Don't Miss!
- News
ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವ: ಜನರ ಮನಸ್ಸು ಬದಲಾಗಲಿ, ರೈತರಿಗೆ ಕನ್ಯೆ ಕೊಡಲಿ, ವೈರಲ್
- Sports
ಆತನಿಗೆ ನೀಡಿದ ಜವಾಬ್ಧಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ: ತ್ರಿಪಾಠಿ ಪ್ರದರ್ಶನಕ್ಕೆ ಬಂಗಾರ್ ಹರ್ಷ
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಜ್ಜಿ ರಿಕ್ವೆಸ್ಟ್ ಮಾಡಿಕೊಂಡಾಗ ಅಪ್ಪನಿಗೆ ಸಿನಿಮಾ ಚಾನ್ಸ್ ಕೊಟ್ಟದ್ದು ಈ ನಟ: ರಕ್ಷಕ್ ಬುಲೆಟ್ ಪ್ರಕಾಶ್!
ಬುಲೆಟ್ ಪ್ರಕಾಶ್.. ಕನ್ನಡ ಸಿನಿ ರಸಿಕರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿರುವಂತಹ ಹಾಸ್ಯ ನಟ. ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡ ಬುಲೆಟ್ ಪ್ರಕಾಶ್ ಸ್ಟಾರ್ ನಟರ ಚಿತ್ರಗಳಲ್ಲಿ ನಟಿಸುವ ಅವಕಾಶವನ್ನೂ ಸಹ ಪಡೆದುಕೊಂಡರು. ಶಿವ ರಾಜ್‌ಕುಮಾರ್, ರವಿಚಂದ್ರನ್ ಕಾಲದ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದ ಬುಲೆಟ್ ಪ್ರಕಾಶ್ ಪುನೀತ್ ರಾಜ್‌ಕುಮಾರ್, ದರ್ಶನ್, ಸುದೀಪ್ ಹಾಗೂ ಗಣೇಶ್ ರೀತಿಯ ಸ್ಟಾರ್ ನಟರ ಚಿತ್ರಗಳಲ್ಲೂ ಸಹ ನಟಿಸಿದ್ದಾರೆ.
1997ರಲ್ಲಿ ಮೊದಲ ಬಾರಿಗೆ ಸಿನಿಮಾಗಾಗಿ ಬಣ್ಣ ಹಚ್ಚಿದ ಬುಲೆಟ್ ಪ್ರಕಾಶ್ ಅಂತಿಮವಾಗಿ ಕಾಣಿಸಿಕೊಂಡದ್ದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಶನ್‌ನ ಹಿಟ್ ಚಿತ್ರ ಗಾಳಿಪಟ 2ನಲ್ಲಿ. ಹೀಗೆ ಎರಡು ದಶಕಗಳ ಅವಧಿಯಲ್ಲಿ 325ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿರುವ ಬುಲೆಟ್ ಪ್ರಕಾಶ್ ಕನ್ನಡ ಮಾತ್ರವಲ್ಲದೇ ತುಳು ಭಾಷೆಯ ಸೂಂಬೆ ಎಂಬ ಚಿತ್ರದಲ್ಲೂ ಸಹ ನಟಿಸಿದ್ದರು.
ಇನ್ನು ಬುಲೆಟ್ ಪ್ರಕಾಶ್ ಅವರ ಕುಟುಂಬ ಸಿನಿಮಾ ಕ್ಷೇತ್ರದ ಹಿನ್ನೆಲೆ ಹೊಂದಿಲ್ಲದಿದ್ದರೂ ಸಹ ಬುಲೆಟ್ ಹೇಗೆ ಚಿತ್ರರಂಗ ಪ್ರವೇಶಿಸಿದ್ರು ಎಂಬ ಪ್ರಶ್ನೆ ಹಾಗೂ ಕುತೂಹಲ ಹಲವರಲ್ಲಿತ್ತು. ಬುಲೆಟ್ ಪ್ರಕಾಶ್ ಅವರಿಗೆ ನಟಿಸುವ ಅವಕಾಶ ಕೊಟ್ಟದ್ದು ಯಾರು ಎಂಬ ಪ್ರಶ್ನೆಯೂ ಸಹ ಇತ್ತು. ಈ ಪ್ರಶ್ನೆಗೆ ಸ್ವತಃ ಬುಲೆಟ್ ಪ್ರಕಾಶ್ ಅವರ ಪುತ್ರ ರಕ್ಷಕ್ ಬುಲೆಟ್ 'ಎಂ ಜಿ ವರ್ಸ್' ಎಂಬ ಯುಟ್ಯೂಬ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿ ಉತ್ತರ ನೀಡಿದ್ದಾರೆ. ಸ್ಯಾಂಡಲ್‌ವುಡ್ ಕಿಂಗ್ ಶಿವ ರಾಜ್‌ಕುಮಾರ್ ತನ್ನ ಅಪ್ಪನಿಗೆ ಬಣ್ಣ ಹಚ್ಚುವ ಅವಕಾಶ ನೀಡಿದರು ಎಂದು ಹೇಳಿಕೆ ನೀಡಿದ್ದಾರೆ.

