Don't Miss!
- News
ಬಿಬಿಎಂಪಿ ತಾಜ್ಯ ನಿರ್ವಹಣೆಗಾಗಿ ಒಂದೇ ಬಾರಿಗೆ ಎಲ್ಲ 243ವಾರ್ಡ್ನಲ್ಲಿ ಟೆಂಡರ್ ಬಿಡುಗಡೆ: BSWML
- Sports
ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?
- Finance
ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಯಾಮಿಲಿ ಸಮೇತ ಕಾಂತಾರ ನೋಡ್ಬೇಕು ಅನ್ಕೊಂಡ್ರೆ ಟಿಕೆಟ್ ದರ ಇಷ್ಟೊಂದಾ? ಹೆಚ್ಚು ದುಡ್ಡಿದ್ರೆ ನೋಡಿ ಎಂದ ಪ್ರೇಕ್ಷಕ!
ಕಾಂತಾರ ಇದೇ ಶುಕ್ರವಾರದಂದು ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಕೊನೆಯದಾಗಿ 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು: ಕೊಡುಗೆ ರಾಮಣ್ಣ ರೈ' ಚಿತ್ರವನ್ನು ನಿರ್ದೇಶಿಸಿ ಅತ್ಯುತ್ತಮ ಮಕ್ಕಳ ಚಿತ್ರ ಕೆಟಗರಿ ಅಡಿಯಲ್ಲಿ ರಾಷ್ಟ್ರ ಪ್ರಶಸ್ತಿಯನ್ನು ಗೆದ್ದಿದ್ದ ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನ ಈ ಚಿತ್ರಕ್ಕಿದ್ದು, ರಾಜಕುಮಾರ, ಕೆಜಿಎಫ್ ಸರಣಿಗಳಂತಹ ಇಂಡಸ್ಟ್ರಿ ಹಿಟ್ ಚಿತ್ರಗಳನ್ನು ನಿರ್ಮಿಸಿರುವ ಪ್ರಸ್ತುತ ಕನ್ನಡ ಚಿತ್ರರಂಗದ ನಂಬರ್ ಒನ್ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳವನ್ನು ಹೂಡಿದೆ.
ನಮ್ಮ ಮಣ್ಣಿನ ಕತೆಯನ್ನು ಹೇಳಲಿದ್ದೇವೆ ಎಂದು ಬಂದಿರುವ ಈ ತಂಡ ಕೂಡ ಬಿಡುಗಡೆಗೂ ಮುನ್ನವೇ ಪ್ರೀಮಿಯರ್ ಶೋಗಳನ್ನು ಆಯೋಜಿಸಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಹಾಗೂ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಚಿತ್ರದ ಪ್ರೀಮಿಯರ್ ಶೋಗಳನ್ನು ಏರ್ಪಡಿಸಿದೆ. ಇನ್ನು ಬೆಂಗಳೂರು ಮಾತ್ರವಲ್ಲದೇ ರಾಜ್ಯದ ಇನ್ನುಳಿದ ಪ್ರಮುಖ ನಗರಗಳಲ್ಲಿಯೂ ಸಹ ಕಾಂತಾರ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಮೈಸೂರಿನ ಬಹುತೇಕ ಎಲ್ಲಾ ಶೋಗಳೂ ಭರ್ತಿಯಾಗುವ ಸನಿಹದಲ್ಲಿದ್ದು, ಬೆಂಗಳೂರಿನ ಶೋಗಳೂ ಸಹ ವೇಗವಾಗಿ ತುಂಬುತ್ತಿವೆ.
ಇನ್ನು ರಾಜ್ಯದ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಕಾಂತಾರ ಚಿತ್ರದ ಮೊದಲ ದಿನದ ಬುಕಿಂಗ್ ಆನ್‌ಲೈನ್‌ನಲ್ಲಿ ಆರಂಭಗೊಂಡಿದ್ದು, ಟಿಕೆಟ್ ದರವನ್ನು ಕಂಡು ನಿರಾಸೆಗೊಳಗಾದ ಸಿನಿಪ್ರೇಮಿಯೊಬ್ಬ ಟ್ವಿಟರ್‌ನಲ್ಲಿ ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ ಹಾಗೂ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಬುಕಿಂಗ್ ಓಪನ್ ಆಗಿದೆ ಸಾಮರ್ಥ್ಯವಿರುವವರು ಟಿಕೆಟ್ ಖರೀದಿಸಿ!
