twitter
    For Quick Alerts
    ALLOW NOTIFICATIONS  
    For Daily Alerts

    ಗಡ್ಡಕ್ಕೆ ಕತ್ತರಿ ಬಿದ್ದ ಬೆನ್ನಲ್ಲೆ ಹೊಸ ಸಿನಿಮಾ ಆರಂಭಿಸಿದ ರಾಕಿಂಗ್ ಸ್ಟಾರ್

    By Bharath Kumar
    |

    Recommended Video

    ಸೆಟ್ಟೇರಿತು ಯಶ್ ಹೊಸ ಸಿನಿಮಾ..! | Filmibeat Kannada

    ಸುಮಾರು ಎರಡೂವರ್ಷದ ನಂತರ ರಾಕಿಂಗ್ ಸ್ಟಾರ್ ಯಶ್ ತಮ್ಮ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ. 'ಕೆಜಿಎಫ್' ಚಿತ್ರದ ಪಾತ್ರಕ್ಕಾಗಿ ಗಡ್ಡ ಮತ್ತು ತಲೆ ಕೂದಲು ಬಿಟ್ಟಿದ್ದ ರಾಕಿಂಗ್ ಕೊನೆಗೂ ತಮ್ಮ ಲುಕ್ ಬದಲಾಯಿಸಿದ್ದಾರೆ.

    ತಮ್ಮ ರಗಡ್ ಲುಕ್ ಬದಲಿಸಿಕೊಂಡು, ಹ್ಯಾಂಡ್ಸಮ್ ರೂಪ ಪಡೆದ ನಂತರ ತಮ್ಮ ಹೊಸ ಚಿತ್ರಕ್ಕೆ ಚಾಲನೆ ನೀಡಿದ್ದಾರೆ. ಹೌದು, 'ಕೆಜಿಎಫ್' ಚಿತ್ರದ ನಂತರ ಯಶ್ ಅಭಿನಯಿಸಲಿರುವ 'ಮೈ ನೇಮ್ ಈಸ್ ಕಿರಾತಕ' ಚಿತ್ರದ ಮುಹೂರ್ತ ಇಂದು ಜರುಗಿದೆ.

    ಕೊನೆಗೂ ಗಡ್ಡ ತೆಗೆದ ಯಶ್ : ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್ಕೊನೆಗೂ ಗಡ್ಡ ತೆಗೆದ ಯಶ್ : ಹೊಸ ಲುಕ್ ನಲ್ಲಿ ರಾಕಿಂಗ್ ಸ್ಟಾರ್

    ಈ ಹಿಂದೆ 'Rambo 2' ಹಾಗೂ 'ಕೃಷ್ಣ ರುಕ್ಕು' ಚಿತ್ರ ಮಾಡಿದ್ದ ಅನಿಲ್ ಕುಮಾರ್ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಜಯಣ್ಣ ಕಂಬೈನ್ಸ್ ನಿರ್ಮಾಣ ಮಾಡುತ್ತಿದೆ.

    My name is kirataka movie launch

    ಏನಿದು? ಯಶ್ ಹೆಸರಿನಲ್ಲಿ ಸುದ್ದಿ ಆಗ್ತಿರೋ ಹೊಸ ವಿವಾದ!ಏನಿದು? ಯಶ್ ಹೆಸರಿನಲ್ಲಿ ಸುದ್ದಿ ಆಗ್ತಿರೋ ಹೊಸ ವಿವಾದ!

    ಯಶ್ 'ಕಿರಾತಕ' ಸಿನಿಮಾದಿಂದ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದರು. ಈಗ ಕಿರಾತಕ ಚಿತ್ರದ ಮುಂದುವರೆದ ಭಾಗ ಎಂದು ಹೇಳಲಾಗುತ್ತಿದೆ. ಆದ್ರೆ, ಅದರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಬಟ್, ಈ ಭಾರಿಯೂ ಅದೇ ರೀತಿಯ ಕಥಾ ಹಂದರವಿರುವ ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎನ್ನುವುದು ವಿಶೇಷ. ಇದು ಸ್ವಮೇಕ್ ಸಿನಿಮಾ ಆಗಿರಲಿದೆ.

    My name is kirataka movie launch

    ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿರುವ ಚಿತ್ರತಂಡ ಮಂಡ್ಯ, ಮೈಸೂರು ಸುತ್ತಾ ಮುತ್ತ ಚಿತ್ರೀಕರಣ ನಡೆಯಲಿದೆ. 'ನಂದ ಲವ್ಸ್ ನಂದಿತಾ' ಖ್ಯಾತಿಯ ನಂದಿತಾ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಬೇರೆ ಯಾರೆಲ್ಲಾ ಅಭಿನಯ ಮಾಡಲಿದ್ದಾರೆ ಎನ್ನುವುದನ್ನು ಸದ್ಯಕ್ಕೆ ತಿಳಿಸಿಲ್ಲ.

    English summary
    Kannada actor, Rocking star yash starrer 'my name is kirataka' movie launch today (august 25th). the movie directed by anil kumar and produced by jayanna combines.
    Saturday, August 25, 2018, 13:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X