ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್

By Bharath Kumar

Recommended Video

ಸೆಟ್ಟೇರಿತು ಯಶ್ ಹೊಸ ಸಿನಿಮಾ..! | Filmibeat Kannada

ಸುಮಾರು ಎರಡೂವರ್ಷದ ನಂತರ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. 'ಕೆಜಿಎಫ್' ಚಿತ್ರದ ಪಾತ್ರಕ್ಕಾಗಿ ಗಡ್ಡ ಮತ್ತು ತಲೆ ಕೂದಲು ಬಿಟ್ಟಿದ್ದ ರಾಕಿಂಗ್ ಕೊನೆಗೂ ತಮ್ಮ ಲುಕ್ ಬದಲಾಯಿಸಿದ್ದಾರೆ.

ತಮ್ಮ ರಗಡ್ ಲುಕ್ ಬದಲಿಸಿಕೊಂಡು, ಹ್ಯಾಂಡ್ಸಮ್ ರೂಪ ಪಡೆದ ನಂತರ ತಮ್ಮ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹೌದು, 'ಕೆಜಿಎಫ್' ಚಿತ್ರದ ನಂತರ ಯಶ್ ಅಭಿನಯಿಸಲಿರುವ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಮುಹೂರ್ತ ಇಂದು ಜರುಗಿದೆ.

ಈ ಹಿಂದೆ 'Rambo 2' ಹಾಗೂ 'ಕೃಷ್ಣ ರುಕ್ಕು' ಚಿತ್ರ ಮಾಡಿದ್ದ ಅನಿಲ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ.

My name is kirataka movie launch

ಯಶ್ 'ಕಿರಾತಕ' ಸಿನಿಮಾದಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈಗ ಕಿರಾತಕ ಚಿತ್ರದ ಮುಂದುವರೆದ ಭಾಗ ಎಂದು ಹೇಳಲಾಗುತ್ತಿದೆ. ಆದ್ರೆ, ಅದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಬಟ್, ಈ ಭಾರಿಯೂ ಅದೇ ರೀತಿಯ ಕಥಾ ಹಂದರವಿರುವ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವುದು ವಿಶೇಷ. ಇದು ಸ್ವಮೇಕ್ ಸಿನಿಮಾ ಆಗಿರಲಿದೆ.

My name is kirataka movie launch

ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ ಮಂಡ್ಯ, ಮೈಸೂರು ಸುತ್ತಾ ಮುತ್ತ ಚಿತ್ರೀಕರಣ ನಡೆಯಲಿದೆ. 'ನಂದ ಲವ್ಸ್ ನಂದಿತಾ' ಖ್ಯಾತಿಯ ನಂದಿತಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಬೇರೆ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ ಎನ್ನುವುದನ್ನು ಸದ್ಯಕ್ಕೆ ತಿಳಿಸಿಲ್ಲ.

More from Filmibeat

English summary
Kannada actor, Rocking star yash starrer 'my name is kirataka' movie launch today (august 25th). the movie directed by anil kumar and produced by jayanna combines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X