For Quick Alerts
  ALLOW NOTIFICATIONS  
  For Daily Alerts

  'ಮೈಲಾರಿ' ಚಿತ್ರಕ್ಕೆ 10 ವರ್ಷ: ಕೇಕ್ ಕತ್ತರಿಸಿ ಸಂಭ್ರಮಿಸಿದ ಶಿವಣ್ಣ

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಸದಾ ಹಾಗೂ ಸಂಜನಾ ನಟಿಸಿದ್ದ ಮೈಲಾರಿ ಸಿನಿಮಾ ತೆರೆಕಂಡು 10 ವರ್ಷ ಆಗಿದೆ. ಮೈಲಾರಿ ಸಿನಿಮಾ ದಶಕ ಪೂರೈಸಿದ ಹಿನ್ನೆಲೆ ನಟ ಶಿವಣ್ಣ, ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಅಭಿಮಾನಿಗಳು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.

  2010ರ ಡಿಸೆಂಬರ್ 24 ರಂದು ಬಿಡುಗಡೆಯಾಗಿದ್ದ 'ಮೈಲಾರಿ' ಸಿನಿಮಾ ಆರ್ ಚಂದ್ರುಗೆ ದೊಡ್ಡ ಹೆಸರು ತಂದು ಕೊಡ್ತು. ಶಿವಣ್ಣನಿಗೂ ಸಕ್ಸಸ್ ಕೊಟ್ಟ ಸಿನಿಮಾ ಇದು. ಇಂತಹ ಖುಷಿ ನೀಡಿದ ಚಿತ್ರದ ದಶಕದ ಸಂಭ್ರಮವನ್ನು ಸೆಂಚುರಿ ಸ್ಟಾರ್ ತಮ್ಮ ಅಭಿಮಾನಿಗಳ ಜೊತೆ ಸೇರಿ ಸೆಲೆಬ್ರೆಟ್ ಮಾಡಿದ್ದಾರೆ. ಈ ವೇಳೆ ಪತ್ನಿ ಗೀತಾ, ನಿರ್ಮಾಪಕ ಕೆಪಿ ಶ್ರೀಕಾಂತ್, ಶಿವಣ್ಣನ ಕಿರಿಯ ಪುತ್ರಿ ಸಹ ಭಾಗವಹಿಸಿದ್ದರು. ಮುಂದೆ ಓದಿ...

  'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?'ಮೈಲಾರಿ' ಕಥೆ ಕೇಳಿ ಕಣ್ಣೀರಿಟ್ಟ ನಿರ್ಮಾಪಕ ಕೊಟ್ಟ ಅಡ್ವಾನ್ಸ್ ಎಷ್ಟು?

  ಶಿವಣ್ಣನ ಮನೆಯಲ್ಲಿ ಮೈಲಾರಿ ಸಂಭ್ರಮ

  ಶಿವಣ್ಣನ ಮನೆಯಲ್ಲಿ ಮೈಲಾರಿ ಸಂಭ್ರಮ

  ಬೆಂಗಳೂರಿನ ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸದಲ್ಲಿ 'ಮೈಲಾರಿ' ಸಿನಿಮಾದ ನಿರ್ಮಾಪಕ ಹಾಗೂ ಶಿವಣ್ಣನ ಆಪ್ತ ಕೆಪಿ ಶ್ರೀಕಾಂತ್ ಹಾಗೂ ಅಭಿಮಾನಿಗಳು ಸೇರಿ ಮೈಲಾರಿ ಹೆಸರಿನಲ್ಲಿ ಕೇಕ್ ಸಿದ್ಧಪಡಿಸಿದ್ದರು. ಈ ಕೇಕ್ ಕತ್ತರಿಸಿದ ಶಿವಣ್ಣ ಅಭಿಮಾನಿಗಳ ಜೊತೆ ಸಂಭ್ರಮಿಸಿದರು. ಈ ವೇಳೆ ಗ್ರೂಪ್ ಫೋಟೋ ಸಹ ಕ್ಲಿಕ್ಕಿಸಿಕೊಂಡರು.

