Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪ್ರೇಮ್ ಮಾಡಿದ್ದ ಈ ಕೆಲಸದ ಮೇಲೆ ಶಿವಣ್ಣನಿಗೆ ಈಗಲೂ ಬೇಸರವಿದೆ!
ಕರಿಯ ಚಿತ್ರದ ಮೂಲಕ ಫಸ್ಟ್ ಬಾಲ್ ಸಿಕ್ಸರ್ ಚಚ್ಚಿದ್ದ ನಿರ್ದೇಶಕ ಪ್ರೇಮ್ ನಂತರ ಎಕ್ಸ್‌ಕ್ಯೂಸ್‌ಮಿ ಚಿತ್ರದ ಮೂಲಕವೂ ಗೆದ್ದರು. ಈ ಎರಡೂ ಚಿತ್ರಗಳಲ್ಲೂ ಸಿನಿ ರಸಿಕರಿಂದ ಪ್ರಶಂಸೆ ಗಿಟ್ಟಿಸಿಕೊಂಡಿದ್ದ ಪ್ರೇಮ್ ಸ್ಟಾರ್ ನಿರ್ದೇಶಕನಾಗಿದ್ದು ತಾನು ನಿರ್ದೇಶಿಸಿದ ಮೂರನೇ ಚಿತ್ರ ಜೋಗಿ ಮೂಲಕ. ಹೌದು, ಈಗಲೂ ಸಹ ನಿರ್ದೇಶಕ ಪ್ರೇಮ್ ಎನ್ನುವವರಿಗಿಂತ ಜೋಗಿ ಪ್ರೇಮ್ ಎಂದು ಕರೆಯುವವರೇ ಹೆಚ್ಚಿದ್ದಾರೆ.
ಹೀಗೆ ಆ ಚಿತ್ರದ ಹೆಸರನ್ನು ಸೇರಿಸಿ ಕರೆಯುವಷ್ಟು ದೊಡ್ಡ ಮಟ್ಟದ ಹಿಟ್ ಆಗಿತ್ತು ಜೋಗಿ ಚಿತ್ರ. ಶಿವ ರಾಜ್‌ಕುಮಾರ್ ಅವರನ್ನು ಹಲವು ದಿನಗಳ ಬಳಿಕ ರೌಡಿ ಪಾತ್ರದಲ್ಲಿ ತೆರೆ ಮೇಲೆ ತೋರಿಸಿದ್ದ ಜೋಗಿ ಪ್ರೇಮ್ ಶಿವಣ್ಣನಿಗೆ ಅದುವರೆಗೂ ಯಾರೂ ಪ್ರಯೋಗಿಸದ ಲುಕ್ ಹಾಗೂ ಹೇರ್‌ಸ್ಟೈಲ್ ನೀಡಿದ್ದರು. ಹೌದು, ಜೋಗಿ ಚಿತ್ರದಲ್ಲಿದ್ದ ಶಿವಣ್ಣನ ಲುಕ್, ಹೇರ್ ಸ್ಟೈಲ್ ಹಾಗೂ ಧರಿಸಿದ್ದ ಬಟ್ಟೆಗಳ ವಿಧಾನ ಅಂದಿಗೂ ಹಾಗೂ ಇಂದಿಗೂ ವಿಭಿನ್ನ ಹಾಗೂ ವಿಶಿಷ್ಟ.
ಜೋಗಿ ಚಿತ್ರ ಬಿಡುಗಡೆಯಾದಾಗ ಜೋಗಿ ಹೇರ್ ಸ್ಟೈಲ್ ಮಾಡಿಸಿದ್ದ ಹಲವಾರು ಸಿನಿ ರಸಿಕರಿದ್ದರು ಹಾಗೂ ಜೋಗಿ ಪ್ಯಾಂಟ್, ಜೋಗಿ ಶರ್ಟ್ ಎಂದು ಬಟ್ಟೆ ಧರಿಸುತ್ತಿದ್ದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದರು. ಈ ರೀತಿ ಟ್ರೆಂಡ್ ಹುಟ್ಟುಹಾಕುವ ಲುಕ್ ಅನ್ನು ಕೊಟ್ಟಿದ್ದ ನಿರ್ದೇಶಕ ಪ್ರೇಮ್ ಮೇಲೆ ಶಿವಣ್ಣನಿಗೆ ಇದೇ ಹೇರ್ ಸ್ಟೈಲ್ ಹಾಗೂ ಲುಕ್ ವಿಚಾರವಾಗಿ ಬೇಸರವಿತ್ತು. ಈ ವಿಷಯವನ್ನು ಫಿಲ್ಮ್ ಕಂಪ್ಯಾನಿಯನ್‌ನ ಕೈರಾಮ್ ವಾಶಿ ನಡೆಸಿದ ಸಂದರ್ಶನದಲ್ಲಿ ಸ್ವತಃ ಶಿವ ರಾಜ್‌ಕುಮಾರ್ ಅವರೇ ಹಂಚಿಕೊಂಡಿದ್ದಾರೆ.

