»   » ಅಂಬರೀಶ್ ಸಿಎಂ ಆಗಬೇಕೆಂದು ಕನಸುಕಂಡ ತೆಲುಗುನಟ

ಅಂಬರೀಶ್ ಸಿಎಂ ಆಗಬೇಕೆಂದು ಕನಸುಕಂಡ ತೆಲುಗುನಟ

Posted By:
Subscribe to Filmibeat Kannada
My dream Ambareesh become Karnataka CM
ಇದು ನಾಡಿನೆಲ್ಲಡೆ ಇರುವ ಅಂಬರೀಶ್ ಅಭಿಮಾನಿಗಳು ಹೇಳಿದ ಮಾತಲ್ಲ ಅಥವಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳಿದ ಮಾತೂ ಅಲ್ಲ. ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯಾಗಿ ನೋಡುವ ಕನಸು ಕಂಡಿದ್ದು ತೆಲುಗು ನಟ ಪದ್ಮಶ್ರೀ ಡಾ.ಮೋಹನ್ ಬಾಬು.

ನನ್ನ ಆರಾಧ್ಯದೈವ ತಿರುಪತಿ ವೆಂಕಟರಮಣ. ಆ ದೇವರಲ್ಲಿ ಪ್ರತಿದಿನ ಬೇಡಿಕೊಳ್ಳುವುದೇನಂದರೆ ಅಂಬರೀಶ್ ಕರ್ನಾಟಕದ ಮುಖ್ಯಮಂತ್ರಿಯಾಗಬೇಕೆಂದು. ಇದು ನನ್ನ ಕನಸು, ಒಮ್ಮೆ ಮಂಡ್ಯಕ್ಕೆ ಹೋಗಿದ್ದಾಗ ಅಲ್ಲಿ ಜನರಿಗೆ ಅವರ ಮೇಲಿರುವ ಅಭಿಮಾನ ನೋಡಿ ಅಚ್ಚರಿಯಾಯಿತು ಎಂದು ಮೋಹನ್ ಬಾಬು ಹೇಳಿದ್ದಾರೆ.

ಅಂಬರೀಶ್ ಒಬ್ಬ ಜನನಾಯಕ, ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಮುಚ್ಚು ಮೆರೆಯಿಲ್ಲದೆ ನೇರವಾಗಿ ಮಾತನಾಡುವುದು ಅವರಲ್ಲಿರುವ ಒಳ್ಳೆ ಗುಣ. ಇಂಥಹ ಸಜ್ಜನ ವ್ಯಕ್ತಿ ರಾಜ್ಯದ ಸಿಎಂ ಆದರೆ ಅಭಿವೃದ್ದಿ ಖಂಡಿತ ಎಂದು ಮೋಹನ್ ಬಾಬು ಅಂಬರೀಶ್ ಅವರನ್ನು ಹಾಡಿ ಹೊಗಳಿದ್ದಾರೆ.

ನಾನು ಇತ್ತೀಚಿಗೆ ಸಿನಿಮಾದಲ್ಲಿ ಹೆಚ್ಚಾಗಿ ನಟಿಸುತ್ತಿಲ್ಲ. ಮಕ್ಕಳು ನಾಯಕರಾಗಿ ಮಿಂಚುತ್ತಿರುವಾಗ ಈ ವಯಸ್ಸಿನಲ್ಲಿ ನಾಯಕಿಯರ ಜೊತೆ ಮರ ಸುತ್ತುವುದು, ಡ್ಯೂಯೆಟ್ ಹಾಡುವುದು ಸರಿ ಕಾಣಿಸುವುದಿಲ್ಲ.

ಒಬ್ಬ ಸಾಮಾನ್ಯ ಮನುಷ್ಯನಾಗಿ ನಾನು ಡಾ.ರಾಜ್ ಅಭಿಮಾನಿ. ಸಾಂಸ್ಕೃತಿಕ ರಂಗದಲ್ಲಿ ಅಣ್ಣಾವ್ರು ದೊಡ್ಡ ರಾಯಭಾರಿ . ಅಂಬರೀಶ್ ಮತ್ತು ವಿಷ್ಣುವರ್ಧನ್ ನನ್ನ ಸ್ನೇಹಿತರು.
37 ವರ್ಷಗಳಿಂದ ನಾನು ಮತ್ತು ಅಂಬರೀಶ್ ಸ್ನೇಹಿತರು.

ನನ್ನ ಮಗ ವಿಷ್ಣುಮಂಚು ಅಭಿನಯದ ದೇನಿಕೈನಾ ರೆಡಿ ಚಿತ್ರ ಇದೇ ತಿಂಗಳು 24 ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಪ್ರೇಕ್ಷಕರು ಒಳ್ಳೆ ಸಿನಿಮಾಗಳನ್ನು ಬೆಂಬಲಿಸಿದ್ದಾರೆ. ನನ್ನ ಮಗನ ಚಿತ್ರ ನೋಡಿ ಬೆಂಬಲಿಸುವಂತೆ ಹೇಳಲು ಮೋಹನ್ ಬಾಬು ಮರೆಯಲಿಲ್ಲ.

English summary
Every day I am praying Ambareesh should become chief minister of Karnataka said Telugu actor Dr. Mohan Babu.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada