KGF 2 trailer :ಒಂದಿಷ್ಟು ಕಾರಣಗಳಿಂದ ಕುತೂಹಲ ಹೆಚ್ಚಿಸಿರುವ ಕೆಜಿಎಫ್ 2 ಟ್ರೈಲರ್ ಲಾಂಚ್
ಯಶ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ಏ.14 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ ಈ ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗುತ್ತಿದೆ.
ಅದಕ್ಕೂ ಮುನ್ನ ಇಂದು (ಮಾ.27)ರಂದು ಚಿತ್ರದ ಟ್ರೈಲರ್ ಬಿಡುಗಡೆ ಮಾಡಲು ಸಿನಿಮಾ ತಂಡ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿಗೆ ಪ್ರತಿಷ್ಟಿತ ಸ್ಟಾರ್ ಹೋಟೆಲ್‌ನಲ್ಲಿ ಮಾಧ್ಯಮ ಗೋಷ್ಠಿ ನಡೆಯಲಿದೆ.
ಈ ಮೂಲಕ ಟ್ರೈಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಇಂದು (ಮಾರ್ಚ್ 27) ಟ್ರೈಲರ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಈ ಟ್ರೈಲರ್ ಲಾಂಚ್ ಈವೆಂಟ್ ಮತ್ತಷ್ಟು ವಿಶೇಷತೆಯಿಂದ ಕೂಡಿದ್ದು ಅವುಗಳನ್ನು ನೋಡೋಣಾ ಬನ್ನಿ.

ಹೇಗೆ ತಯಾರಿ ನಡೆದಿದೆ ಗೊತ್ತಾ ?
ಕನ್ನಡ, ತಮಿಳು, ತೆಲುಗು, ಮಲಯಾಳ ಮತ್ತು ಹಿಂದಿಯಲ್ಲಿ 'ಕೆಜಿಎಫ್ 2' ಏಕಕಾಲಕ್ಕೆ ರಿಲೀಸ್ ಆಗುತ್ತಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಅತೀ ದೊಡ್ಡ ಟ್ರೈಲರ್ ಲಾಂಚ್ ಈವೆಂಟ್ ಇದಾಗಿದ್ದು, ವಿಶೇಷ ಅಂದರೆ ದೇಶದ ಮೂಲೆ ಮೂಲೆಯಿಂದ ಸಿನಿಮಾ ಪತ್ರಕರ್ತರು ಇವತ್ತು ಒಂದೆಡೆ ಸೇರಲಿದ್ದಾರೆ. ಒರಾಯನ್ ಮಾಲ್‌ನಲ್ಲಿ ಮಾಧ್ಯಮ ಗೋಷ್ಠಿ ಮಾಡುವ ಮೂಲಕ ಟ್ರೈಲರ್ ಬಿಡುಗಡೆ ಆಗುತ್ತಿದ್ದು ಭಾರತೀಯ ಭಾಷೆಯ 180ಕ್ಕೂ ಹೆಚ್ಚು ಬೇರೆ ಭಾಷೆಯ ಪತ್ರಕರ್ತರು ಈ ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
Recommended Video


ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೂಡ ಅಷ್ಟೇ ಅದ್ಧೂರಿ
ಇನ್ನು 'ಕೆಜಿಎಫ್ 2' ಟ್ರೈಲರ್ ರನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಒಂದು ಕಡೆ ಕಾತುರಲ್ಲಿದ್ದಾರೆ. ಮತ್ತೆ ಕೆಲವರು 'ಕೆಜಿಎಫ್ 2' ಟ್ರೈಲರ್ ಲಾಂಚ್ ಕಾರ್ಯಕ್ರಮ ಎಷ್ಟು ಅದ್ಧೂರಿಯಾಗಿ ನಡೆಯಲಿದೆ ಎಂದು ಕಾತುರರಾಗಿದ್ದಾರೆ. ಭಾರತೀಯ ಚಿತ್ರರಂಗದಲ್ಲೇ ಇದೊಂದು ಅತೀ ದೊಡ್ಡ ಸಿನಿಮಾವಾಗಿದ್ದು, ಈ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕೂಡ ಅಷ್ಟೇ ಅದ್ಧೂರಿಯಾಗಿ ಇರಲಿದೆ. ಚಿತ್ರತಂಡ ಕೂಡ ಇದಕ್ಕೆ ಸಾಕಷ್ಟು ತಯಾರಿಯನ್ನು ಮಾಡಿಕೊಂಡಿದ್ದಾರೆ.

