ಹೊಸ ಸಿನಿಮಾ ಟೈಟಲ್ 'ಮುತ್ತು ಲವ್ಸ್ ಪಾರು'
ಕನ್ನಡ ಚಿತ್ರರಂಗವೇ ಒಂದ್ ಸಾರಿ ಈ ಕಡೆ ತಿರುಗಿ ನೋಡೋ ಒಂದು ಟೈಟಲ್ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ಅದೇ 'ಮುತ್ತು ಲವ್ಸ್ ಪಾರು'. ಆದರೆ ಕನ್ನಡ ಚಿತ್ರರಂಗದ ವರನಟ, ಮೇರು ನಟ ಅಣ್ಣಾವು ಮತ್ತು ಪಾರ್ವತಮ್ಮನವರ ಪ್ರೇಮಕಥೆಯಲ್ಲ. ಇದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದ ಮುಗ್ಧನೊಬ್ಬನ ಪ್ರೇಮಕಥೆಯಂತೆ.
ಚಿತ್ರವನ್ನು ಸದ್ಯ ಲೂಸ್ ಮಾದ ಯೋಗಿಯ 'ಕಾಲಭೈರವ' ಚಿತ್ರವನ್ನ ಡೈರೆಕ್ಟ್ ಮಾಡ್ತಾ ಇರೋ ಶಿವಪ್ರಭು ಡೈರೆಕ್ಟ್ ಮಾಡಲಿದ್ದಾರೆ. ಈ ಚಿತ್ರಕ್ಕೆ ಲೂಸ್ ಮಾದ ಯೋಗಿ ಅಥವಾ ಅಜಯ್ ರಾವ್ ಅಥವಾ ಪ್ರಜ್ವಲ್ ದೇವರಾಜ್ ಈ ಮೂವರಲ್ಲಿ ಯಾರಾದ್ರೂ ಒಬ್ಬರನ್ನ ಆಯ್ಕೆ ಮಾಡೋ ಯೋಚನೆಯಲ್ಲಿದ್ದಾರೆ ನಿರ್ದೇಶಕರು.

ಅಂದಹಾಗೆ ಸಿಂಪಲ್ ಆಗಿ ಇನ್ನೊಂದು ಮಾಹಿತಿ 'ಕಾಲಭೈರವ' ಚಿತ್ರಕ್ಕೂ ಮೊದಲು 'ಕಾಲಾಯ ತಸ್ಮೈ ನಮಃ' ಎಂಬ ಚಿತ್ರ ಬಂದಿತ್ತು. ಅದು ಹೇಳ ಹೆಸರಿಲ್ಲದಂತೆ ತಳಕಚ್ಚಿದ್ದು ಗೊತ್ತೇ ಇದೆ. ಆದರೆ ಈಗ 'ಕಾಲಭೈರವ' ಚಿತ್ರದ ಬಗ್ಗೆ ಯೋಗಿ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
More from Filmibeat
English summary
A new Kannada film title registred in KFCC as 'Muttu Love Paaru', directed by Shiva Prabhu. The story is about innocent boys love story, who hails from Thirthahalli in Shimoga district.
yogesh prajwal devaraj ajay rao shimoga thirthahalli ಯೋಗೇಶ್ ಪ್ರಜ್ವಲ್ ದೇವರಾಜ್ ಅಜಯ್ ರಾವ್ ಶಿವಮೊಗ್ಗ ತೀರ್ಥಹಳ್ಳಿ


Click it and Unblock the Notifications