ಪ್ರೇಮ್ ಮಾಡಿದ್ದ ಈ ಕೆಲಸದ ಬಗ್ಗೆ ಬೇಸರ
ಸಂದರ್ಶನದಲ್ಲಿ ಲುಕ್ ವಿಚಾರವಾಗಿ ಬಂದಾಗ ನಿರ್ದೇಶಕ ಹರ್ಷ ಹಾಗೂ ಪ್ರೇಮ್ ತನ್ನನ್ನು ವಿಭಿನ್ನ ಲುಕ್‌ನಲ್ಲಿ ತೋರಿಸಿದ ನಿರ್ದೇಶಕರು ಎಂದ ಶಿವ ರಾಜ್‌ಕುಮಾರ್ ಜೋಗಿ ಚಿತ್ರದಲ್ಲಿ ಹಾಗೂ ಜೋಗಯ್ಯ ಚಿತ್ರದಲ್ಲಿ ಪ್ರೇಮ್ ವಿಭಿನ್ನ ಲುಕ್ ನೀಡಿದ್ದರು, ಆದರೆ ವಿಲನ್ ಚಿತ್ರದಲ್ಲಿನ ನನ್ನ ಲುಕ್ ನನಗೆ ತುಂಬಾ ಬೇಸರ ಮೂಡಿಸಿತ್ತು ಎಂದರು. ಅಷ್ಟೇ ಅಲ್ಲದೇ ಆ ಲುಕ್ ಎಂದಾಗ ಕೆಲ ಗೆಳೆಯರ ಬಳಿ ಚೆನ್ನಾಗಿದೆಯಾ ಇಲ್ವಾ ಎಂಬುದನ್ನು ವಿಚಾರಿಸಲೂ ಸಹ ಹೇಳಿದ್ರಂತೆ ಶಿವಣ್ಣ.

ಕೆಲವರು ಎಲ್ಲದಕ್ಕೂ ಸರಿ ಎನ್ನುತ್ತಾರೆ
ಇನ್ನೂ ಮುಂದುವರಿದು ಮಾತನಾಡಿದ ಶಿವಣ್ಣ ಕೆಲ ಗೆಳೆಯರು ಇರುತ್ತಾರೆ, ನಾವು ಏನೇ ಕೇಳಿದರೂ ಹಾಗೂ ಏನೇ ಹೇಳಿದರೂ ಎಲ್ಲವನ್ನೂ ಸರಿ ಎಂದು ಹೇಳುತ್ತಾರೆ. ಆ ರೀತಿಯ ಗೆಳೆಯರನ್ನು ನಂಬಬಾರದು, ಏನೇ ಇದ್ದರೂ ನೇರವಾಗಿ ಸತ್ಯವನ್ನು ತಿಳಿಸುವ ಗೆಳೆಯರನ್ನು ಮಾತ್ರ ನಂಬಬೇಕು. ಅಂಥವರ ಬಳಿ ಈ ಲುಕ್ ಪ್ರಯತ್ನಿಸಬಹುದಾ ಎಂದು ಕೇಳಲು ಹೇಳಿದ್ದೆ, ಏಕೆಂದರೆ ಈ ರೀತಿಯ ಗೆಳೆಯರು ಮಾತ್ರ ನಿಜ ಹೇಳುತ್ತಾರೆ, ಉಳಿದವರ ಮಾತು ಕೇಳಿ ಚೆನ್ನಾಗಿರದ ಲುಕ್ ಅನ್ನು ಚೆನ್ನಾಗಿದೆ ಎಂದು ಪ್ರಯತ್ನಿಸಿದರೆ ಹಿನ್ನಡೆ ಆಗುವುದು ಖಚಿತ ಎಂದು ತಿಳಿಸಿದರು.

ಸತ್ಯ ಇನ್ ಲವ್ ಲುಕ್ ಇಷ್ಟವಿರಲಿಲ್ಲ
ಇನ್ನು ತಮ್ಮ ಸಿನಿ ಕೆರಿಯರ್‌ನಲ್ಲಿ ಅತ್ಯಂತ ನಿರಾಸೆ ಮೂಡಿಸಿದ ಹಾಗೂ ಇಷ್ಟವಾಗದ ಲುಕ್ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಶಿವ ರಾಜ್‌ಕುಮಾರ್ ಸತ್ಯ ಇನ್ ಲವ್ ಚಿತ್ರದ ಲುಕ್ ಎಂದು ತಿಳಿಸಿದರು. ಆ ಲುಕ್ ಇಷ್ಟವಿಲ್ಲದಿದ್ದರೂ ನಿರ್ದೇಶಕರು ಹೇಳಿದ ಕಾರಣಕ್ಕೆ ಒಪ್ಪಿಕೊಂಡೆ, ಏಕೆಂದರೆ ನಿರ್ದೇಶಕರು ಹೇಳಿದ ಹಾಗೆ ಕೇಳುವ ನಟ ನಾನು ಎಂದು ಶಿವಣ್ಣ ಹೇಳಿದರು.