'ಸಲಾರ್' ವಿಚಾರದಲ್ಲಿ ಮತ್ತೆ ಗೊಂದಲ: ರೀಮೇಕ್ ವಿಷ್ಯ ಮುಚ್ಚಿಡ್ತಿದ್ದಾರಾ ಪ್ರಶಾಂತ್ ನೀಲ್?

ಕೆಜಿಎಫ್ ಚಾಪ್ಟರ್ 2 ಮುಗಿದ ಮೇಲೆ ನಿರ್ದೇಶಕ ಪ್ರಶಾಂತ್ ನೀಲ್ ಉಗ್ರಂ ಸೀಕ್ವೆಲ್ ಮಾಡ್ತಾರೆ ಎಂಬ ಸಣ್ಣ ಕುತೂಹಲ ಇತ್ತು. ಉಗ್ರಂ 2 ಕಥೆ ತಯಾರಿದ್ದು ಶ್ರೀಮುರಳಿ ಜೊತೆ ಮತ್ತೊಮ್ಮೆ ಸಿನಿಮಾ ಅನೌನ್ಸ್ ಮಾಡ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಕೊನೆ ಕ್ಷಣದಲ್ಲಿ ಸರ್ಪ್ರೈಸ್ ಎಂಬಂತೆ ಟಾಲಿವುಡ್ ಸ್ಟಾರ್ ಪ್ರಭಾಸ್ ಜೊತೆ ಸಲಾರ್ ಘೋಷಿಸಿದರು. ಅಲ್ಲಿಗೆ ಉಗ್ರಂ ಮುಂದುವರಿದ ಭಾಗದ ಕನಸು ಕಂಡಿದ್ದವರಿಗೆ ಮತ್ತೆ ನಿರಾಸೆ.

Recommended Video

ಪ್ರಶಾಂತ್ ನೀಲ್ ಹೇಳಿದ ಸುಳ್ಳನ್ನು ಮಾದ್ಯಮಗಳ ಮುಂದೆ ಬಿಚ್ಚಿಟ್ಟ ರವಿ ಬಸ್ರೂರ್

ಸಲಾರ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆದ್ಮೇಲೂ ಸಣ್ಣದೊಂದು ಕುತೂಹಲ. ಉಗ್ರಂ 2 ಕಥೆಯನ್ನು ಪ್ರಭಾಸ್ ಜೊತೆ ಮಾಡ್ತಿರಬಹುದಾ ಎಂಬ ಮಾತುಗಳು ಗಾಂಧಿನಗರದಲ್ಲಿ ಚರ್ಚೆಯಾಗಲು ಶುರುವಾಯಿತು. ಈ ಮಧ್ಯೆ ಶ್ರೀಮುರಳಿ ನಟಿಸಿದ್ದ ಉಗ್ರಂ ಚಿತ್ರವನ್ನೇ ಪ್ರಭಾಸ್‌ಗೆ ರೀಮೇಕ್ ಮಾಡ್ತಿದ್ದಾರೆ ಎನ್ನುವುದು ಕೇಳಿಬಂತು. ಇದಕ್ಕೆ ಫಟ್ ಅಂತ ಪ್ರತಿಕ್ರಿಯೆ ನೀಡಿದ ಪ್ರಶಾಂತ್ ನೀಲ್ ''ಇದು ರೀಮೇಕ್ ಸಿನಿಮಾ ಅಲ್ಲ'' ಎಂದು ಹೇಳಿಬಿಟ್ಟರು. ಅಲ್ಲಿಗೆ ಅಭಿಮಾನಿಗಳು ನಿಟ್ಟುಸಿರು ಬಿಟ್ಟರು. ಇದೀಗ, ಸಲಾರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡ್ತಿರುವ ರವಿಬಸ್ರೂರ್ ''ಇದು ರೀಮೇಕ್'' ಎಂದಿದ್ದಾರೆ. ಮುಂದೆ ಓದಿ...

ನೀಲ್ ರೀಮೇಕ್ ಅಲ್ಲ ಅಂದ್ರು, ಬಸ್ರೂರ್ ರೀಮೇಕ್ ಅಂದ್ರು!

ನೀಲ್ ರೀಮೇಕ್ ಅಲ್ಲ ಅಂದ್ರು, ಬಸ್ರೂರ್ ರೀಮೇಕ್ ಅಂದ್ರು!