ಅಭಿಲಾಷ್ ದೇವಾಡಿಗ ಎಂಬ ಸಿನಿ ಪ್ರೇಮಿ ಟ್ವಿಟರ್ ಖಾತೆಯಲ್ಲಿ ಕುಂದಾಪುರದ ಭಾರತ್ ಸಿನಿಮಾಸ್‌ನಲ್ಲಿ ಕಾಂತಾರ ಚಿತ್ರದ ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದೆ, ಒಂದು ಟಿಕೆಟ್ ದರ 236 ರೂಪಾಯಿ ಇದ್ದು, ಇದರ ಜತೆಗೆ 40 ರೂಪಾಯಿ ಇಂಟರ್‌ನೆಟ್ ಫೀಸ್ ಕೂಡ ಇದೆ, ಇಷ್ಟು ಮೊತ್ತವನ್ನು ನೀಡುವ ಸಾಮರ್ಥ್ಯ ಹೊಂದಿರುವವರು ಬುಕ್ ಮಾಡಿಕೊಳ್ಳಿ ಎಂದು ಬರೆದುಕೊಂಡಿದ್ದಾರೆ.

ಕುಟುಂಬದವರು ಚಿತ್ರ ನೋಡ್ಬೇಕು ಆದರೆ ಟಿಕೆಟ್ ದುಬಾರಿ
ನನ್ನ ಕುಟುಂಬದವರು ಕಾಂತಾರ ನೋಡಬೇಕು ಎಂಬ ಆಸೆಯನ್ನು ಹೊಂದಿದ್ದಾರೆ, ಆದರೆ ಟಿಕೆಟ್ ದರ ತೀರ ದುಬಾರಿಯಾಯಿತು. ಇದರ ಕಡೆ ದಯವಿಟ್ಟು ಗಮನಹರಿಸಿ ಎಂದು ರಿಷಬ್ ಶೆಟ್ಟಿ ಅವರನ್ನು ಟ್ಯಾಗ್ ಮಾಡಿದ್ದಾರೆ. ಹಾಗೂ ಸಾಮನ್ಯವಾಗಿ ಈ ಚಿತ್ರಮಂದಿರದಲ್ಲಿ ಟಿಕೆಟ್ ದರ 150ರಿಂದ 180ರಷ್ಟು ಇತ್ತು ಎಂದೂ ಕೂಡ ಇಲ್ಲಿ ಉಲ್ಲೇಖಿಸಿದ್ದಾರೆ.

ಪಟ್ಟಣಗಳಲ್ಲೂ ಏಕೆ ದುಬಾರಿ ಟಿಕೆಟ್ ದರ?
ಬೆಂಗಳೂರು ಹಾಗೂ ಮೈಸೂರು ರೀತಿಯ ಬೃಹತ್ ನಗರಗಳ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಇನ್ನೂರಕ್ಕಿಂತ ಅಧಿಕವಿದ್ದರೆ 'ಇಷ್ಟು ಕಾಸ್ಟ್ಲಿ ಆದ್ರೆ ಯಾರು ಹೋಗ್ತಾರೆ ಗುರೂ' ಎಂದು ಬೇಸರ ವ್ಯಕ್ತಪಡಿಸುವವರಿದ್ದಾರೆ, ಹಾಗಿರುವಾಗ ಕುಂದಾಪುರ ರೀತಿಯ ಪಟ್ಟಣದಲ್ಲಿ ಒಂದು ಟಿಕೆಟ್‌ಗೆ ಇನ್ನೂರಕ್ಕಿಂತ ಹೆಚ್ಚು ದರವನ್ನು ನಿಗದಿಪಡಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡದೇ ಇರದು. ಇನ್ನು ಬಿಡುಗಡೆಗೆ ಇನ್ನೂ ಎರಡು ದಿನ ಬಾಕಿ ಇದ್ದು ಕುಂದಾಪುರದಲ್ಲಿ ಕಾಂತರ ಮೊದಲ ಪ್ರದರ್ಶನದ ಆರು ಟಿಕೆಟ್‌ಗಳು ಮಾತ್ರ ಸದ್ಯಕ್ಕೆ ಮಾರಾಟವಾಗಿದೆ. ಆ ಪ್ರೇಕ್ಷಕ ಹೇಳಿದಂತೆ ಸರಿಯಾದ ಟಿಕೆಟ್ ದರ ಇದ್ದಿದ್ದರೆ ಮತ್ತಷ್ಟು ಟಿಕೆಟ್‌ಗಳು ಮಾರಾಟವಾಗುತ್ತಿದ್ದವೇನೋ.