For Quick Alerts
  ALLOW NOTIFICATIONS  
  For Daily Alerts

  ನಟ ದರ್ಶನ್‌ಗೆ ಅವಮಾನ: ಕೊನೆಗೂ ಕ್ಷಮೆ ಕೇಳಿದ ಮೈಸೂರಿನ ಯುವಕ

  |

  ಇತ್ತೀಚೆಗೆ ನಟ ದರ್ಶನ್ ಸಂದರ್ಶನವೊಂದರಲ್ಲಿ ಮಾತನಾಡುತ್ತ ನೀಡಿದ್ದ ಹೇಳಿಕೆಯೊಂದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಇದು ಅಪ್ಪು ಫ್ಯಾನ್ಸ್ ಮತ್ತು ದರ್ಶನ್ ಫ್ಯಾನ್ಸ್‌ ನಡುವೆ ಗಲಾಟೆಗೆ ಕಾರಣವಾಗಿದೆ. ಈ ವೇಳೇ ಮೈಸೂರಿನ ಯುವಕನೊಬ್ಬ ಸ್ಪೆಲ್ಫಿ ವಿಡಿಯೋ ಮಾಡಿ ನಟ ದರ್ಶನ್ ಹಾಗೂ ದರ್ಶನ್‌ ಫ್ಯಾನ್ಸ್‌ಗೆ ಕೆಟ್ಟದಾಗಿ ಮಾತನಾಡಿದ್ದ. ಇದೀಗ ಆತ ಕ್ಷಮೆ ಕೇಳಿದ್ದಾನೆ.

  ಸಂದರ್ಶನದಲ್ಲಿ ನಟ ಪುನೀತ್ ರಾಜ್‌ಕುಮಾರ್ ಸಾವಿನ ಬಗ್ಗೆ ದರ್ಶನ್ ಮಾತನಾಡಿದ್ದು, ಇಬ್ಬರ ಫ್ಯಾನ್ಸ್‌ ವಾರ್‌ಗೆ ಕಾರಣವಾಗಿತ್ತು. ಅಭಿಮಾನಿಗಳು 'ಕ್ರಾಂತಿ' ಚಿತ್ರದ ಪ್ರಚಾರವನ್ನು ಬಹಳ ಅದ್ಧೂರಿಯಾಗಿ ಮಾಡುತ್ತಾ ಬರುತ್ತಿದ್ದಾರೆ. ಇದು ನಟ ದರ್ಶನ್‌ಗೂ ಅಚ್ಚರಿ ತಂದಿದೆ. ಈ ಬಗ್ಗೆ ಮಾತನಾಡುತ್ತಾ "ಸಹಜವಾಗಿ ನಾವು ಸತ್ತಮೇಲೆ ನೋಡಿದ್ದೇವೆ. ಫ್ಯಾನ್ಸ್‌ಗಳು ಅಂದ್ರೆ ಹೇಗೆ ಎಂದು. ಪುನೀತ್ ರಾಜ್‌ಕುಮಾರ್ ಒಬ್ಬರದ್ದೇ ಸಾಕು. ಫ್ಯಾನ್ಸ್‌ಗಳು ನಾನು ಬದುಕಿದ್ದಾಗಲೇ ತೋರಿಸಿ ಬಿಟ್ಟರಲ್ಲ ನನಗೆ ಅಷ್ಟೇ ಸಾಕು ಅನಿಸಬಿಡ್ತು. ಬಿಡಯ್ಯ ಇದಕ್ಕಿಂತ ಇನ್ನೇನು ಬೇಕು." ಎಂದಿದ್ದರು. ಇದು ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳನ್ನು ಕೆರಳಿಸಿತ್ತು. ಇಬ್ಬರ ನಟರ ಫ್ಯಾನ್ಸ್‌ ನಡುವಿನ ವಾರ್‌ಗೆ ಕಾರಣವಾಗಿತ್ತು

  'ವಂದೇ ಮಾತರಂ' ಗೀತೆಯಲ್ಲಿ ದರ್ಶನ್, ಯಶ್ ಯಾಕಿಲ್ಲ: ಜಗ್ಗೇಶ್ ಸ್ಪಷ್ಟನೆ!'ವಂದೇ ಮಾತರಂ' ಗೀತೆಯಲ್ಲಿ ದರ್ಶನ್, ಯಶ್ ಯಾಕಿಲ್ಲ: ಜಗ್ಗೇಶ್ ಸ್ಪಷ್ಟನೆ!