ಅವಕಾಶ ಕೊಟ್ಟದ್ದು ಶಿವಣ್ಣ
ಸಂದರ್ಶನದಲ್ಲಿ ಬುಲೆಟ್ ಪ್ರಕಾಶ್ ಅವರಿಗೆ ನಟನಾಗಬೇಕು ಎಂಬ ಕನಸು ಯಾವಾಗ ಬಂತು ಎಂಬ ಪ್ರಶ್ನೆ ಎದುರಾದಾಗ ಉತ್ತರಿಸಿದ ರಕ್ಷಕ್ "ಅಪ್ಪನಿಗೆ ನಟನಾಗಬೇಕು ಎಂಬ ಆಸೆಯೇನೂ ಇರಲಿಲ್ಲ. ಕಾಟನ್‌ಪೇಟೆಯಲ್ಲಿದ್ದಾಗ ಅಲ್ಲಿನ ಕಾರ್ಯಕ್ರಮವೊಂದಕ್ಕೆ ಶಿವ ರಾಜ್‌ಕುಮಾರ್ ಅವರು ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ನಮ್ಮ ಅಜ್ಜಿ ನನ್ನ ಮಗ ಕೂಡ ನೋಡೋಕೆ ಚೆನ್ನಾಗಿದ್ದಾನೆ. ಖಳ ನಾಯಕನ ಪಾತ್ರಕ್ಕೆ ತಕ್ಕನಾಗಿದ್ದಾನೆ. ಒಂದು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ರು. ಈ ಮನವಿಗೆ ಸ್ಪಂದಿಸಿದ ಶಿವಣ್ಣ ಎಕೆ 47 ಚಿತ್ರದಲ್ಲಿ ನೆಗೆಟಿವ್ ರೋಲ್ ಕೊಡಿಸಿದ್ರು. ಇದಕ್ಕೂ ಮುನ್ನ ಚಿಕ್ಕ ವಯಸ್ಸಿನಲ್ಲಿ ಶಾಂತಿ ಕ್ರಾಂತಿ ಮಾಡಿದ್ರೂ ಸಹ ಸಿನಿ ಜರ್ನಿ ಶುರುವಾಗಿದ್ದು ಮಾತ್ರ ಎಕೆ 47ನಿಂದ" ಎಂದು ಹೇಳಿಕೆ ನೀಡಿದರು.

ರಕ್ಷಕ್ ಇಂಡಸ್ಟ್ರಿ ಆಯ್ದುಕೊಳ್ಳಲು ಕಾರಣವೇನು?
ಇನ್ನು ನೀವು ಇಂಡಸ್ಟ್ರಿಗೆ ಬರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ರಕ್ಷಕ್ "ನಾನು ಚಿಕ್ಕ ವಯಸ್ಸಿನಿಂದಲೂ ಮನೆಯಲ್ಲಿ ಚಿತ್ರಗಳ ಬಗ್ಗೆ ನಡೆಯುತ್ತಿದ್ದ ಚರ್ಚೆಗಳನ್ನೇ ನೋಡುತ್ತಾ ಬೆಳೆದವನು. ನಮ್ಮಪ್ಪ ನೀನು ಈ ತರ ಫೈಟ್ ಮಾಡಬೇಕು, ಈ ತರ ಡಾನ್ಸ್ ಮಾಡಬೇಕು ಎಂದು ಹುರುದುಂಬಿಸುತ್ತಿದ್ದರು. ಶಾಲಾ ಕಾಲೇಜಿಗೆ ರಜೆ ಹಾಕಿಸಿ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ರು. ಹೀಗಾಗಿ ಜೀವನ ನಡೆಸೋಕೆ ಸಿನಿಮಾವನ್ನೇ ಆಯ್ದುಕೊಂಡೆ" ಎಂದು ತಿಳಿಸಿದರು.

ಗುರು ಶಿಷ್ಯರು ಚಿತ್ರದಲ್ಲಿ ರಕ್ಷಕ್ ನಟನೆ
ಕಳೆದ ವರ್ಷ ಬಿಡುಗಡೆಗೊಂಡ ಶರಣ್ ಹಾಗೂ ನಿಶ್ವಿಕಾ ನಾಯ್ಡು ನಟನೆಯ ಮತ್ತು ಜಡೇಶ್ ಕುಮಾರ್ ಹಂಪಿ ನಿರ್ದೇಶನದ ಗುರು ಶಿಷ್ಯರು ಚಿತ್ರದಲ್ಲಿ ರಕ್ಷಕ್ ಬುಲೆಟ್ ನಟಿಸಿದ್ದರು. ಚಿತ್ರದಲ್ಲಿ ಶಾಲಾ ಮಕ್ಕಳ ಪಾತ್ರ ನಿರ್ವಹಿಸಿದ್ದ ಕಲಾವಿದರ ಮಕ್ಕಳ ಪೈಕಿ ರಕ್ಷಕ್ ಕೂಡ ಓರ್ವರಾಗಿ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದ್ದರು. ಈ ಚಿತ್ರದಲ್ಲಿ ಬಾಷಾ ಎಂಬ ಪಾತ್ರವನ್ನು ರಕ್ಷಕ್ ನಿರ್ವಹಿಸಿದ್ದರು.