ಸಾಯುವ ಮುನ್ನ ನೋಡಲೇಬೇಕಾದ 101 ಚಿತ್ರಗಳು

ಈ ಅಪರೂಪದ ಪುಸ್ತಕ ಹಾಗೂ ಡಿವಿಡಿ ಇದೇ ಶನಿವಾರ (ಮೇ 25, 2013) ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಭವನದ ನಯನ ಸಭಾಂಗಣದಲ್ಲಿ ಈ ಪುಸ್ತಕ ಲೋಕಾರ್ಪಣೆಯಾಗುತ್ತಿದೆ. ಸಾಯುವ ಮುನ್ನ ನೋಡಲೇಬೇಕಾದ 101 ಕನ್ನಡ ಚಿತ್ರಗಳು.
ಜನಪ್ರಿಯ ಪತ್ರಕರ್ತ ಹಾಗೂ ಲೇಖಕ ಜೋಗಿ (ಎಚ್ ಗಿರೀಶ್ ರಾವ್) ಅವರು ಈ ಪುಸ್ತಕವನ್ನು ಬಿಡುಗಡೆ ಮಾಡುತ್ತಿದ್ದಾರೆ. ಖ್ಯಾತ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಟಿಎಸ್ ನಾಗಾಭರಣ ಅವರ ಉಪಸ್ಥಿತಿಯಲ್ಲಿ ಪುಸ್ತಕ ಬಿಡುಗಡೆಯಾಗಲಿದೆ.
ಡಿವಿಡಿಯನ್ನು ಯಶಸ್ವಿ ನಿರ್ದೇಶಕ ಮಠ ಖ್ಯಾತಿಯ ಗುರುಪ್ರಸಾದ್ ಅವರು ಬಿಡುಗಡೆ ಮಾಡುತ್ತಿದ್ದಾರೆ. 1934 ರಿಂದ 2009ರವರೆಗೆ ತೆರೆಕಂಡ ಚಿತ್ರಗಳು ಪುಸ್ತಕದಲ್ಲಿ ಸ್ಥಾನ ಪಡೆದಿವೆ. ಪಟ್ಟಿಯಲ್ಲಿ ಸ್ಥಾನಪಡೆದಿರುವ ಕೆಲವು ಚಿತ್ರಗಳ ಹೆಸರು ಈ ಕೆಳಕಂಡಂತಿದೆ.
ಸತಿ ಸುಲೋಚನಾ, ನಾಂದಿ, ಸಿಪಾಯಿ ರಾಮು, ಭಕ್ತ ಕುಂಬಾರ, ಹಂಸಗೀತೆ, ಆಲೆಮನೆ, ಕಾಮನಬಿಲ್ಲು, ಫಣಿಯಮ್ಮ, ಏಳು ಸುತ್ತಿನ ಕೋಟೆ, ಮುತ್ತಿನಹಾರ, ನಾಯಿ ನೆರಳು, ಓಂ, ಜನುಮದ ಜೋಡಿ, ಮೈಸೂರು ಮಲ್ಲಿಗೆ ಇತ್ಯಾದಿ. ವಿಸ್ಮಯ ಪ್ರಕಾಶನ ಹೊರತಂದಿರುವ ಈ ಪುಸ್ತಕದ ಬೆಲೆ ರು.150. (ಒನ್ಇಂಡಿಯಾ ಕನ್ನಡ)


Click it and Unblock the Notifications











