Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
KGF 2: 'ತೂಫಾನ್' ಹಾಡಿನ ಸಂಗೀತದ ಬಗ್ಗೆ ಅಪಸ್ವರ: ಎಡವಿದ್ರಾ 'ರವಿಬಸ್ರೂರು'?
ಏಪ್ರಿಲ್ 14ಕ್ಕೆ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗ್ತಿದೆ. ಸಿನಿಮಾದ ಘರ್ಜನೆ ಯಾವ ಮಟ್ಟಿಗೆ ಇರುತ್ತೆ ಎನ್ನುವ ಬಗ್ಗೆ ಚಿತ್ರದ ಮೊದಲ ಹಾಡು ಹೇಳುತ್ತಿದೆ. 'ತೂಫಾನ್' ಹಾಡು ಎಲ್ಲೆಡೆ ಘರ್ಜಿಸುತ್ತಿದೆ. ಹಾಡು ಕೇಳಿದಾಗ ಅದ್ಭುತವಾಗಿದೆ ಅನಿಸುತ್ತೆ. ಮೊದಲು ಹಾಡು ಕೇಳಿದಾಗ ಎಲ್ಲೊ ಕಳೆದು ಹೋಗಿ ಬಿಡ್ತಾರೆ. ಆದರೆ ಈ ಹಾಡಿನ ಸಂಗೀತದ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ.
ಆದರೆ ಈ ಹಾಡನ್ನು ಎಲ್ಲೋ ಕೇಳಿದ್ದೇವೆ ಅಂತ ಅನಿಸುತ್ತದೆ. ಯಾಕೆಂದರೆ ಈ ಹಾಡಿನ ಸಂಗೀತ ಕೆಜಿಎಫ್ ಮೊದಲ ಭಾಗದ ಹಾಡುಗಳನ್ನು ನೆನಪಿಸುತ್ತದೆ. ಮೊದಲೇ ಈ ಹಾಡನ್ನು ಎಲ್ಲೋ ಕೇಳಿದ್ದೇವೆ ಅಂತ ಅನಿಸುತ್ತಿದೆ ಎಂದು ಹಲವು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ, ಹಾಡು ಚೆನ್ನಾಗಿ ಇದೆ. ಆದರೆ ಸಂಗೀತ ಅದೇ ಹಳೆಯ ರಾಗ, ತಾಳವನ್ನು ನೆನಪಿಸುತ್ತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.
Toofan
KGF2
Song
Records:
'ಕೆಜಿಎಫ್
2'
ಮೊದಲ
ಹಾಡು
'ತೂಫಾನ್'
5
ಗಂಟೆಗಳಲ್ಲಿ
ಬರೆದ
ದಾಖಲೆಗಳು
ಏನೇನು?
Recommended Video

ಸಂಗೀತ ನಿರ್ದೇಶಕ ರವಿ ಬಸ್ರೂರು ಹಾಡುಗಳಿಗೆ, ಸಂಗೀತಕ್ಕೆ ಸಾಕಷ್ಟು ಅಭಿಮಾನಿಗಳು ಇದ್ದಾರೆ. ಹಾಗಾಗಿ ಎಲ್ಲರೂ ಅವರ ಹಾಡುಗಳನ್ನು ಕೇಳಿರುತ್ತಾರೆ. ಈ ಕಾರಣಕ್ಕೆ ಸುಲಭವಾಗಿ ಸೇಮ್ ಟ್ಯೂನ್‌ಗಳನ್ನು ಗುರುತಿಸುತ್ತಿದ್ದಾರೆ. ಈ ಹಾಡಿನಲ್ಲೂ ಮೊದಲೇ ಕೇಳಿದ ಟ್ಯೂನ್‌ಗಳು ರಿಪೀಟ್ ಆಗಿವೆ. ಈ ಕಾರಣಕ್ಕೆ ಜನ ರವಿಬಸ್ರೂರು ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ.
https://twitter.com/Kannada_BO/status/1505783147388338176 |
ತೂಫಾನ್ ಹಾಡಿನ ಸಂಗೀತದ ಬಗ್ಗೆ ಜನರ ಅಭಿಪ್ರಾಯ ಇದು!
ರವಿ ಬಸ್ರೂರು ಸಂಗೀತದಲ್ಲಿ BGM ಎಲ್ಲರಿಗೂ ಇಷ್ಟ ಆಗುತ್ತೆ. ಬಸ್ರೂರು ಕೊಡುವ ಬಿಜಿಎಂಗೆ ಯಾರು ಸರಿ ಸಾಟಿ ಇಲ್ಲ ಅಂತಲೇ ಹೇಳಲಾಗುತ್ತದೆ. ಆದರೆ 'ತೂಫಾನ್' ಹಾಡಿನ ಒಟ್ಟಾರೆ ಸಂಗೀತ ಮಾತ್ರ ಅದೇ ಹಳೆಯ ಸ್ವರವನ್ನು ನೆನಪಿಸುತ್ತದೆ. ಹಾಗಾಗಿ ಈ ಹಾಡಿನ ಸಂಗೀತದ ಬಗ್ಗೆ ಪ್ರೇಕ್ಷಕರು ಅಪಸ್ವರ ಎತ್ತಿದ್ದಾರೆ. ರವಿ ಬಸ್ರೂರು ಯಾಕೆ ಅದೇ ಸೇಮ್ ಫೀಲ್ ಬರುವ ಹಾಗೆ ಸಂಗೀತ ಮಾಡುತ್ತಿದ್ದಾರೆ ಎನ್ನುವ ಬಗ್ಗೆ ಚರ್ಚೆ ಶುರುವಾಗಿದೆ.

