ಚಿತ್ರರಂಗದಲ್ಲಿ ಇಲ್ಲ! [ಸೆನ್ಸೇಷನ್ ಹುಟ್ಟುಹಾಕಲು ತುದಿಗಾಲಲ್ಲಿರುವ ಸಂಗೀತಗಾರ ಇವರೇ!]

  ಯಾಕಂದ್ರೆ, ಛಾಯಾಗ್ರಹಣ ಹಾಗೂ ಸಂಗೀತ ನಿರ್ದೇಶನ...ಎರಡೂ ಬೇರೆ ಬೇರೆ ಕ್ರಿಯೇಟಿವ್ ಫೀಲ್ಡ್. ಎರಡನ್ನೂ ಹ್ಯಾಂಡಲ್ ಮಾಡುವುದು ಅಷ್ಟು ಸುಲಭ ಅಲ್ಲ. ಹೀಗಿದ್ದರೂ, ಎರಡನ್ನೂ ಅಭ್ಯಾಸ ಮಾಡಿ ಇಡೀ ಇಂಡಿಯಾದಲ್ಲೇ ಹೊಸ ಇತಿಹಾಸ ಸೃಷ್ಟಿಸಲು ತಯಾರಾಗಿದ್ದಾರೆ ನಮ್ಮ ಕನ್ನಡಿಗ. ಯಾರವರು? ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

  ಕನ್ನಡ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್

  ಕನ್ನಡ ಸಂಗೀತ ನಿರ್ದೇಶಕ ಗಿರಿಧರ್ ದಿವಾನ್

  ಚಿರಂಜೀವಿ ಸರ್ಜಾ ಅಭಿನಯದ 'ಚಿರು', ಬಿಡುಗಡೆಗೆ ಸಿದ್ದವಾಗಿರುವ ಜಗ್ಗೇಶ್ ಅಭಿನಯದ 'ಮೇಲುಕೋಟೆ ಮಂಜ' ಸೇರಿದಂತೆ 13 ಕನ್ನಡ ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಗಿರಿಧರ್ ದಿವಾನ್, ಚಿತ್ರವೊಂದಕ್ಕೆ ಛಾಯಾಗ್ರಾಹಕರಾಗುವ ಜೊತೆಗೆ ಸಂಗೀತ ನಿರ್ದೇಶನವನ್ನೂ ಮಾಡಲಿದ್ದಾರೆ.

  ಸಂಗೀತ ಕುಟುಂಬದಲ್ಲಿ ಬೆಳೆದವರು!

  ಸಂಗೀತ ಕುಟುಂಬದಲ್ಲಿ ಬೆಳೆದವರು!

  ಸಂಗೀತ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಗಿರಿಧರ್ ದಿವಾನ್, ಜೆ.ಎಸ್.ಎಸ್ ಸ್ಕೂಲ್ ಆಫ್ ಫೈನ್ ಆರ್ಟ್ಸ್, ಮುಂಬೈನಲ್ಲಿ ಫೋಟೋಗ್ರಫಿಯಲ್ಲಿ ಪದವಿ ಪಡೆದಿದ್ದಾರೆ.

  3000 ಕ್ಕೂ ಹೆಚ್ಚು ಆಡ್ ಫಿಲ್ಮ್ಸ್ ಮಾಡಿರುವ ಖ್ಯಾತಿ

  3000 ಕ್ಕೂ ಹೆಚ್ಚು ಆಡ್ ಫಿಲ್ಮ್ಸ್ ಮಾಡಿರುವ ಖ್ಯಾತಿ

  ಸಿನಿಮಾಗಳಿಂದ ಫೋಟೋಗ್ರಫಿ ಗೀಳು ಅಂಟಿಸಿಕೊಂಡ ಗಿರಿಧರ್ ದಿವಾನ್ 18 ವರ್ಷಗಳಿಂದ ಅನೇಕ ಬ್ರ್ಯಾಂಡ್ ಗಳಿಗೆ 3000 ಕ್ಕೂ ಹೆಚ್ಚು ಆಡ್ ಕ್ಯಾಂಪೇನ್ ಮಾಡಿದ್ದಾರೆ. ಜೊತೆಗೆ 200ಕ್ಕೂ ಹೆಚ್ಚು ಆಡ್ ಫಿಲ್ಮ್ ಮಾಡಿದ್ದಾರೆ.

  ಸ್ವಂತ ಸ್ಟುಡಿಯೋ ಇದೆ

  ಸ್ವಂತ ಸ್ಟುಡಿಯೋ ಇದೆ

  ಬೆಂಗಳೂರಿನ ಬಿ.ಟಿ.ಎಂ ಲೇಔಟ್ ನಲ್ಲಿ ಇವರದ್ದೇ ಸ್ವಂತ 'Grey 18 ಸ್ಟುಡಿಯೋಸ್' ಇದೆ. ಹೊಸ ಪ್ರತಿಭೆಗಳಿಗೆ ಮಣೆ ಹಾಕುವ ಗಿರಿಧರ್ ದಿವಾನ್ ಪೇಂಟರ್ ಕೂಡ ಹೌದು.

  ಯಾವ ಚಿತ್ರಕ್ಕೆ ಡಬಲ್ ರೋಲ್?

  ಯಾವ ಚಿತ್ರಕ್ಕೆ ಡಬಲ್ ರೋಲ್?

  ಅಂದ್ಹಾಗೆ, ಬಹುಮುಖ ಪ್ರತಿಭೆ ಗಿರಿಧರ್ ದಿವಾನ್ ಸಂಗೀತ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಮಾಡುತ್ತಿರುವ ಚಿತ್ರ ಯಾವುದು ಅನ್ನೋದು ಸದ್ಯಕ್ಕೆ ಸಸ್ಪೆನ್ಸ್. 'ಹೆಚ್ಚಿನ ಅಪ್ ಡೇಟ್ಸ್ ಗಾಗಿ ಫಿಲ್ಮಿಬೀಟ್ ಕನ್ನಡ' ಓದುತ್ತಿರಿ....

  English summary
  A Man of many talents, Kannada Music Director Giridhar Diwan has turned Cinematographer. Details about the film is awaited.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X