For Quick Alerts
  ALLOW NOTIFICATIONS  
  For Daily Alerts

  ಅಯ್ಯಪ್ಪ ಮೇಲೆ ತನಗಿದ್ದ ಭಾವನೆಯ ಬಗ್ಗೆ ಪೂಜಾ ಹೇಳಿದ್ದೇನು?

  By Suneetha
  |

  'ಮುಂಗಾರು ಮಳೆ' ಸಿನಿಮಾದಲ್ಲಿ, ಚಿನ್ನದ ಹುಡುಗನ ಜೊತೆ ಮಳೆಯಲ್ಲಿ ತಾನು ನೆನೆಯುತ್ತಾ ಅಭಿಮಾನಿಗಳನ್ನು ಮಳೆಯಲ್ಲಿ ತೋಯಿಸಿದ, ಮಳೆ ಹುಡುಗಿ ನಟಿ ಪೂಜಾ ಗಾಂಧಿ ಅವರು ರಿಯಾಲಿಟಿ ಶೋ ನಂತರ ಮತ್ತೆ ತಮ್ಮ ನೆಚ್ಚಿನ ಕಾರ್ಯವಾದ ಸಿನಿಮಾಗಳತ್ತ ಹೆಚ್ಚಿನ ಗಮನ ಹರಿಸಿದ್ದಾರೆ.

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಸೀಸನ್ 3' ಯಲ್ಲಿ ಸುಮಾರು 98 ದಿನಗಳ ಕಾಲ ಸ್ಪರ್ಧಿ ಆಗಿದ್ದ ನಟಿ ಪೂಜಾ ಗಾಂಧಿ ಅವರು ತಾವು ಮಾಡಿದ ಸಿನಿಮಾಗಳಿಂದ ಹೆಚ್ಚಾಗಿ ಬಿಗ್ ಬಾಸ್ ಮನೆಯಲ್ಲಿ ಮತ್ತೋರ್ವ ಸ್ಪರ್ಧಿ ಕ್ರಿಕೆಟರ್ ಅಯ್ಯಪ್ಪ ಅವರ ಜೊತೆ ಸಲುಗೆ ಬೆಳೆಸಿಕೊಂಡು ಜಾಸ್ತಿ ಸುದ್ದಿ ಮಾಡಿದರು.[ಬಿಗ್ ಮನೆಯಿಂದ 'ದಂಡುಪಾಳ್ಯ'ಕ್ಕೆ ಬಂದ 'ಮಳೆ' ಹುಡುಗಿ ಪೂಜಾ]

  ಇದೀಗ ನಿರ್ದೇಶಕ ಶ್ರೀನಿವಾಸ ರಾಜು ಅವರ 'ದಂಡುಪಾಳ್ಯ ಭಾಗ 2' ಚಿತ್ರದಲ್ಲಿ ನಟಿ ಪೂಜಾ ಅವರು ಮಿಂಚಲು ಎಲ್ಲಾ ತಯಾರಿ ಮಾಡುತ್ತಿದ್ದಾರೆ. 'ದಂಡುಪಾಳ್ಯ' ಮೊದಲ ಭಾಗದಲ್ಲಿ ಪೂಜಾ ಅವರು ಕಳ್ಳಿಯ ಪಾತ್ರದಲ್ಲಿ ವಿಭಿನ್ನವಾಗಿ ಮಿಂಚಿದ್ದು, ಎಲ್ಲರ ಮೆಚ್ಚುಗೆಯ ಜೊತೆ ಜೊತೆಗೆ ಗಾಸಿಪ್ ಕೂಡ ಕೊಂಚ ಜಾಸ್ತಿನೇ ಮಾಡಿದ್ದರು.

  ಸದ್ಯಕ್ಕೆ ಕಳಸಾ ಬಂಡೂರಿ ಯೋಜನೆ [ಏನಿದು ಕಳಸಾ-ಬಂಡೂರಿ ಯೋಜನೆ?] ಬಗೆಗಿನ ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಪೂಜಾ ಗಾಂಧಿ ಅವರು ತಮ್ಮ ಮುಂದಿನ ಸಿನಿಮಾ 'ದಂಡುಪಾಳ್ಯ 2' ಮತ್ತು ಬಿಗ್ ಬಾಸ್ ಮನೆಯಲ್ಲಿ ತಮಗಾದ ಅನುಭವಗಳನ್ನು ಖ್ಯಾತ ಇಂಗ್ಲೀಷ್ ಪತ್ರಿಕೆಯೊಂದಕ್ಕೆ ಹಂಚಿಕೊಂಡಿದ್ದಾರೆ. ಅದೇನೆಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

  'ದಂಡುಪಾಳ್ಯ ಭಾಗ 2' ಆಯ್ಕೆ ಸರಿಯೇ?