  ಪ್ರೇಮ್ ಕಹಾನಿ ಸೋಲಿನ ಬಳಿಕ ಮೈಲಾರಿ

  ಪ್ರೇಮ್ ಕಹಾನಿ ಸೋಲಿನ ಬಳಿಕ ಮೈಲಾರಿ

  'ತಾಜ್ ಮಹಲ್' ಯಶಸ್ಸಿನ ಬಳಿಕ ಆರ್ ಚಂದ್ರು ಪ್ರೇಮ್ ಕಹಾನಿ ಎಂಬ ಸಿನಿಮಾ ಮಾಡಿದರು. ಈ ಸಿನಿಮಾ ಸೋಳು ಕಂಡಿತು. ಈ ಚಿತ್ರದ ಬಳಿಕ ಚಂದ್ರುಗೆ ಸಿನಿಮಾ ಇಂಡಸ್ಟ್ರಿನೇ ಬೇಡವಾಯಿತು. ಬೆಂಗಳೂರು ಬಿಟ್ಟು ಸ್ವಂತ ಊರಿಗೆ ಹೋಗಿಬಿಡೋಣ ಎಂದು ನಿರ್ಧರಿಸಿಬಿಟ್ಟಿದ್ದರು. ಆದ್ರೆ, ಕೊನೆ ಘಳಿಗೆಯಲ್ಲಿ ಹೊಸ ಕಥೆ ಕೈಗೆತ್ತಿಕೊಂಡು ಶಿವಣ್ಣ ಬಳಿ ಹೋದರು.

  'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು'ಈ ಸಿನಿಮಾ ಇಂಡಸ್ಟ್ರಿ ಬೇಡ ವಾಪಸ್ ಹೋಗ್ಬಿಡು ಅಂದಿದ್ರು ಆ ವ್ಯಕ್ತಿ'- ಆರ್ ಚಂದ್ರು

  ಕಥೆ ಕೇಳಿ ನಿರ್ಮಾಪಕ ಭಾವುಕ

  ಕಥೆ ಕೇಳಿ ನಿರ್ಮಾಪಕ ಭಾವುಕ

  ಮೈಲಾರಿ ಸ್ಕ್ರಿಪ್ಟ್ ಕೇಳಿದ ಶಿವರಾಜ್ ಕುಮಾರ್ ಗ್ರೀನ್ ಸಿಗ್ನಲ್ ಕೊಟ್ಟರು. ನಂತರ ಕೆಪಿ ಶ್ರೀಕಾಂತ್ ಮೂಲಕ ಕನಕಪುರ ಶ್ರೀನಿವಾಸ್ ಅವರನ್ನು ಭೇಟಿ ಮಾಡಲು ಸೂಚಿಸಿದರು. ಕನಕಪುರಕ್ಕೆ ಹೋಗಿ ಶ್ರೀನಿವಾಸ್ ಅವರಿಗೆ ಮೈಲಾರಿ ಕಥೆ ಹೇಳಿದರು ಚಂದ್ರು. ಕಥೆ ಕೇಳಿದ ನಿರ್ಮಾಪಕ ಶ್ರೀನಿವಾಸ್ ಒಂದು ಕ್ಷಣ ಕಣ್ಣೀರು ಹಾಕಿದರು ಎಂದು ಈ ಹಿಂದೆ ಫಿಲ್ಮಿಬೀಟ್‌ಗೆ ನೀಡಿದ ಸಂದರ್ಶನದಲ್ಲಿ ಆರ್ ಚಂದ್ರು ಹೇಳಿಕೊಂಡಿದ್ದರು.

  ತನ್ನ ಹೊಸ ಹಾಡು ಪಾರ್ಟಿ ಫ್ರೀಕ್ ನ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ | Filmibeat Kannada
  ಚಂದ್ರು ವೃತ್ತಿ ಜೀವನ ಬದಲಾಯಿತು

  ಚಂದ್ರು ವೃತ್ತಿ ಜೀವನ ಬದಲಾಯಿತು

  ಅಂದು ಮೈಲಾರಿ ಸಿನಿಮಾ ದೊಡ್ಡ ಹಿಟ್ ಆಯಿತು. ಚಿತ್ರದ ಸಕ್ಸಸ್ ಕಾರ್ಯಕ್ರಮವನ್ನು ಹುಬ್ಬಳಿಯಲ್ಲಿ ಮಾಡಲಾಗಿತ್ತು. ಮೈಲಾರಿ ನಂತರ ಚಂದ್ರು ಹಿಂತಿರುಗಿ ನೋಡಲಿಲ್ಲ. ಕೋ ಕೋ, ಚಾರ್ ಮಿನರ್, ಬ್ರಹ್ಮ, ಮಳೆ, ಕನಕ, ಐ ಲವ್ ಯೂ, ಲಕ್ಷ್ಮಿ ಹೀಗೆ ಸ್ಟಾರ್ ನಟರ ಜೊತೆಯಲ್ಲಿ ಸಿನಿಮಾ ಮಾಡಿದರು. ಮೈಲಾರಿ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದರು. ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿತ್ತು.

  English summary
  R Chandru directional Mylari movie Completes 10 Years: Shiva Rajkumar celebrates with his wife, producer and fans.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X