ರಘು ದೀಕ್ಷಿತ್ ವಿವಾಹವಾಗುತ್ತಿರುವ ವರಿಜಾಶ್ರೀ ವೇಣುಗೋಪಾಲ್ ಯಾರು? ಇಬ್ಬರ ನಡುವಿನ ವಯಸ್ಸಿನ ಅಂತರವೇನು?

By ಫಿಲ್ಮಿಬೀಟ್ ಡೆಸ್ಕ್

ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಎರಡನೇ ಬಾರಿ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ರಘು ದೀಕ್ಷಿತ್ ಮದುವೆ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ. ವಿವಾಹ ಬಂಧನದಿಂದ ಹೊರ ಬಂದಿದ್ದ ಸಂಗೀತ ನಿರ್ದೇಶಕನ ಬಾಳಲ್ಲಿ ಹೊಸ ಬೆಳಕು ಮೂಡಿದೆ. ವೈಯಕ್ತಿಕ ಜೀವನದ ಏರಿಳಿತಗಳ ನಡುವೆ ಹೊಸ ಜೀವನಕ್ಕೆ ಕಾಲಿಡುವ ಉತ್ಸಾಹದಲ್ಲಿ ಇದ್ದಾರೆ.

ರಘು ದೀಕ್ಷಿತ್ ಮೂಲತ: ಮೈಸೂರಿನವರು. ಸಂಗೀತ ಲೋಕದಲ್ಲಿ ಗಾಯಕರಾಗಿ, ಕಂಪೋಸರ್ ಆಗಿ, ಸಾಂಗ್ ರೈಟರ್ ಆಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ದೇಶ-ವಿದೇಶಗಳಲ್ಲಿ ಸಂಗೀತ ಸಂಜೆಗಳಲ್ಲಿ ಭಾಗಿಯಾಗುತ್ತಾರೆ. ಕನ್ನಡ, ಹಿಂದಿ ಸೇರಿದಂತೆ ಹಲವು ಸಿನಿಮಾಗಳಿಗೂ ಸಂಗೀತ ಸಂಯೋಜನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ವಿಶಿಷ್ಠ ಶೈಲಿಯ ಸಂಗೀತ ಪ್ರಯೋಗಕ್ಕೆ ಮ್ಯೂಸಿಕ್ ಲವರ್ಸ್ ಮನಸೋತಿದ್ದಾರೆ.

Musician Raghu Dixit future wife Varijashree Venugopal age occupation

ವೃತ್ತಿ ಜೀವನವೇನೋ ಅದ್ಭುತವಾಗಿತ್ತು. ಆದರೆ, ವೈವಾಹಿಕ ಜೀವನ ಅಂದುಕೊಂಡಂತೆ ಇರಲಿಲ್ಲ. ಹೀಗಾಗಿ ಮೊದಲ ಪತ್ನಿಯಿಂದ 2019ರಲ್ಲಿ ವಿಚ್ಚೇದನ ಪಡೆದಿದ್ದರು. ಆದ್ರೀಗ 50 ವರ್ಷದ ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ ಬಾಳಿಗೆ ಜಗತ್ಪ್ರಸಿದ್ಧ ಗಾಯಕಿಯ ಎಂಟ್ರಿಯಾಗಿದೆ. ಅವರೇ ಗ್ರ್ಯಾಮಿ-ನಾಮನಿರ್ದೇಶಿತ ಕನ್ನಡ ಗಾಯಕಿ ವಾರಿಜಶ್ರೀ ವೇಣುಗೋಪಾಲ್. ಹಾಗಿದ್ದರೆ, ರಘು ದೀಕ್ಷಿತ್ ಮನ ಸೋತಿರೋ ಈ ಗಾಯಕಿಯ ಹಿನ್ನೆಲೆಯೇನು? ಇಬ್ಬರ ವಯಸ್ಸಿನ ನಡುವಿನ ಅಂತರವೇನು? ತಿಳಿಯುವುದಕ್ಕೆ ಮುಂದೆ ಓದಿ.

ರಘು ದೀಕ್ಷಿತ್ ಜೊತೆ ಸಪ್ತಪದಿ ತುಳಿಯುವುದಕ್ಕೆ ಸಜ್ಜಾಗಿರುವ ವಾರಿಜಶ್ರೀ ವೇಣುಗೋಪಾಲ್ ಮೂಲತ: ಮೈಸೂರಿನವರು. ಸಂಗೀತ ಕುಟುಂಬದಲ್ಲಿ ಜನಿಸಿರುವ ವಾರಿಜಶ್ರೀ ಕೂಡ ಕೊಳಲುವಾದಕಿಯಾಗಿ, ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. 2024ರಲ್ಲಿ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿ ಗ್ರ್ಯಾಮಿಗೆ ನಾಮಿನೇಟ್ ಆಗಿದ್ದರು. ಇವರು ಕರ್ನಾಟಕ ಸಂಗೀತ ಹಾಗೂ ಜಾಜ್ ಪ್ರಕಾರ ಸಂಗೀತ ಶೈಲಿಯಲ್ಲಿ ಗುರುತಿಸಿಕೊಂಡಿದ್ದಾರೆ.