  'ದಂಡುಪಾಳ್ಯ ಭಾಗ 2' ಆಯ್ಕೆ ಸರಿಯೇ?

  ದಂಡುಪಾಳ್ಯ ಸಿನಿಮಾದ ಮುಂದುವರಿದ ಭಾಗದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿರುವುದು ಸರಿಯೇ? ಎಂಬುದಕ್ಕೆ ನಟಿ ಪೂಜಾ ಅವರು, 'ಸರಿ ತಪ್ಪು ಎಂಬುದು ಇನ್ನೇನು ಉಳಿದಿಲ್ಲ, ಎಲ್ಲವೂ ಅವರ ದೃಷ್ಟಿಕೋನಕ್ಕೆ ತಕ್ಕಂತಿರುತ್ತದೆ. ನನಗೆ ದಂಡುಪಾಳ್ಯ ಸಿನಿಮಾದ ಸರಣಿ ನನ್ನ ನೆಚ್ಚಿನ ಆಯ್ಕೆ. ಈ ಸಿನಿಮಾದ ಮುಂದಿನ ಭಾಗಗಳಲ್ಲಿ ನನ್ನ ಪಾತ್ರ ಜೀವನಕ್ಕಿಂತಲೂ ದೊಡ್ಡದಾಗಿರುತ್ತೆ. ನನ್ನ ಟ್ಯಾಲೆಂಟ್ ಪ್ರದರ್ಶನಕ್ಕೆ ವಿಶಿಷ್ಟತೆ ತಂದುಕೊಟ್ಟ ಸಿನಿಮಾ 'ದಂಡುಪಾಳ್ಯ' ಎನ್ನುತ್ತಾರೆ ನಟಿ ಪೂಜಾ.

  ಕಳಸಾ ಬಂಡೂರಿ ಸಾಕ್ಷ್ಯಚಿತ್ರ

  ಕಳಸಾ ಬಂಡೂರಿ ಸಾಕ್ಷ್ಯಚಿತ್ರ

  ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹೋರಾಟ ನಡೆಸುತ್ತಿದ್ದ 'ಕಳಸಾ ಬಂಡೂರಿ' ಎಂಬ ವಿಶಿಷ್ಟ ಯೋಜನೆಯ ಬಗ್ಗೆ ನಟಿ ಪೂಜಾ ಗಾಂಧಿ ಅವರು ತಾವೇ ಬಂಡವಾಳ ಹಾಕಿ ಒಂದು ವಿಶೇಷ ಸಾಕ್ಷ್ಯಚಿತ್ರ ರಚಿಸುತ್ತಿದ್ದು, ಸದ್ಯಕ್ಕೆ ಸಾಕ್ಷ್ಯಚಿತ್ರದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

  'ರಾವಣಿ' ಚಿತ್ರದಲ್ಲಿ ಬ್ಯುಸಿ

  'ರಾವಣಿ' ಚಿತ್ರದಲ್ಲಿ ಬ್ಯುಸಿ

  ಈಗಾಗಲೇ ಒಪ್ಪಿಕೊಂಡಿರುವ ಕೆಲವು ಸಿನಿಮಾಗಳು ಮುಗಿಯಲು ಕಾಯುತ್ತಿದ್ದಾರೆ. ಲಕ್ಕಿ ಶಂಕರ್ ನಿರ್ದೇಶನದ 'ಜಿಲೇಬಿ' ಸಿನಿಮಾದ ಒಂದು ಹಾಡು ಬಾಕಿ ಉಳಿದಿದ್ದು, ತಾವೇ ಬಂಡವಾಳ ಹೂಡಿರುವ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ ನಿರ್ದೇಶನದ 'ರಾವಣಿ' ಚಿತ್ರದ ಕೆಲಸಗಳಲ್ಲೂ ಬ್ಯುಸಿಯಾಗಿದ್ದಾರೆ.