  ಪುನೀತ್ ರಾಜ್‌ಕುಮಾರ್ ಕುರಿತು ನಟ ದರ್ಶನ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಬೇಕು ಎಂದು ಅಪ್ಪು ಫ್ಯಾನ್ಸ್ ಒತ್ತಾಯಿಸಿದ್ದರು. ಕ್ಷಮೆ ಕೇಳದೇ ಇದ್ದರೆ 'ಕ್ರಾಂತಿ' ಸಿನಿಮಾವನ್ನು ಬಹಿಷ್ಕರಿಸೋದಾಗಿಯೂ ಎಚ್ಚರಿಕೆ ನೀಡಿದ್ದರು. ನಮ್ಮ ಬಾಸ್‌, ಅಪ್ಪು ಸರ್ ಬಗ್ಗೆ ತಪ್ಪಾಗಿ ಏನು ಮಾತನಾಡಿಲ್ಲ. ಅವರು ಕ್ಷಮೆ ಕೇಳುವ ಅವಶ್ಯಕತೆ ಕೂಡ ಇಲ್ಲ ಎಂದು ದರ್ಶನ್ ಫ್ಯಾನ್ಸ್ ಹೇಳಿದ್ದರು. ಆದರೆ ಈ ಮಧ್ಯೆ ಮೈಸೂರಿನ ಯುವಕ ಪವನ್, ನಟ ದರ್ಶನ್ ಹಾಗೂ ದರ್ಶನ್‌ ಫ್ಯಾನ್ಸ್‌ನ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಆತ ಕ್ಷಮೆ ಕೇಳಿದ್ದಾನೆ.

   ನಟ ದರ್ಶನ್ ಕ್ಷಮೆ ಕೇಳಿದ ಪವನ್

  ನಟ ದರ್ಶನ್ ಕ್ಷಮೆ ಕೇಳಿದ ಪವನ್

  ಪವನ್ ಹೇಳಿಕೆ ಖಂಡಿಸಿ ಅಖಿಲ ಕರ್ನಾಟಕ ದರ್ಶನ್ ಅಭಿಮಾನಿಗಳ ಸಂಘದ ರಾಜ್ಯ ಉಪಾಧ್ಯಕ್ಷ ನಾಗರಾಜ್ .ಆರ್ ಮೈಸೂರಿನ ಸಿಇಎನ್‌ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ಯುವಕನನ್ನು ಕರೆಸಿ ಬುದ್ದಿ ಹೇಳಿದ್ದಾರೆ. ದರ್ಶನ್ ಹಾಗೂ ದರ್ಶನ್ ಫ್ಯಾನ್ಸ್ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ತಪ್ಪಾಯಿತು ಎಂದು ಪವನ್ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾನೆ. ಇನ್ನು ಮುಂದೆ ಯಾರ ಬಗ್ಗೆಯೂ ಹೀಗೆ ಮಾತನಾಡಬಾರದು ಎಂದು ದರ್ಶನ್ ಫ್ಯಾನ್ಸ್ ಆತನಿಗೆ ಬುದ್ಧಿ ಹೇಳಿದ್ದಾರೆ.