ಧೀರ, ಧೀರ ಹಾಡು ನೆನಪಿಸುವ ತೂಫಾನ್!
'ಕೆಜಿಎಫ್ 2' ಚಿತ್ರದ ತೂಫಾನ್ ಮತ್ತು ಕೆಜಿಎಫ್ ಭಾಗ 1 ಚಿತ್ರದ ಧೀರ, ಧೀರ ಹಾಡು ಒಂದೇ ರೀತಿ ಎನಿಸುತ್ತದೆ. ಬಹುಶಃ ಆ ಹಾಡಿನಲ್ಲೂ ಕೂಡ ರಾಕಿ ಭಾಯ್ ಪಾತ್ರವನ್ನು ವರ್ಣಿಸುವಂತಹ ಸಾಲು ಇವೆ. ಈ ಹಾಡಿನಲ್ಲೂ ನಾಯಕನ ವರ್ಣನೆ ಮಾಡುವ ಸಾಲುಗಳಿವೆ. ಜೊತೆಗೆ ಅಷ್ಟೆ ಭರ್ಜರಿಯಾದ ಸಂಗೀತ ಇದೆ. ಹಾಗಾಗಿ ಎರಡೂ ಹಾಡುಗಳು ಒಂದೇ ಫೀಲ್ ಕೊಡುತ್ತಿವೆ.

ತೂಫಾನ್ ನೆಚ್ಚಿಕೊಂಡ ಹಲವು ಮಂದಿ!
ಕೆಜಿಎಫ್ ಭಾಗ ಒಂದರ ಮುಂದುವರೆದ ಭಾಗ ಕೆಜಿಎಫ್ 2. ಆದ ಕಾರಣ ಈ ಹಾಡಿನಲ್ಲೂ ಬೇಕು ಅಂತಲೇ ಚಿತ್ರತಂಡ ಆ ಫೀಲ್ ಕ್ಯಾರಿ ಮಾಡಿರಬಹುದು. ಏನೇ ಇದ್ದರೂ ಹಾಡೂ ಸೂಪರ್ ಎಂದು ಸಾಕಷ್ಟು ಮಂದಿ ಚಪ್ಪಾಳೆ ತಟ್ಟುತ್ತಿದ್ದಾರೆ. ಆದರೆ ಎಲ್ಲೋ ಕೆಲವೊಂದು ಅಪ್ವರಗಳು ಕೇಳಿ ಬರುತ್ತಿವೆ. ಆದರೆ ಬಹುತೇಕರಿಗೆ ತೂಫಾನ್ ನೆಚ್ಚಿನ ಹಾಡಾಗಿ ಬಿಟ್ಟಿದೆ.

ದಾಖಲೆ ಬರೆದ ತೂಫಾನ್ ಹಾಡು!
ತೂಫಾನ್ ಹಾಡು ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ದೊಡ್ಡ ಮಟ್ಟದ ವೀಕ್ಷಣೆ ಪಡೆದು ಘರ್ಜಿಸುತ್ತಿದೆ. ಈ ಹಿಂದೆ ತಮಿಳು ಚಿತ್ರ ಬೀಸ್ಟ್ ಹಾಡು ಮಾಡಿದ್ದ ರೆಕಾರ್ಡ್ ಮುರಿದು ಹಾಕಿದೆ 'ತೂಫಾನ್'. ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಮಿಲಿಯನ್ ವೀಕ್ಷನೆ ಪಡೆದುಕೊಂಡಿದೆ. ಇದು ರಾಕಿ ಭಾಯ್ ಅವತಾರದ ಒಂದು ಸಣ್ಣ ಇಂಟ್ರೋ ಅಷ್ಟೆ. ಇನ್ನು ಸಿನಿಮಾ ಬಂದ ಮೇಲೆ ರಾಕಿ ಸಾಮ್ರಾಜ್ಯದ ಅಸಲಿ ದರ್ಶನ ಆಗಲಿದೆ.