For Quick Alerts
  ALLOW NOTIFICATIONS  
  For Daily Alerts

  'ಕಿರಾತಕ-2' ಚಿತ್ರಕ್ಕೆ ತಾತ್ಕಾಲಿಕ ಬ್ರೇಕ್: 'ಕೆಜಿಎಫ್-2' ಮೊದಲು

  |
  KGF Movie: ಕಿರಾತಕ ಬದಿಗಿಟ್ಟು ಕೆಜಿಎಫ್ 2ರಲ್ಲಿ ಬ್ಯುಸಿಯಾದ ಯಶ್ | FILMIBEAT KANNADA

  'ಮೈ ನೇಮ್ ಈಸ್ ಕಿರಾತಕ' ಮೊದಲಾ ಅಥವಾ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಮೊದಲಾ ಎಂಬ ಕುತೂಹಲ ಸ್ಯಾಂಡಲ್ ವುಡ್ ನಲ್ಲಿ ಕಾಡ್ತಿತ್ತು. ಇನ್ನೊಂದೆಡೆ ಕೆಜಿಎಫ್-2 ಚಿತ್ರಕ್ಕಾಗಿ ಕಿರಾತಕ ಸಿನಿಮಾವನ್ನ ಕೈಬಿಡಲಾಗಿದೆ. ಈ ಚಿತ್ರ ನಿಂತುಹೋಗಿದೆ ಎಂದು ಹೇಳಲಾಗ್ತಿತ್ತು.

  ಈ ಬಗ್ಗೆ ಮಾತನಾಡಿದ್ದ ರಾಕಿಂಗ್ ಸ್ಟಾರ್ ಯಶ್ ''ಸಿನಿಮಾ ನಿಂತಿಲ್ಲ. ಆದ್ರೆ, ನಿರ್ಮಾಪಕರ ನಡುವೆ ಮಾತುಕತೆ ಆಗ್ತಿದೆ, ಯಾವ ಚಿತ್ರದ ಮೊದಲು ಮಾಡ್ಬೇಕು, ಎಷ್ಟು ಟೈಂ ಇದೆ ಎಂಬುದು ಚರ್ಚೆಯಾಗ್ತಿದೆ'' ಎಂದಿದ್ದರು.

  'ಕೆಜಿಎಫ್' ನಂತರ ಮತ್ತೆ 'ಕಿರಾತಕ' ಆಗ್ತಾರಾ ಅಣ್ತಮ್ಮ ಯಶ್ ?

  ಇದೀಗ, ಕಿರಾತಕ ಸೀಕ್ವೆಲ್ ಬಗ್ಗೆ ನಿರ್ಮಾಪಕ ಜಯಣ್ಣ ಮಾತನಾಡಿದ್ದಾರೆ. ''ಮೈ ನೇಮ್ ಈಸ್ ಕಿರಾತಕ ಸಿನಿಮಾ ನಿಂತಿಲ್ಲ. ಆದ್ರೆ, ಎರಡು ವರ್ಷ ವಿಳಂಬವಾಗುತ್ತೆ. ಸದ್ಯಕ್ಕೆ ಯಶ್ ಕೆಜಿಎಫ್ ಚಾಪ್ಟರ್ 2 ಮಾಡ್ತಿದ್ದಾರೆ. ಅದಾದ ಬಳಿಕ ಕಿರಾತಕ 2 ಶುರು ಮಾಡ್ತೀವಿ'' ಎಂದು ಸ್ಪಷ್ಟನೆ ನೀಡಿದ್ದಾರೆ.

  ಕೆಜಿಎಫ್ ಸಿನಿಮಾ ಭಾಗ 2 ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಈಗಾಗಲೇ ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿರುವ ಪ್ರಕಾರ 2020ರಲ್ಲಿ ಸಿನಿಮಾ ತೆರೆಕಾಣಲಿದೆ.

  ಕೆಜಿಎಫ್ ಚಾಪ್ಟರ್ 2 ಸಿನಿಮಾ ಮಾಡೋವರೆಗೂ ಬೇರೆ ಯಾವ ಚಿತ್ರವನ್ನ ಕೂಡ ಯಶ್ ಒಪ್ಪುವುದಿಲ್ಲ ಎಂಬ ಮಾತಿದೆ. ಮತ್ತೊಂದೆಡೆ ಕಿರಾತಕ ಸೀಕ್ವೆಲ್ ಚಿತ್ರದ ಶೂಟಿಂಗ್ ಕೂಡ ಆರಂಭವಾಗಿತ್ತು. ಒಂದು ಹಂತದ ಚಿತ್ರೀಕರಣ ಮುಗಿದಿತ್ತು.

  English summary
  Recently, there was a news that Yash's new film 'My Name is Kirataka' has been shelved due to various reasons. However, producer Jayanna has denied the rumors saying that the film has not been shelved, but will be delayed by two year.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X