ಉಗ್ರಂ ರೀಮೇಕ್ ಎಂಬ ವಿಚಾರದ ಕುರಿತು ತೆಲುಗು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದ ಪ್ರಶಾಂತ್ ನೀಲ್, 'ಸಲಾರ್ ಸಿನಿಮಾ ಪ್ರಭಾಸ್ ಗಾಗಿ ನಿರ್ದೇಶನ ಮಾಡಲಾಗುತ್ತಿರುವ ಚಿತ್ರ, ಇದು ಉಗ್ರಂ ಸಿನಿಮಾದ ರೀಮೇಕ್ ಅಲ್ಲ. ಯಾವ ಬಾಲಿವುಡ್ ಸಿನಿಮಾದ ರೀಮೇಕ್ ಸಹ ಅಲ್ಲ. ಪ್ರಭಾಸ್‌ಗೋಸ್ಕರವೇ ಬರೆಯಲಾದ ಕತೆ. ಒರಿಜಿನಲ್ ಐಡಿಯಾವೊಂದನ್ನು ಪ್ರಭಾಸ್ ಗೆ ತಕ್ಕಂತೆ ಚಿತ್ರಕತೆಯಾಗಿ ರೂಪಿಸಿ ಇದೀಗ ಸಿನಿಮಾ ಮಾಡಲಾಗುತ್ತಿದೆ' ಎಂದು ಹೇಳಿದ್ದರು.

ರೀಮೇಕ್ ಎನ್ನುವುದು ಎಲ್ಲರಿಗೂ ಗೊತ್ತಿದೆ

ರೀಮೇಕ್ ಎನ್ನುವುದು ಎಲ್ಲರಿಗೂ ಗೊತ್ತಿದೆ

ರವಿಚಂದ್ರನ್ ನಟನೆಯ 'ಕನ್ನಡಿಗ' ಚಿತ್ರದ ಹಾಡೊಂದಕ್ಕೆ ಶಿವಣ್ಣ ದನಿಗೂಡಿಸಿದ್ದಾರೆ. ಈ ಹಾಡಿನ ರೆಕಾರ್ಡಿಂಗ್ ಬೆಂಗಳೂರಿನ ರವಿ ಬಸ್ರೂರ್ ಸ್ಟುಡಿಯೋದಲ್ಲಿ ನಡೆಯಿತು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಸಲಾರ್ ಸಿನಿಮಾ ಉಗ್ರಂ ರೀಮೇಕ್ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರವಿ ಬಸ್ರೂರ್, ''ಅದು ಎಲ್ಲರಿಗೂ ಗೊತ್ತಿರುವ ವಿಚಾರ. ರೀಮೇಕ್ ಆದರೂ ಇವರು ಹೇಗೆ ಮಾಡ್ತಾರೆ ಎನ್ನುವುದು ಗೊತ್ತಿದೆ'' ಎಂದು ಹೇಳಿದರು. ಇದು ಕನ್ನಡ ಪ್ರಕ್ಷಕರಲ್ಲಿ ಗೊಂದಲ ಸೃಷ್ಟಿಸಿದೆ. ಪ್ರಶಾಂತ್ ನೀಲ್ ರೀಮೇಕ್ ಅಲ್ಲ ಅಂದ್ರು, ಇವರು ರೀಮೇಕ್ ಅಂತಿದ್ದಾರೆ ಅಲ್ವೇ ಎಂದು ಅನುಮಾನದಿಂದ ನೋಡುವಂತಾಗಿದೆ.

ಪ್ರಶಾಂತ್ ರೀಮೇಕ್ ಮಾಡ್ತಾರಾ?

ಪ್ರಶಾಂತ್ ರೀಮೇಕ್ ಮಾಡ್ತಾರಾ?

