'ಕಿರಾತಕ'ನ ಫಸ್ಟ್ ಲುಕ್ ರಿವೀಲ್: ಅಣ್ತಮ್ಮಂದಿರ ಜೊತೆ ಯಶ್

By Bharath Kumar

Recommended Video

ರಿವೀಲ್ ಆಯ್ತು ಕಿರಾತಕನ ಫಸ್ಟ್ ಲುಕ್..! | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಕೆಜಿಎಫ್ ಚಿತ್ರದ ನಂತರ ಯಶ್ ಕೈಗೆತ್ತಿಕೊಂಡಿರುವ ಸಿನಿಮಾ ಇದಾಗಿದ್ದು, ಈ ಚಿತ್ರಕ್ಕಾಗಿ ಸುಮಾರು ಎರಡೂವರೆ ವರ್ಷದಿಂದ ಬಿಟ್ಟಿದ್ದ ಗಡ್ಡ ಮತ್ತು ತಲೆ ಕೂದಲನ್ನ ಕಟ್ ಮಾಡಿಸಿದ್ದರು.

ಹೀಗಾಗಿ, 'ಮೈ ನೇಮ್ ಈಸ್ ಕಿರಾತಕ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಗೆಟಪ್ ಹೇಗಿರುತ್ತೆ ಕುತೂಹಲ ಅಭಿಮಾನಿಗಳನ್ನ ಕಾಡುತ್ತಿತ್ತು. ಇದೀಗ, ಯಶ್ ಅವರ ಫಸ್ಟ್ ಲುಕ್ ಬಹಿರಂಗವಾಗಿದೆ.

'ಕಿರಾತಕ' ಚಿತ್ರದಂತೆ ಇಲ್ಲಿಯೂ ಯಶ್ ಅಬ್ಬರಿಸಲು ಸಿದ್ಧವಾಗಿದ್ದು, ಅಣ್ತಮ್ಮಂದಿರ ಜೊತೆ ಅಖಾಡಕ್ಕಿಳಿದಿದ್ದಾರೆ. ಹಾಗಿದ್ರೆ, ಯಶ್ ಅವರ ಕಿರಾತಕ ಲುಕ್ ನ ವಿಶೇಷತೆಗಳೇನು.? ಯಶ್ ಗೆ ಸಾಥ್ ಕೊಡ್ತಿರುವ ಅಣ್ತಮ್ಮಂದಿರು ಯಾರು ಎಂದು ಮುಂದೆ ಚಿತ್ರದ ಸಮೇತ ನೋಡಿ. ಮುಂದೆ ಓದಿ.....

'ಕಿರಾತಕ'ನ ಫಸ್ಟ್ ಲುಕ್ ಇದೇ ನೋಡಿ

'ಕಿರಾತಕ'ನ ಫಸ್ಟ್ ಲುಕ್ ಇದೇ ನೋಡಿ

'ಮೈ ನೇಮ್ ಈಸ್ ಕಿರಾತಕ' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ತಮ್ಮ ಹಳೆ ವರಸೆ ತೋರಿಸಿದ್ದಾರೆ. ಹೌದು, ಕಿರಾತಕ ಚಿತ್ರದಲ್ಲಿನ ಯಶ್ ಅವರ ಲುಕ್ ರಿವಿಲ್ ಆಗಿದೆ. ಮಂಡ್ಯದ ಸ್ಟೈಲ್ ನಲ್ಲಿ ಪಂಚೆಯನ್ನ ಮೇಲಕ್ಕೆ ಎತ್ತಿ ಕಟ್ಟಿ, ಕಲರ್ ಫುಲ್ ಆಗಿರುವ ಶರ್ಟ್ ತೊಟ್ಟು ಫೀಲ್ಡ್ ಗೆ ಇಳಿದಿದ್ದಾರೆ. ಇದನ್ನ ನೋಡಿದ್ರೆ, ಕಿರಾತಕನ ಹಾವಳಿ ಇಲ್ಲಿಯೂ ಮುಂದೆವರೆಯಲಿದೆ ಎನ್ನುವುದು ಪಕ್ಕಾ ಆಗುತ್ತಿದೆ.

