twitter
    For Quick Alerts
    ALLOW NOTIFICATIONS  
    For Daily Alerts

    ಲಂಡನ್‌ನಲ್ಲಿರುವ ಮಗಳನ್ನು ಕರೆತರುವ ವ್ಯವಸ್ಥೆ ಮಾಡಿ: ಜಯಮಾಲಾ ಮನವಿ

    |

    ಕೊರೊನಾ ಭೀತಿಯಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲಿಯೂ ಇಟಲಿ, ಚೀನಾ, ಅಮೆರಿಕೆ, ದುಬೈಗಳಲ್ಲಿನ ಭಾರತೀಯರು ಜೀವ ಕೈಯಲ್ಲಿ ಹಿಡಿದುಕೊಂಡು ಸ್ವದೇಶಕ್ಕೆ ಯಾವಾಗ ಹೋದೇವೋ ಎಂದು ಕಾಯುತ್ತಿದ್ದಾರೆ.

    ಹಲವು ಸೆಲೆಬ್ರಿಟಿಗಳು, ಅವರ ಮಕ್ಕಳೂ ಸಹ ವಿದೇಶದಲ್ಲಿ ಸಿಲುಕಿಕೊಂಡಿದ್ದಾರೆ. ನಿನ್ನೆಯಷ್ಟೆ ಸಚಿವ ಆನಂದ್ ಸಿಂಗ್ ಅವರು ತಮ್ಮ ಪುತ್ರಿ ಇಟಲಿಯಲ್ಲಿ ಸಿಲುಕಿದ್ದಾಳೆಂದು ಹೇಳಿ ಸದನದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇಂದು ನಟಿ, ಮಾಜಿ ಸಚಿವೆ ಜಯಮಾಲಾ ಅವರು ತಮ್ಮ ಪುತ್ರಿಯ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದಾರೆ.

    'ನನ್ನ ಮಗಳು ಲಂಡನ್‌ನಲ್ಲಿ ಸಿಲುಕಿಕೊಂಡಿದ್ದಾಳೆ, ಅವಳನ್ನು ಭಾರತಕ್ಕೆ ಕರೆ ತರಲು ಸಹಾಯ ಮಾಡಿರಿ' ಎಂದು ಸರ್ಕಾರದ ಬಳಿ ಮನವಿ ಮಾಡಿಕೊಂಡಿದ್ದಾರೆ ಮಾಜಿ ಸಚಿವೆ ಜಯಮಾಲಾ.

     My Daughter Stuck In London, Help Her Get Back: Jayamala

    ಪರಿಷತ್‌ನಲ್ಲಿ ಇಂದು ಮಾತನಾಡಿದ ಜಯಮಾಲಾ, 'ನನ್ನ ಮಗಳು ಲಂಡನ್‌ನಲ್ಲಿ ಇದ್ದಾಳೆ. ಅಲ್ಲಿಂದ ಭಾರತಕ್ಕೆ ಬರಲು ವಿಮಾನಗಳಿಲ್ಲ. ಆಕೆಯ ಜೊತೆ ಇನ್ನೂ ಹಲವರು ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆ ತರುವ ವ್ಯವಸ್ಥೆ ಆಗಬೇಕಿದೆ' ಎಂದು ಜಯಮಾಲಾ ಹೇಳಿದ್ದಾರೆ.

    ಕೊರೊನಾ ಭೀತಿ ದಿನೇ-ದಿನೇ ಹೆಚ್ಚಾಗುತ್ತಲೇ ಇದೆ. ರಾಜ್ಯದಲ್ಲಿ ಈವರೆಗೆ 14 ಮಂದಿಗೆ ಸೋಂಕಿರುವುದು ಪತ್ತೆಯಾಗಿದೆ. ವಿದೇಶದಲ್ಲಿ ಸಿಲುಕಿರುವ ಹಲವು ಭಾರತೀಯರು ಸ್ವದೇಶಕ್ಕೆ ಮರಳಲಾಗದೆ ಒದ್ದಾಡುತ್ತಿದ್ದಾರೆ.

    English summary
    Former minister Jayamala said my daughter stuck in London with other Indians they all wanted to come to India help them Jayamala request in assembly.
    Wednesday, March 18, 2020, 21:36
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X