ಉಗ್ರಂ, ಕೆಜಿಎಫ್ ಅಂತಹ ದೊಡ್ಡ ಹಿಟ್ ಚಿತ್ರಗಳನ್ನು ನೀಡಿರುವ ಪ್ರಶಾಂತ್ ನೀಲ್ ಇಷ್ಟು ಬೇಗ ರೀಮೇಕ್ ಚಿತ್ರಕ್ಕೆ ಕೈ ಹಾಕ್ತಾರಾ? ಬಾಹುಬಲಿ ಆದ್ಮೇಲೆ ಪ್ರಭಾಸ್ ರೇಂಜ್ ಬದಲಾಗಿದೆ. ಕೆಜಿಎಫ್ ಆದ್ಮೇಲೆ ಪ್ರಶಾಂತ್ ನೀಲ್ ರೇಂಜ್ ಬದಲಾಗಿದೆ. ಈ ಸಮಯದಲ್ಲಿ ಏಳು ವರ್ಷದ ಹಿಂದಿನ ಚಿತ್ರದ ರೀಮೇಕ್‌ಗೆ ಕೈ ಹಾಕ್ತಾರಾ? ಸದ್ಯದ ಬೆಳವಣಿಗೆ ನೋಡಿದ್ರೆ ಅನುಮಾನ ಹೆಚ್ಚಾಗುತ್ತಿದೆ.

ಕನ್ನಡದಲ್ಲಿ ಬಿಡುಗಡೆ ಏಕೆ?

ಕನ್ನಡದಲ್ಲಿ ಬಿಡುಗಡೆ ಏಕೆ?

ಸಲಾರ್ ಒಂದು ವೇಳೆ ಉಗ್ರಂ ಚಿತ್ರದ ರೀಮೇಕ್ ಆಗಿದ್ದರೆ ಕನ್ನಡದಲ್ಲಿ ಈ ಸಿನಿಮಾ ರಿಲೀಸ್ ಮಾಡುವ ನಿರ್ಧಾರ ಏಕೆ ಮಾಡುತ್ತಿದ್ದರು. ಉಗ್ರಂ ಸಿನಿಮಾ ನೋಡಿರುವ ಕನ್ನಡ ಪ್ರೇಕ್ಷಕರಿಗೆ ಪ್ರಭಾಸ್ ನಟನೆಯಲ್ಲಿ ಮತ್ತೊಮ್ಮೆ ಉಗ್ರಂ ತೋರಿಸುವಷ್ಟು ಪ್ರಶಾಂತ್ ನೀಲ್ ಯೋಚಿಸಿರುತ್ತಾರಾ? ಈ ಆಯಾಮದಲ್ಲಿ ಯೋಚಿಸಿದರೆ ಇದು ಕಷ್ಟಸಾಧ್ಯ ಎನಿಸುತ್ತಿದೆ.

ನೋ ವೇ ಚಾನ್ಸ್ ಇಲ್ಲ.....

ನೋ ವೇ ಚಾನ್ಸ್ ಇಲ್ಲ.....

ಸಲಾರ್ ಸಿನಿಮಾ ಉಗ್ರಂ ಚಿತ್ರದ ಅಧಿಕೃತ ರೀಮೇಕ್ ಅಲ್ಲ. ಉಗ್ರಂ ಸಿನಿಮಾದ ಒನ್ ಲೈನ್ ಕಥೆ ಇಟ್ಕೊಂಡು ಪ್ರಭಾಸ್‌ಗಾಗಿ ಹೊಸ ಕಥೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಹೊಸ ಪಾತ್ರಗಳು, ಹೊಸ ಕಥೆಯೊಂದಿಗೆ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸಲಾರ್ ತಯಾರಾಗುತ್ತಿದೆ ಎನ್ನಲಾಗಿದೆ. ಅದೇನೇ ಇರಲಿ, ರವಿ ಬಸ್ರೂರ್ ಬಾಯ್ತಪ್ಪಿ ಹೇಳಿದ್ರಾ ಅಥವಾ ಎಕ್ಸೈಟ್‌ಮೆಂಟ್‌ನಲ್ಲಿ ಹೇಳಿದ್ರಾ ಗೊತ್ತಿಲ್ಲ. ಅವರು ಮಾತು ಕೇಳಿದ್ಮೇಲೆ ಸಲಾರ್ ಮೇಲೆ ರೀಮೇಕ್ ಎಂಬ ಅನುಮಾನ ಮಾತ್ರ ಇನ್ನಷ್ಟು ಗಟ್ಟಿಯಾಗಿದೆ. ಒಂದು ವೇಳೆ ರೀಮೇಕ್ ಆಗಿದ್ದರೆ ತುಂಬಾ ದಿನ ಗೌಪ್ಯವಾಗಿಡಲು ಸಾಧ್ಯವಿಲ್ಲ.!

More from Filmibeat

English summary
Kannada Music Director Ravi Basrur said that Salaar is a remake of Ugramm movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X