For Quick Alerts
  ALLOW NOTIFICATIONS  
  For Daily Alerts

  'ಮೈಸೂರು ಡೈರೀಸ್' ಮೊದಲ ಹಾಡು ಕೇಳಲು ಚೆಂದ

  |

  'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಗಮನ ಸೆಳೆದಿದ್ದ ಧನಂಜಯ್ ರಂಜನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ 'ಮೈಸೂರು ಡೈರೀಸ್' ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಟ್ರೈಲರ್ ಮೂಲಕ ಭರವಸೆ ಮೂಡಿಸಿರುವ ಈ ಚಿತ್ರ ಈಗ ಮೊದಲ ಹಾಡು ಬಿಡುಗಡೆ ಮಾಡಿದೆ.

  'ದೂರದಿಂದ...ಸುರಸುಂದರಾಂಗ ಜಾಣ ಬಂದ.....' ಹಾಡು ರಿಲೀಸ್ ಆಗಿದ್ದು ಯೂಟ್ಯೂಬ್ ನಲ್ಲಿ ಸದ್ದು ಮಾಡ್ತಿದೆ. ಚರಣ್ ರಾಜ್ ಸಂಗೀತ ನೀಡಿರುವ ಈ ಹಾಡಿಗೆ ಧನಂಜಯ್ ರಂಜನ್ ಸಾಹಿತ್ಯ ರಚಿಸಿದ್ದಾರೆ. ಸುಚಿತ್ರಾ ಸುರೇಸನ್ ಮತ್ತು ಧನ್ಯಶ್ ಜಗದೀಶ್ ಹಾಡಿದ್ದಾರೆ.

  ಕನ್ನಡ ರಾಜೋತ್ಸವಕ್ಕೆ 'ಮೈಸೂರು ಡೈರೀಸ್' ನೋಡಬಹುದುಕನ್ನಡ ರಾಜೋತ್ಸವಕ್ಕೆ 'ಮೈಸೂರು ಡೈರೀಸ್' ನೋಡಬಹುದು

  'ಮೈಸೂರು ಡೈರೀಸ್' ಸಿನಿಮಾ ನೆನಪುಗಳ ಪುಟವನ್ನ ಮತ್ತೆ ಬಿಚ್ಚಿಡುವಂತಹ ಸಿನಿಮಾ. ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಡೈರಿ ಇದ್ದೆ ಇರುತ್ತೆ. ಆ ಡೈರಿ ನೆನಪಾಗುವಂತಹ ಕಥೆ ಇದಾಗಿದೆಯಂತೆ. ಪ್ರಭು ಈ ಚಿತ್ರದ ನಾಯಕನಾಗಿದ್ದು, ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.

  ಅಂದ್ಹಾಗೆ, ಈ ಚಿತ್ರವನ್ನ ನಿರ್ಮಾಣ ಮಾಡಿರುವುದು ದೀಪಕ್ ಕೃಷ್ಣ. ಈ ಹಿಂದೆ ಗೆಳೆಯರ ಜೊತೆ ಸೇರಿ 'ಪುಷ್ಪಕ ವಿಮಾನ' ಚಿತ್ರಕ್ಕೆ ಬಂಡವಾಳ ಹಾಕಿದ್ದರು. ದೀಪಕ್ ಕೃಷ್ಣ ಅವರಿಗೂ ಕೂಡ ಇದು ಸ್ವತಂತ್ರವಾಗಿ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ.

  ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಶೀರ್ಷಿಕೆ, ಟೀಸರ್ ಈಗ ಹಾಡುಗಳ ಮೂಲಕ ಗಮನ ಸೆಳೆಯುತ್ತಿರುವ 'ಮೈಸೂರು ಡೈರೀಸ್' ಜನವರಿ ಅಂತ್ಯಕ್ಕೆ ತೆರೆಗೆ ಬರುವ ತಯಾರಿಯಲ್ಲಿದೆ.

  English summary
  Dhananjay Ranjan Directional 'Mysore Diaries' movie set to release on january end. now, first song has released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X