ಟ್ರೈಲರ್ ರಿಲೀಸ್ ಮಾಡಲಿರುವ ಹ್ಯಾಟ್ರಿಕ್ ಹೀರೋ
ಇನ್ನೇನು ಕೆಲವೇ ದಿನಗಳಲ್ಲಿ 'ಕೆಜಿಎಫ್ 2' ಸಿನಿಮಾ ಅಬ್ಬರಿಸುವುದು ಮಾತ್ರ ಬಾಕಿ. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಏ.14ರಂದು ವಿಶ್ವಾದ್ಯಂತ 'ಕೆಜಿಎಫ್ 2' ಬಿಡುಗಡೆ ಆಗಲಿದ್ದು, ಅದಕ್ಕಾಗಿ ಯಶ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈಗ ಟ್ರೈಲರ್ ಬಗ್ಗೆ ಕಾತರ ಹೆಚ್ಚಿದೆ. ಹೌದು, ಇಂದು (ಮಾ.27) 'ಕೆಜಿಎಫ್ 2' ಟ್ರೈಲರ್ ಬಿಡುಗಡೆ ಆಗಲಿದೆ. 'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ಅವರು 'ಕೆಜಿಎಫ್ 2' ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತವಾಗಿ ಮಾಹಿತಿಯನ್ನು ಈ ಹಿಂದೆಯೇ ಅನೌನ್ಸ್ ಮಾಡಿತ್ತು. ಈಗ ಶಿವಣ್ಣ ಕಾರ್ಯಕ್ರಮದ ಪ್ರಮುಖ ಅತಿಥಿ ಆಗಿರುವುದು ಎಲ್ಲರಿಗೂ ಖುಷಿ ತಂದಿದೆ. ಕಾರ್ಯಕ್ರಮದ ಕೇಂದ್ರ ಬಿಂದು ಶಿವಣ್ಣ ಆಗಿರಲಿದ್ದಾರೆ.

ಇದೇ ಮೊದಲ ಬಾರಿಗೆ ಕರಣ್ ಕನ್ನಡ ಸಿನಿಮಾ ಹೋಸ್ಟ್
ಬಾಲಿವುಡ್ ನ ಖ್ಯಾತ ನಿರ್ದೇಶಕ, ನಿರ್ಮಾಪಕ, ಕಲಾವಿದ ಕರಣ್ ಜೋಹರ್ ಇಂದು ಬೆಂಗಳೂರಿಗೆ ಬಂದು ಇಳಿಯಲಿದ್ದಾರೆ. ಇದೇ ಮೊದಲ ಬಾರಿಗೆ ಕರಣ್ ಕನ್ನಡ ಸಿನಿಮಾವೊಂದರ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ. ಈಗಾಗಲೇ ಬಾಲಿವುಡ್‌ನಲ್ಲಿ ಸಾಕಷ್ಟು ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ನಿರೂಪಣೆ ಮಾಡಿರುವ ಕರಣ್ ಜೋಹರ್ ಇದೇ ಮೊದಲ ಬಾರಿಗೆ ಕನ್ನಡದ ಪ್ಯಾನ್ ಇಂಡಿಯಾ ಚಿತ್ರವೊಂದಕ್ಕೆ ಹೋಸ್ಟ್ ಮಾಡುತ್ತಿದ್ದಾರೆ. ಹೀಗಾಗಿ ಟ್ರೈಲರ್ ಲಾಂಚ್ ವಿಶೇಷತೆಯಲ್ಲಿ ಇದೂ ಕೂಡ ಒಂದು

ದಿಗ್ಗಜರ ಸಂಗಮ
'ಕೆಜಿಎಫ್ 2' ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ್ ನಾರಾಯಣ್ ಕೂಡ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಹಾಗೇ ಬಾಲಿವುಡ್ ನಟರಾದ ಸಿನಿಮಾದ ಕಲಾವಿದರು, ಸಂಜಯ್ ದತ್, ಬಾಲಿವುಡ್ ನಟಿ ರವೀನಾ ಟಂಡನ್, ಮಲಯಾಳಂ ಹೆಸರಾಂತ ನಟ ಪೃಥ್ವಿರಾಜ್, ನಟ ಯಶ್, ನಟಿ ಶ್ರೀನಿಧಿ ಶೆಟ್ಟಿ, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರು, ನಿರ್ಮಾಪಕ ವಿಜಯ ಕಿರಗಂದೂರು ಟ್ರೈಲರ್ ಬಿಡುಗಡೆ ಸಂದರ್ಭದಲ್ಲಿ ವೇದಿಕೆಯ ಮೇಲೆ ಇರಲಿದ್ದಾರೆ.


Click it and Unblock the Notifications











