ಕನ್ನಡ ರಾಜೋತ್ಸವಕ್ಕೆ 'ಮೈಸೂರು ಡೈರೀಸ್' ನೋಡಬಹುದು

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಗಮನ ಸೆಳೆದಿದ್ದ ಧನಂಜಯ್ ರಂಜನ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ 'ಮೈಸೂರು ಡೈರೀಸ್' ನವೆಂಬರ್ 1ಕ್ಕೆ ತೆರೆಗೆ ಬರುವ ತಯಾರಿಯಲ್ಲಿದೆ. ಸದ್ಯ, ಚಿತ್ರದ ಟೀಸರ್ ಬಿಡುಗಡೆಯಾಗಿದ್ದು ವಿಶೇಷವಾಗಿ ಗಮನ ಸೆಳೆಯುತ್ತಿದೆ.

ಧನಂಜಯ್ ರಂಜನ್ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ನಟಿಸುವುದವರ ಜೊತೆಗೆ ಸಂಭಾಷಣೆ ಮತ್ತು 'ಬೆಳಗೆದ್ದು ಯಾರ ಮುಖವಾ ನಾನು ನೋಡಲಿ....'ಹಾಡು ರಚಿಸಿದ್ದರು. 'ರಾಮಾ ರಾಮಾ ರೇ' ಚಿತ್ರತಂಡದ ಜೊತೆ ಚಿತ್ರಕಥೆಯಲ್ಲಿ ಕೆಲಸ ಮಾಡಿದ್ದರು. 'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲೂ ಹಾಡು ರಚಿಸಿದ್ದರು. ಇದೀಗ ಮೊದಲ ಸಲ ಸ್ವತಂತ್ರ ನಿರ್ದೇಶಕರಾಗಿ 'ಮೈಸೂರು ಡೈರೀಸ್' ಗೆ ಆಕ್ಷನ್ ಕಟ್ ಹೇಳಿದ್ದಾರೆ.

Mysore Diaries will releasing on november 1

'ಮೈಸೂರು ಡೈರೀಸ್' ಸಿನಿಮಾ ನೆನಪುಗಳ ಪುಟವನ್ನ ಮತ್ತೆ ಬಿಚ್ಚಿಡುವಂತಹ ಸಿನಿಮಾ. ಪ್ರತಿಯೊಬ್ಬರ ಜೀವನದಲ್ಲೂ ಒಂದೊಂದು ಡೈರಿ ಇದ್ದೆ ಇರುತ್ತೆ. ಆ ಡೈರಿ ನೆನಪಾಗುವಂತಹ ಕಥೆ ಇದಾಗಿದೆಯಂತೆ. ಪ್ರಭು ಈ ಚಿತ್ರದ ನಾಯಕನಾಗಿದ್ದು, ಪಾವನಾ ಗೌಡ ನಾಯಕಿಯಾಗಿ ನಟಿಸಿದ್ದಾರೆ.

ಅಂದ್ಹಾಗೆ, ಈ ಚಿತ್ರವನ್ನ ನಿರ್ಮಾಣ ಮಾಡಿರುವುದು ದೀಪಕ್ ಕೃಷ್ಣ. ಈ ಹಿಂದೆ ಗೆಳೆಯರ ಜೊತೆ ಸೇರಿ 'ಪುಷ್ಪಕ ವಿಮಾನ' ಚಿತ್ರಕ್ಕೆ ಬಂಡವಾಳ ಹಾಕಿದ್ದರು. ದೀಪಕ್ ಕೃಷ್ಣ ಅವರಿಗೂ ಕೂಡ ಇದು ಸ್ವತಂತ್ರವಾಗಿ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ. ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಶೀರ್ಷಿಕೆ ಮತ್ತು ಟೀಸರ್ ಮೂಲಕ ವಿಭಿನ್ನವಾಗಿ ಗಮನ ಸೆಳೆಯುತ್ತಿರುವ 'ಮೈಸೂರು ಡೈರೀಸ್' ಕನ್ನಡ ರಾಜೋತ್ಸವದ ಪ್ರಯುಕ್ತ ನವೆಂಬರ್ 1ಕ್ಕೆ ಚಿತ್ರಮಂದಿರಕ್ಕೆ ಬರ್ತಿರುವುದು ಚಿತ್ರಪ್ರೇಮಿಗಳಿಗೆ ಖುಷಿ ನೀಡಿದೆ.

More from Filmibeat

English summary
Dhananjay Ranjan Directional 'Mysore Diaries' movie will releasing on november 1. now, teaser has released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X