   ನನಗೆ ಮಾತನಾಡಲು ಭಯ ಎಂದ ದರ್ಶನ್

  ನನಗೆ ಮಾತನಾಡಲು ಭಯ ಎಂದ ದರ್ಶನ್

  ನಿನ್ನೆ(ಆಗಸ್ಟ್ 15)ಯಷ್ಟೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ನಟ ದರ್ಶನ್‌, "ನಾನು ಏನೇ ಮಾತನಾಡಿದರೂ ಕಾಂಟ್ರವರ್ಸಿ ಆಗುತ್ತದೆ. ಕಾಂಟ್ರವರ್ಸಿಯಲ್ಲೇ ನಾನಿರೋದು ಆಕ್ಯ್ಚುಲಿ. ಮಾತೇತ್ತಿದ್ರೆ ಕಾಂಟ್ರವರ್ಸಿಯಲ್ಲಿ ಇರ್ತೀನಿ" ಎಂದು ಪರೋಕ್ಷವಾಗಿ ಇತ್ತೀಚಿನ ಕಾಂಟ್ರವರ್ಸಿಗಳನ್ನು ನೆನಪಿಸಿಕೊಂಡಿದ್ದರು. ಅಷ್ಟೇ ಅಲ್ಲ "ನನ್ನಂಥ ಸಣ್ಣ ಕಲಾವಿದರನ್ನು ಕಾಂಟ್ರವರ್ಸಿಯಲ್ಲಿ ಇರುವವರನ್ನು ಹರಸಿ ಬೆಳೆಸಿ" ಎಂದು ಹೇಳಿದ್ದರು.

   'D56' ಸಿನಿಮಾ ಶೂಟಿಂಗ್‌ಗೆ ದರ್ಶನ್ ರೆಡಿ

  'D56' ಸಿನಿಮಾ ಶೂಟಿಂಗ್‌ಗೆ ದರ್ಶನ್ ರೆಡಿ

  ತರುಣ್‌ ಸುಧೀರ್ ನಿರ್ದೇಶನದಲ್ಲಿ ನಟ ದರ್ಶನ್ ನಟನೆಯ 56ನೇ ಸಿನಿಮಾ ಶೂಟಿಂಗ್ ಶುರುವಾಗ್ತಿದೆ. ರಾಕ್‌ಲೈನ್ ವೆಂಕಟೇಶ್ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. 'ರಾಬರ್ಟ್' ಚಿತ್ರಕ್ಕೆ ಕೆಲಸ ಮಾಡಿದ್ದ ಬಹುತೇಕ ತಂಡ ಈ ಚಿತ್ರಕ್ಕೂ ಕೆಲಸ ಮಾಡಲಿದೆ. ಚಿತ್ರಕ್ಕೆ ಹಿರಿಯ ನಟಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದಾರೆ.

   ರಾಜ್ಯೋತ್ಸವ ಸಂಭ್ರಮದಲ್ಲಿ ದರ್ಶನ್ 'ಕ್ರಾಂತಿ'

  ರಾಜ್ಯೋತ್ಸವ ಸಂಭ್ರಮದಲ್ಲಿ ದರ್ಶನ್ 'ಕ್ರಾಂತಿ'

  ವಿ. ಹರಿಕೃಷ್ಣ ಸಾರಥ್ಯದಲ್ಲಿ 'ಕ್ರಾಂತಿ' ಸಿನಿಮಾ ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಭರದಿಂದ ಸಾಗ್ತಿದೆ. ಬಹಳ ದಿನಗಳಿಂದ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದಾರೆ. ಶೈಲಜಾ ನಾಗ್ ಹಾಗೂ ಬಿ. ಸುರೇಶ ನಿರ್ಮಾಣದ ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿಯಾಗಿ ಮಿಂಚಿದ್ದಾರೆ. ಅಭಿಮಾನಿಗಳು ಭರ್ಜರಿ ಪ್ರಚಾರ ಮಾಡುತ್ತಿದ್ದು ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬರಲಿದೆ.

  Recommended Video

  Kiran Yogeshwar | ಮುಖವಾಡ ಧರಿಸಿ ಆಟ ಆಡ್ತಾಯಿರೋದು ಕ್ಯಾಪ್ಟನ್ ಅರ್ಜುನ್‌ | Kannada Bigg Boss OTT *Interview | Filmibeat Kannada
  English summary
  Mysore Guy Pavan Say Sorry To Darshan And Fans About His Statement. Know More.
  Wednesday, August 17, 2022, 8:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X