Music director Ravi Basrur joined Bhairathi Ranagal team

ವೇದ ಚಿತ್ರದ ಮೂಲಕ ಹಿಟ್ ನೀಡಿ ಕಮ್ ಬ್ಯಾಕ್ ಮಾಡಿರುವ ಶಿವ ರಾಜ್‌ಕುಮಾರ್ ನಟಿಸಲಿರುವ ಮುಂದಿನ ಎಲ್ಲಾ ಚಿತ್ರಗಳೂ ಸಹ ದೊಡ್ಡ ಮಟ್ಟದ ನಿರೀಕ್ಷೆಯನ್ನು ಈಗಾಗಲೇ ಹುಟ್ಟುಹಾಕಿವೆ. ವಿಭಿನ್ನ ಸ್ಟಾರ್ ಕಾಸ್ಟ್‌, ವಿಭಿನ್ನ ನಿರ್ದೇಶಕರ ಜತೆ ಶಿವ ರಾಜ್‌ಕುಮಾರ್ ಕೈಜೋಡಿಸಿದ್ದು, ಕುತೂಹಲವನ್ನು ಕೆರಳಿಸಿವೆ.

ಹೌದು, ಸದ್ಯ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಚಿತ್ರದಲ್ಲಿ ಡಾನ್ಸ್ ಕಿಂಗ್ ಪ್ರಭುದೇವ ಜತೆ ಬಣ್ಣ ಹಚ್ಚಿರುವ ಶಿವ ರಾಜ್‌ಕುಮಾರ್ ಇದೇ ಸಮಯಕ್ಕೆ ಯುವ ನಿರ್ದೇಶಕ ಶ್ರೀನಿ ಜತೆ ಸಹ ಶಿವ ರಾಜ್‌ಕುಮಾರ್ ಕೈಜೋಡಿಸಿದ್ದು ಘೋಸ್ಟ್ ಎಂಬ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ತಮಿಳಿನ ಜೈಲರ್ ಹಾಗೂ ಕ್ಯಾಪ್ಟನ್ ಮಿಲ್ಲರ್ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿರುವ ಶಿವ ರಾಜ್‌ಕುಮಾರ್ ಅರ್ಜುನ್ ಜನ್ಯಾ ಮೊದಲ ಬಾರಿಗೆ ನಿರ್ದೇಶನ ಮಾಡಲಿರುವ ಫಾರ್ಟಿ ಫೈವ್ ಎಂಬ ಚಿತ್ರದಲ್ಲಿಯೂ ಸಹ ನಟಿಸುತ್ತಿದ್ದಾರೆ.

Music director Ravi Basrur joined Bhairathi Ranagal team

ಈ ಚಿತ್ರಗಳನ್ನು ಘೋಷಿಸಿ ತನ್ನ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದ್ದ ಶಿವ ರಾಜ್‌ಕುಮಾರ್ ಇತ್ತೀಚೆಗಷ್ಟೆ ಮಫ್ತಿ ಚಿತ್ರದ ಪ್ರೀಕ್ವೆಲ್ ಭೈರತಿ ರಣಗಲ್ ಚಿತ್ರವನ್ನೂ ಸಹ ಘೋಷಿಸಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದ್ದರು. ಹೌದು, 2017ರಲ್ಲಿ ಬಿಡುಗಡೆಗೊಂಡಿದ್ದ ಸೂಪರ್ ಹಿಟ್ ಬ್ಲಾಕ್‌ಬಸ್ಟರ್ ಚಲನಚಿತ್ರ ಮಫ್ತಿ ಚಿತ್ರದ ಎರಡನೇ ಭಾಗ ಭೈರತಿ ರಣಗಲ್ ಯಾವಾಗ ಸೆಟ್ಟೇರುತ್ತೆ ಎಂದು ಶಿವ ರಾಜ್‌ಕುಮಾರ್ ಅಭಿಮಾನಿಗಳು ಹಲವು ದಿನಗಳಿಂದ ಪ್ರಶ್ನೆ ಹಾಕುತ್ತಲೇ ಇದ್ದರು.

ಈ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದ್ದು, ಭೈರತಿ ರಣಗಲ್ ಘೋಷಣೆಯಾಗಿದೆ. ಮೊದಲಿಗೆ ಚಿತ್ರವನ್ನು ಘೋಷಿಸಿದ ಚಿತ್ರತಂಡ ಬಳಿಕ ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಪ್ರತ್ಯೇಕವಾಗಿ ಪೋಸ್ಟರ್ ಬಿಡುಗಡೆ ಮಾಡಿ ಇದು ಪ್ಯಾನ್ ಇಂಡಿಯಾ ಸಿನಿಮಾ‌ ಎಂಬುದನ್ನು ಘೋಷಿಸಿತು.

ಹೀಗೆ ಪ್ಯಾನ್ ಇಂಡಿಯಾ ಸಿನಿಮಾ ಎಂದು ಘೋಷಿಸಿದ್ದ ಭೈರತಿ ರಣಗಲ್ ಚಿತ್ರಕ್ಕೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂಬುದನ್ನು ಚಿತ್ರತಂಡ ಘೋಷಿಸಿದೆ‌. ಪೋಸ್ಟರ್ ಒಂದನ್ನು ಬಿಡುಗಡೆ ಮಾಡುವ ಮೂಲಕ ರವಿ ಬಸ್ರೂರು ಅವರನ್ನು ತಂಡಕ್ಕೆ ಸ್ವಾಗತಿಸಿದೆ. ಈ ಹಿಂದೆ ಇದೇ ತಂಡದ ಜತೆ ಕೈ ಜೋಡಿಸಿ ಮಫ್ತಿಗೂ ಸಂಗೀತ ನಿರ್ದೇಶನ ಮಾಡಿ ಗೆದ್ದಿದ್ದ ರವಿ ಬಸ್ರೂರು ಈಗ ಭೈರತಿ ರಣಗಲ್ ಸಿನಿಮಾಗೂ ಕೆಲಸ ನಿರ್ವಹಿಸಲಿದ್ದಾರೆ‌.

More from Filmibeat

English summary
Music director Ravi Basrur joined Bhairathi Ranagal team. Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X