ಶತಕ ಬಾರಿಸಿದ ಗುರುಕಿರಣ್ : ನೂರನೇ ಸಿನಿಮಾ ಶಿವಣ್ಣನ ಜೊತೆ
'ಎ' ಸಿನಿಮಾದಿಂದ ಶುರುವಾದ ಸಂಗೀತ ನಿರ್ದೇಶಕ ಗುರುಕಿರಣ್ ಪ್ರಯಾಣ ಈಗ 100 ಸಿನಿಮಾಗೆ ಬಂದಿದೆ. ನಟ ಶಿವರಾಜ್ ಕುಮಾರ್ ಸಿನಿಮಾದ ಮೂಲಕ ಗುರುಕಿರಣ್ ಶತಕ ಬಾರಿಸುತ್ತಿದ್ದಾರೆ.
'ಆಯುಷ್ಮಾನ್ ಭವ' ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾವಾಗಿದೆ. ಈ ವಿಶೇಷ ಸಂಗತಿಯನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಗುರುಕಿರಣ್ ಹಂಚಿಕೊಂಡಿದ್ದಾರೆ. ತಮಗೆ ಮೊದಲು ಅವಕಾಶ ನೀಡಿದ, ವಿ ಮನೋಹರ್ ಹಾಗೂ ಉಪೇಂದ್ರರಿಗೆ ಧನ್ಯವಾದ ತಿಳಿಸಿದ್ದಾರೆ.
ಹಿಟ್, ಫ್ಲಾಪ್ ಎಲ್ಲವನ್ನು ಕಂಡಿರುವ ಗುರುಕಿರಣ್ ತಮ್ಮ ಕೆರಿಯರ್ ನಲ್ಲಿ ಅನೇಕ ಏಳು, ಬೀಳುಗಳನ್ನು ಅನುಭವಿಸಿದ್ದಾರೆ. 'ಎ', 'ಉಪೇಂದ್ರ', 'ಅಸುರ', 'ಕರಿಯ', 'ಅಪ್ಪು', 'ಅಭಿ', 'ಚಿತ್ರ', 'ನಂದಿ', 'ಕುಟುಂಬ' 'ಜೋಗಿ', 'ಗಂಡುಗಲಿ ಕುಮಾರ ರಾಮ', 'ಆಪ್ತಮಿತ್ರ', 'ಆಪ್ತರಕ್ಷಕ', 'ಅರಮನೆ', 'ಅಮ್ಮ ಐ ಲವ್ ಯೂ' ಸಿನಿಮಾಗಳು ಗುರುಕಿರಣ್ ಪ್ರಮುಖ ಚಿತ್ರಗಳಾಗಿವೆ.

ಪಿ ವಾಸು ಮತ್ತು ಗುರುಕಿರಣ್ ಮತ್ತೆ 'ಆಯುಷ್ಮಾನ್ ಭವ' ಮೂಲಕ ಒಂದಾಗಿದ್ದಾರೆ. ಬಹಳ ದಿನಗಳ ನಂತರ ಮತ್ತೆ ಶಿವರಾಜ್ ಕುಮಾರ್ ಸಿನಿಮಾಗೆ ಗುರುಕಿರಣ್ ಸಂಗೀತ ನೀಡುತ್ತಿದ್ದಾರೆ.

ಸದ್ಯ, ಗುರುಕಿರಣ್ ಟ್ರೆಂಡ್ ಕಡಿಮೆ ಆಗಿದೆ. ಅವರಿಗೆ ಬರುವ ಅವಕಾಶಗಳು ಇಳಿಮುಖ ಆಗಿದೆ. ಅದು ಚಿತ್ರೋದ್ಯಮದಲ್ಲಿ ಸಾಮಾನ್ಯ ಕೂಡ. ಅದೆನೋ ಇದ್ದರೂ, ಗುರುಕಿರಣ್ ಇಷ್ಟ ವರ್ಷಗಳ ಕಾಲ ನೀಡಿರುವ ಎಷ್ಟೋ ಹಾಡುಗಳು ಎಂದಿಗೂ ಜೀವಂತರುತ್ತದೆ.


Click it and Unblock the Notifications