  ಬಿಗ್ ಬಾಸ್ ಬಗ್ಗೆ

  ಬಿಗ್ ಬಾಸ್ ಬಗ್ಗೆ

  'ಬಿಗ್ ಬಾಸ್' ನಿಂದ ನನ್ನ ಜೀವನವನ್ನು ಸರಿಯಾದ ರೀತಿಯಲ್ಲಿ ವಿಂಗಡನೆ ಮಾಡಿ ಸರಿದೂಗಿಸಿಕೊಳ್ಳಲು ತುಂಬಾನೇ ಸಹಕಾರಿಯಾಯಿತು. ನಾನು ಆ ಮನೆಯಲ್ಲಿ ತುಂಬಾನೇ ಕಲಿತುಕೊಂಡೆ, ಎಲ್ಲರೊಂದಿಗೆ ಬೆರೆಯುವುದನ್ನು ಮೈಗೂಡಿಸಿಕೊಂಡೆ ಎಂದು ನಟಿ ಪೂಜಾ ಅವರು ಬಿಗ್ ಬಾಸ್ ಮನೆಯಲ್ಲಿ ತಮಗಾದ ಅನುಭವವನ್ನು ನೀಟಾಗಿ ಹಂಚಿಕೊಂಡಿದ್ದಾರೆ.[ಅಯ್ಯಪ್ಪ ಹೊರನಡೆದ್ರು; ನಟಿ ಪೂಜಾ ಗಾಂಧಿ ಕಣ್ಣೀರು ಹಾಕಿದ್ರು]

  ಅಯ್ಯಪ್ಪನ ಜೊತೆಗಿನ ಗೆಳೆತನದ ಬಗ್ಗೆ

  ಅಯ್ಯಪ್ಪನ ಜೊತೆಗಿನ ಗೆಳೆತನದ ಬಗ್ಗೆ

  ಬಿಗ್ ಬಾಸ್ ಎಂಬುದು ಒಂದು ರಿಯಾಲಿಟಿ ಕಾರ್ಯಕ್ರಮ. ನಾನು ಅಲ್ಲಿ ನೈಜವಾಗಿದ್ದೆ, ಅಯ್ಯಪ್ಪ ಅವರ ಬಗೆಗಿನ ನನ್ನ ಭಾವನೆಗಳು ನಕಲಿಯಾಗಿರಲಿಲ್ಲ. ಅವುಗಳು ಕಾರ್ಯಕ್ರಮ ಗೆಲ್ಲಲು ಮಾಡಿದ ನಾಟಕ ಕೂಡ ಅಲ್ಲ. ನಾನು ಎಲ್ಲಾ ವಿಚಾರದಲ್ಲೂ ಪ್ರಾಮಾಣಿಕವಾಗಿದ್ದೆ. ಎಂದು ಬಿಗ್ ಬಾಸ್ ಮನೆಯಲ್ಲಿ ತಮ್ಮಿಬ್ಬರ ಗೆಳೆತನದ ಬಗ್ಗೆ ಹೇಳಿಕೊಂಡಿದ್ದಾರೆ.[ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್? ]

  ಮುಂದೆ ಅಯ್ಯಪ್ಪ ಅವರ ಭೇಟಿ ಇದೆಯಾ?

  ಮುಂದೆ ಅಯ್ಯಪ್ಪ ಅವರ ಭೇಟಿ ಇದೆಯಾ?

  ಅಯ್ಯಪ್ಪ ಅವರೊಂದಿಗೆ ಬಿಗ್ ಬಾಸ್ ಮನೆಯಲ್ಲಿ ಇದ್ದ ಪ್ರಾಮಾಣಿಕ ಗೆಳೆತನವನ್ನು ಮತ್ತೆ ಮುಂದುವರಿಸುವ ಇಚ್ಛೆ ಇದ್ಯಾ ಎಂಬುದನ್ನು ತಳ್ಳಿ ಹಾಕಿದ ನಟಿ ಪೂಜಾ ಅವರು 'ಸದ್ಯಕ್ಕೆ ನಾನು ನನ್ನದೇ ಹಲವಾರು ಬಾಕಿ ಉಳಿದಿರುವ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದೇನೆ' ಎಂದು ಅಡ್ಡ ಗೋಡೆ ಮೇಲೆ ದೀಪ ಇಟ್ಟಿದ್ದಾರೆ.

  English summary
  Having had a long stint of 98 days in the Bigg Boss house, Pooja Gandhi is back to what she does best, but this time, it surely seems that she is taking a much serious approach to her choice of films. Her next is 'Dandupalya 2'. The movie is directed by Srinivas Raju
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X