twitter
    For Quick Alerts
    ALLOW NOTIFICATIONS  
    For Daily Alerts

    ಹೊಸ ಸಿನಿಮಾ ಟೈಟಲ್ 'ಮುತ್ತು ಲವ್ಸ್ ಪಾರು'

    By Rajendra
    |

    ಕನ್ನಡ ಚಿತ್ರರಂಗವೇ ಒಂದ್ ಸಾರಿ ಈ ಕಡೆ ತಿರುಗಿ ನೋಡೋ ಒಂದು ಟೈಟಲ್ ಫಿಲ್ಮ್ ಚೇಂಬರ್ ನಲ್ಲಿ ರಿಜಿಸ್ಟರ್ ಆಗಿದೆ. ಅದೇ 'ಮುತ್ತು ಲವ್ಸ್ ಪಾರು'. ಆದರೆ ಕನ್ನಡ ಚಿತ್ರರಂಗದ ವರನಟ, ಮೇರು ನಟ ಅಣ್ಣಾವು ಮತ್ತು ಪಾರ್ವತಮ್ಮನವರ ಪ್ರೇಮಕಥೆಯಲ್ಲ. ಇದು ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ನಡೆದ ಮುಗ್ಧನೊಬ್ಬನ ಪ್ರೇಮಕಥೆಯಂತೆ.

    ಚಿತ್ರವನ್ನು ಸದ್ಯ ಲೂಸ್ ಮಾದ ಯೋಗಿಯ 'ಕಾಲಭೈರವ' ಚಿತ್ರವನ್ನ ಡೈರೆಕ್ಟ್ ಮಾಡ್ತಾ ಇರೋ ಶಿವಪ್ರಭು ಡೈರೆಕ್ಟ್ ಮಾಡಲಿದ್ದಾರೆ. ಈ ಚಿತ್ರಕ್ಕೆ ಲೂಸ್ ಮಾದ ಯೋಗಿ ಅಥವಾ ಅಜಯ್ ರಾವ್ ಅಥವಾ ಪ್ರಜ್ವಲ್ ದೇವರಾಜ್ ಈ ಮೂವರಲ್ಲಿ ಯಾರಾದ್ರೂ ಒಬ್ಬರನ್ನ ಆಯ್ಕೆ ಮಾಡೋ ಯೋಚನೆಯಲ್ಲಿದ್ದಾರೆ ನಿರ್ದೇಶಕರು.

    Actor Yogesh
    ಈ ಟೈಟಲ್ ಗಳನ್ನ ಹುಡುಕೋರ ತಲೆಗೊಂದು ಸಲಾಂ ಹೇಳಲೇಬೇಕು. ಇನ್ನೂ ಎಂತೆಂಥಾ ಟೈಟಲ್ ಗಳು ಬರ್ತವೋ ಗೊತ್ತಿಲ್ಲ. ಆದರೆ ಈಗ ಬಂದಿರೋ ಈ ಟೈಟಲ್ಲಂತೂ ದೊಡ್ಡ ಕ್ಯೂರಿಯಾಸಿಟಿಯನ್ನ ಕ್ರಿಯೇಟ್ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಆದ್ರೆ ವಿವಾದ ಹುಟ್ಟುಹಾಕದಿದ್ರೆ ಅಷ್ಟೇಸಾಕು ಎಂದು ಕನ್ನಡ ಚಿತ್ರರಸಿಕರು ನಿಟ್ಟುಸಿರು ಬಿಟ್ಟಿದ್ದಾರೆ.

    ಅಂದಹಾಗೆ ಸಿಂಪಲ್ ಆಗಿ ಇನ್ನೊಂದು ಮಾಹಿತಿ 'ಕಾಲಭೈರವ' ಚಿತ್ರಕ್ಕೂ ಮೊದಲು 'ಕಾಲಾಯ ತಸ್ಮೈ ನಮಃ' ಎಂಬ ಚಿತ್ರ ಬಂದಿತ್ತು. ಅದು ಹೇಳ ಹೆಸರಿಲ್ಲದಂತೆ ತಳಕಚ್ಚಿದ್ದು ಗೊತ್ತೇ ಇದೆ. ಆದರೆ ಈಗ 'ಕಾಲಭೈರವ' ಚಿತ್ರದ ಬಗ್ಗೆ ಯೋಗಿ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.

    English summary
    A new Kannada film title registred in KFCC as 'Muttu Love Paaru', directed by Shiva Prabhu. The story is about innocent boys love story, who hails from Thirthahalli in Shimoga district.
    Saturday, October 19, 2013, 11:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X