For Quick Alerts
  ALLOW NOTIFICATIONS  
  For Daily Alerts

  'ಡೆತ್ ಮೆಟಲ್ ಪ್ಯಾಟ್ರನ್'ನ ಮೊದಲ ಬಾರಿಗೆ ಕನ್ನಡಕ್ಕೆ ತಂದ ಚಿತ್ರ '6ನೇ ಮೈಲಿ'

  By Naveen
  |

  ಕನ್ನಡ ಸಿನಿಮಾಗಳ ಗುಣಮಟ್ಟ ಹೆಚ್ಚುತ್ತಿದೆ. ಅದರಲ್ಲಿಯೂ ಮ್ಯೂಸಿಕ್ ತುಂಬ ಸುಧಾರಣೆ ಕಂಡಿದೆ. ಇದೀಗ '6ನೇ ಮೈಲಿ' ಚಿತ್ರ ಹೊಸ ಪ್ರಯೋಗ ಮಾಡಿದೆ. ಈ ಚಿತ್ರದ ಮೂಲಕ ಡೆತ್ ಮೆಟಲ್ ಪ್ಯಾಟ್ರನ್ ಅನ್ನು ಮೊದಲ ಬಾರಿಗೆ ಕನ್ನಡಕ್ಕೆ ತರಲಾಗಿದೆ.

  ಡೆತ್ ಮೆಟಲ್ ಪ್ಯಾಟ್ರನ್ ಅನ್ನು ಹೆಚ್ಚು ಪಾಶ್ಚಿಮಾತ್ಯ ಸಿನಿಮಾಗಳಲ್ಲಿ ಬಳಸುತ್ತಾರೆ. ಕೌರ್ಯ, ಹಿಂಸೆ, ಕೋಪವನ್ನು ಬಿಂಬಿಸುವ ಮ್ಯೂಸಿಕ್ ಇದಾಗಿದೆ. ಈ ಚಿತ್ರಕ್ಕೆ ಈ ಪ್ಯಾಟ್ರನ್ ಸೂಕ್ತವಾಗಿರುತ್ತದೆ ಎಂದು ಭಾವಿಸಿದ ಚಿತ್ರದ ಸಂಗೀತ ನಿರ್ದೇಶಕ ಸಾಯಿ ಕಿರಣ್ ಕನ್ನಡಕ್ಕೆ ಡೆತ್ ಮೆಟಲ್ ಪ್ಯಾಟ್ರನ್ ಅನ್ನು ತಂದಿದ್ದಾರೆ.

  ರಿಯಲ್ ಘಟನೆಗಳ ಸುತ್ತ ಸುತ್ತಲಿದೆ '6ನೇ ಮೈಲಿ' ಸಿನಿಮಾ ರಿಯಲ್ ಘಟನೆಗಳ ಸುತ್ತ ಸುತ್ತಲಿದೆ '6ನೇ ಮೈಲಿ' ಸಿನಿಮಾ

  ಡೆತ್ ಮೆಟಲ್ ಪ್ಯಾಟ್ರನ್ ಅನ್ನು ಲಂಡನ್ ನ Metropolis ಸ್ಟುಡಿಯೊದಲ್ಲಿ ರೆಕಾರ್ಟ್ ಮಾಡಲಾಗಿದೆ. ವಿಶೇಷ ಅಂದರೆ, ಇದು ವಿಶ್ವದ ಅತ್ಯಂತ ಜನಪ್ರಿಯ ಮ್ಯೂಸಿಕ್ ಸ್ಟುಡಿಯೊ ಆಗಿದೆ. ಅಲ್ಲದೆ, ಮೈಕಲ್ ಜಾಕ್ಸನ್ ಅವರ ಎಷ್ಟೋ ಹಾಡುಗಳು ಕೂಡ ಇಲ್ಲಿಯೇ ರೆಕಾರ್ಡ್ ಮಾಡಲಾಗಿದೆ.

  ಇನ್ನು ಗ್ಯಾಮಿ ಪ್ರಶಸ್ತಿ ವಿಜೇತರಾದ Andrew mcgunniess (ಡ್ರಮರ್), Adam Lamprell (ಗಿಟಾರ್), Anna phoebe (ವೈಲಿನ್), Liam Nolan (ಸೌಂಡ್ ಎಂಜಿನಿಯರ್) ಹಾಡಿಗೆ ಕೆಲಸ ಮಾಡಿದ್ದಾರೆ. ಒಂದು ದಿನದಲ್ಲಿ ಲೈವ್ instruments ಮೂಲಕ ರೆಕಾರ್ಡಿಂಗ್ ಮಾಡಲಾಗಿದೆ. ನಂತರ ನಟ ವಸಿಷ್ಟ ಎನ್ ಸಿಂಹ ಹಾಡನ್ನು ಹಾಡಿದ್ದಾರೆ. ಯಶ್ ರಾಜ್ ಸ್ಟುಡಿಯೊದಲ್ಲಿ ಹಾಡಿನ ಮಿಕ್ಸಿಂಗ್ ಕೆಲಸ ನಡೆದಿದೆ.

   Music director Saikiran used death metal patreon music in 6ne maili

  ಚಿತ್ರದಲ್ಲಿ ಒಂದೇ ಹಾಡು ಇದ್ದರೂ ಅದನ್ನು ತುಂಬ ಚೆನ್ನಾಗಿ ಮಾಡಲಾಗಿದೆಯಂತೆ. ಹಾಡಿನ ರೆಕಾರ್ಡಿಂಗ್ ಗೆ ದುಬಾರಿ ವೆಚ್ಚವಾದರೂ ನಿರ್ಮಾಪಕ ಶೈಲೇಶ್ ಕುಮಾರ್ ಕ್ವಾಲಿಟಿಗೆ ರಾಜಿ ಆಗಿಲ್ಲ. ಅಂದಹಾಗೆ, ಸೀನಿ '6ನೇ ಮೈಲಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸಂಚಾರಿ ವಿಜಯ್ ಹಾಗೂ ಆರ್ ಜೆ ನೇತ್ರ ಚಿತ್ರದಲ್ಲಿ ನಟಿಸಿದ್ದಾರೆ. ಡೆತ್ ಮೆಟಲ್ ಪ್ಯಾಟ್ರನ್ ಹೇಗಿರುತ್ತದೆ ಎಂಬ ಅನುಭವ ನಿಮಗೂ ಆಗಬೇಕು ಅಂದರೆ ಜುಲೈ 6ರಂದು ಚಿತ್ರಮಂದಿರಕ್ಕೆ ಹೋಗಿ '6ನೇ ಮೈಲಿ' ಸಿನಿಮಾ ನೋಡಿ.

  English summary
  Music director Saikiran used death metal patron music in kannada movie '6ne maili'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X