ವಾರಿಜಶ್ರೀ ತಂದೆ ವೇಣುಗೋಪಾಲ್ ಹಾಗೂ ಟಿವಿ ರಮಾ ಇಬ್ಬರೂ ಕೂಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರೇ. ಹೀಗಾಗಿ ವಾರಿಜಶ್ರೀ ಕೂಡ ಚಿಕ್ಕ ವಯಸ್ಸಿನಲ್ಲಿಯೇ ಸಂಗೀತ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದರು. ರಘು ದೀಕ್ಷಿತ್ ಜೊತೆ ವಾರಿಜಶ್ರೀ ವೇಣುಗೋಪಾಲ್ ಹಲವು ವೇದಿಕೆಗಳಲ್ಲಿ ಜೊತೆಯಾಗಿ ಕಾರ್ಯಕ್ರಮ ಕೊಟ್ಟಿದ್ದಾರೆ. ಸಂಗೀತ ಸಂಜೆಗಳಲ್ಲಿ ಭಾಗಿಯಾಗಿದ್ದಾರೆ. ಇಬ್ಬರೂ ಮೈಸೂರಿನವರೇ ಆಗಿರೋದು ಇನ್ನೊಂದು ವಿಶೇಷ.

Musician Raghu Dixit future wife Varijashree Venugopal age occupation

ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಇಬ್ಬರೂ ಬಹಳ ವರ್ಷಗಳಿಂದ ಪರಿಚಿತರು. ಆರಂಭದ ಸ್ನೇಹ ಬಳಿಕ ಪ್ರೀತಿಗೆ ತಿರುಗಿತ್ತು. ಈಗ ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದ್ದಾರೆ. ರಘು ದೀಕ್ಷಿತ್‌ಗೆ ಈಗ 50 ವರ್ಷ ಹಾಗೇ ವಾರಿಜಶ್ರೀ ವೇಣುಗೋಪಾಲ್‌ಗೆ 34 ವರ್ಷ (ವಿಕಿಪೀಡಿಯಾ ಪ್ರಕಾರ). ಇಬ್ಬರ ನಡುವೆ 16 ವರ್ಷಗಳ ವಯಸ್ಸಿನ ಅಂತರವಿದೆ. ಪ್ರೀತಿಗೆ ವಯಸ್ಸು ಮುಖ್ಯ ಅಲ್ಲ ಅನ್ನೋದನ್ನು ಈ ಜೋಡಿ ಸಾಬೀತು ಮಾಡಿದೆ.

ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಘು ದೀಕ್ಷಿತ್ ಕೌಟುಂಬಿಕ ಜೀವನದ ಎರಡನೇ ಇನ್ನಿಂಗ್ಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. "ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಬದುಕಿನ ಉಳಿದ ದಿನಗಳನ್ನು ಒಂಟಿಯಾಗಿಯೇ ಕಳೆಯಲು ನಿರ್ಧರಿಸಿದ್ದೆ. ಆದರೆ, ಆರಂಭದಲ್ಲಿ ನಮ್ಮಿಬ್ಬರ ನಡುವೆ ಇದ್ದ ಸ್ನೇಹ ಪ್ರೀತಿಯಾಗಿ ಬದಲಾಯಿತು. ವಾರಿಜಶ್ರೀ ಪೋಷಕರ ಆಶೀರ್ವಾದದಿಂದ ನಮ್ಮ ಬದುಕಿನ ಈ ಹೊಸ ಅಧ್ಯಾಯ ಆರಂಭ ಆಗುತ್ತಿದೆ" ಎಂದು ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಹೇಳಿದ್ದಾರೆ.

ರಘು ದೀಕ್ಷಿತ್ 2005ರಲ್ಲಿ ಕನ್ನಡದ ಜನಪ್ರಿಯ ಡ್ಯಾನ್ಸರ್ ಮಯೂರಿ ಉಪಾಧ್ಯ ಅವರನ್ನು ವಿವಾಹವಾಗಿದ್ದರು. ಆದರೆ, ಇಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಬಿಟ್ಟಿದ್ದು, 2019ರಲ್ಲಿ ಇಬ್ಬರೂ ವಿಚ್ಚೇದನ ಪಡೆದು ಬೇರೆಯಾಗಿದ್ದರು. ಡಿವೋರ್ಸ್ ಆದ ಆರು ವರ್ಷಗಳ ಬಳಿಕ ಎರಡನೇ ಮದುವೆಗೆ ರಘು ದೀಕ್ಷಿತ್ ರೆಡಿಯಾಗಿದ್ದು, ಇದೇ ತಿಂಗಳು ವಿವಾಹ ಜರುಗಲಿದೆ ಎಂದು ವರದಿಯಾಗಿದೆ.

More from Filmibeat

English summary
Musician Raghu Dixit Future Wife Varijashree Venugopal Age, Occupation, Career Details.
Read more about: raghu dixit marriage sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X