'ಕಿರಾತಕ'ನಿಗೆ ಅಣ್ತಮ್ಮಂದಿರು ಸಾಥ್

'ಕಿರಾತಕ'ನಿಗೆ ಅಣ್ತಮ್ಮಂದಿರು ಸಾಥ್

ಈ ಫೋಟೋದಲ್ಲಿ ಯಶ್ ಜೊತೆ ಮತ್ತಿಬ್ಬರು ಅಣ್ತಮ್ಮಂದಿರನ್ನ ಗಮನಿಸಬಹುದು. ಒಬ್ಬರು ರಾಕಿಂಗ್ ಸ್ಟಾರ್ ಆಲ್ ಟೈಂ ಜೊತೆಗಾರ ಚಿಕ್ಕಣ್ಣ. ಮತ್ತೊಬ್ಬರು ಸ್ಯಾಂಡಲ್ ವುಡ್ ಜಾದೂಗಾರ ಕುರಿ ಪ್ರತಾಪ್. ಈ ಇಬ್ಬರು ಕಿರಾತಕನಿಗೆ ಹಳ್ಳಿ ಸ್ಟೈಲ್ ನಲ್ಲಿ ಸಾಥ್ ಕೊಟ್ಟಿದ್ದಾರೆ.

ಮಂಡ್ಯ ಮತ್ತು ದುಬೈನಲ್ಲಿ ಶೂಟಿಂಗ್

ಮಂಡ್ಯ ಮತ್ತು ದುಬೈನಲ್ಲಿ ಶೂಟಿಂಗ್

ಆಗಸ್ಟ್ 25 ರಂದು ಸೆಟ್ಟೇರಿದ್ದ 'ಮೈ ನೇಮ್ ಈಸ್ ಕಿರಾತಕ' ಇಂದಿನಿಂದ ಶೂಟಿಂಗ್ ಆರಂಭಿಸಿದೆ. ಮಂಡ್ಯದ ಸುತ್ತ ಮುತ್ತ ಹಾಗೂ ದುಬೈನಲ್ಲಿ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಶೂಟಿಂಗ್ ನಡೆಯಲಿದೆ. 'ಕಿರಾತಕ' ಚಿತ್ರದ ಮುಂದುವರಿದ ಭಾಗವಾಗಿರುವ ಈ ಚಿತ್ರಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಜಯಣ್ಣ ಬ್ಯಾನರ್ ಅಡಿ ಸಿನಿಮಾ ನಿರ್ಮಾಣ ಆಗಲಿದೆ.

ಯಶ್ ಗೆ ಜೋಡಿಯಾದ ನಂದಿತಾ

ಯಶ್ ಗೆ ಜೋಡಿಯಾದ ನಂದಿತಾ

ಅಂದ್ಹಾಗೆ, ಈ ಚಿತ್ರದಲ್ಲಿ ಯಶ್ ಗೆ ಶ್ವೇತಾ ನಂದಿತಾ ಜೋಡಿಯಾಗಿದ್ದು, ನಾಗಾಭರಣ, ತಾರಾ ಕೂಡ ಇರಲಿದ್ದಾರೆ. ಇನ್ನುಳಿದಂತೆ ಸಾಧು ಕೋಕಿಲ, ಚಿಕ್ಕಣ್ಣ ಹಾಗೂ ಕುರಿ ಪ್ರತಾಪ್ ಅವರ ಕಾಮಿಡಿ ಜುಗಲ್ ಬಂದಿ ಇರಲಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಲಿದ್ದು, ಸುಧಾಕರ್.ಎಸ್.ರಾಜ್ ಛಾಯಾಗ್ರಹಣ ಚಿತ್ರಕ್ಕಿರಲಿದೆ.

More from Filmibeat

English summary
Rocking star Yash starrer My Name is Kirataka movie shooting starts from today (September 3rd). here is the first look of Yash.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X