ನನ್ನ ಜೀವನ ಕತೆಯನ್ನು ಸರಿಯಾಗಿ ಸಿನಿಮಾ ಮಾಡಿಲ್ಲ ಇಂದ್ರಜಿತ್: ಶಕೀಲ ಬೇಸರ

ಅಪ್ರಾಪ್ತ ಸಿನಿಮಾಗಳ ನಟಿಯಾಗಿ ಮೆರೆದಿದ್ದ ಶಕೀಲ ನಿರ್ಮಾಪಕಿಯಾಗಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ಕನ್ನಡದ ಸಿನಿಮಾದಲ್ಲಿ ಶಕೀಲ ನಟಿಸುತ್ತಿದ್ದು, ನಗರದಲ್ಲಿ ಸುದ್ದಿಮಾಧ್ಯಮಗಳನ್ನುದ್ದೇಶಿಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

Recommended Video

ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ... | Filmibeat Kannada

ಶಕೀಲ ಜೀವನ ಆಧರಿಸಿದ 'ಶಕೀಲ' ಹೆಸರಿನ ಸಿನಿಮಾವನ್ನು ಕನ್ನಡದ ಇಂದ್ರಜಿತ್ ಲಂಕೇಶ್ ಸಿನಿಮಾ ಮಾಡಿದ್ದರು, ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಫ್ಲಾಪ್ ಆಗಿತ್ತು, ಈ ಬಗ್ಗೆ ಮಾತನಾಡಿರುವ ಶಕೀಲ, ''ನನ್ನ ಜೀವನ ಕತೆಯ ಸಿನಿಮಾನನ್ನು ಸರಿಯಾಗಿ ತೋರಿಸಲಾಗಿಲ್ಲ'' ಎಂದಿದ್ದಾರೆ.

''ನನ್ನ ಜೀವನ ಕತೆ ಆಧರಿಸಿ ಶಕೀಲ ಸಿನಿಮಾ ಸರಿಯಾಗಿ ಮೂಡಿಬಂದಿಲ್ಲ. ನನ್ನ ಜೀವನದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳನ್ನು ಸಿನಿಮಾದ ತೋರಿಸಲಾಗಿಲ್ಲ. ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ ಇದ್ದ ಅದನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದರ ಬಗ್ಗೆ ಇಂದ್ರಜಿತ್‌ಗೆ ಕೇಳಿದಾಗ ಸಿನಿಮಾದ ಮನೊರಂಜನಾತ್ಮಕ ಕಾರಣಕ್ಕೆ ಅದನ್ನು ಸೇರಿಸಿಲ್ಲ ಎಂದರು, ಹೋಗಲಿ ಬಿಡು ಎಂದು ನಾನೂ ಸುಮ್ಮನಾದೆ. ಆದರೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲ'' ಎಂದರು ಶಕೀಲ.

My Biopic Movie Made By Indrajit Lankesh Is Not Went Well: Shakeela

ಕನ್ನಡದ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದ ಶಕೀಲ, ''ಮೂರು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದೆ. ಈಗ ನಟಿಸುತ್ತಿರುವ 'ಡವ್ ಮಾಸ್ಟರ್' ಸಿನಿಮಾದಲ್ಲಿ ಕೇವಲ ನಾನು ಶಕೀಲ ಆಗಿ ನಟಿಸುತ್ತಿಲ್ಲ. ಇಲ್ಲಿ ನನಗೆ ಒಳ್ಳೆಯ ಪಾತ್ರವಿದೆ. ಹಾಸ್ಯಮಯ, ಪಕ್ಕದ ಮನೆ ಆಂಟಿಯ ಪಾತ್ರ ನನ್ನದು. ಈ ಸಿನಿಮಾ ಪ್ರಾಣಿಗಳ ಹಾಗೂ ಮನುಷ್ಯನ ನಡುವಿನ ಸಂಬಂಧದ ಕತೆಯನ್ನು ಹೊಂದಿದೆ'' ಎಂದರು.

''ಈ ಸಿನಿಮಾದ ಕತೆ ನನಗೆ ಬಹಳ ಇಷ್ಟವಾಯಿತು. ಕತೆ ಕೇಳಿದಾಗ ನನಗೆ ಈ ಸಿನಿಮಾದಲ್ಲಿ ನಟಿಸಲೇ ಬೇಕು ಎನಿಸಿತು. ಸಿನಿಮಾದಲ್ಲಿ ನಟಿಸುತ್ತಿರುವ ನಾಯಿ ರಾಕಿ ಸಹ ನನಗೆ ಬಹಳ ಅದ್ಭುತ ಎನಿಸಿತು. ಎಷ್ಟು ಚೆನ್ನಾಗಿ ಈ ನಾಯಿ ಎಲ್ಲರ ಮಾತು ಕೇಳುತ್ತದೆ. ವಿದೇಶಗಳಲ್ಲಿ ಇಷ್ಟು ಚೆನ್ನಾಗಿ ಮಾತು ಕೇಳುವ ನಾಯಿಗಳನ್ನು ನೋಡಿದ್ದೆ. ಆದರೆ ರಾಕಿ ಎಲ್ಲರ ಮಾತು ಕೇಳುತ್ತದೆ'' ಎಂದರು ಶಕೀಲ.

More from Filmibeat

English summary
Shakeela said my biopic movie made by director Indrajit Lankesh is not perfect and good. She said movie does not went well also.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X