twitter
    For Quick Alerts
    ALLOW NOTIFICATIONS  
    For Daily Alerts

    The Kashmir Files: 'ದಿ ಕಾಶ್ಮೀರ್ ಫೈಲ್ಸ್’ ನೋಡಲು ಎದೆಗಾರಿಕೆ ಬೇಕು: ಸಂಸದ ಪ್ರತಾಪ ಸಿಂಹ ಟಾಂಗ್

    By ಮೈಸೂರು ಪ್ರತಿನಿಧಿ
    |

    ದೇಶದೆಲ್ಲಡೆ 'ದಿ ಕಾಶ್ಮೀರ್ ಫೈಲ್ಸ್' ಬಗ್ಗೆ ಚರ್ಚೆ ನಡೆಯುತ್ತಲೇ ಇದೆ. ಸಿನಿಮಾ ಬಿಡುಗಡೆ ಬಳಿಕವಂತೂ ವಾದ- ವಿವಾದಗಳು ಜೋರಾಗಿ ನಡೆಯುತ್ತಿದೆ. ರಾಜಕೀಯ ಪಕ್ಷಗಳು ಪರಸ್ಪರ ಕಚ್ಚಾಟಕ್ಕೆ ಇಳಿದಿವೆ. ರಾಜಕೀಯ ಮುಖಂಡರು ಒಬ್ಬರ ಮೇಲೊಬ್ಬರು ಆರೋಪ-ಪ್ರತ್ಯಾರೋಪ ಮಾಡುವುದರಲ್ಲಿ ನಿರತರಾಗಿದ್ದಾರೆ. " ದಿ ಕಾಶ್ಮೀರ್ ಫೈಲ್ಸ್" ಸಿನಿಮಾ ಬಗ್ಗೆ ಮೈಸೂರು ಸಂಸದ ಪ್ರತಿಕ್ರಿಯೆ ನೀಡಿದ್ದಾರೆ.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾದ ಸತ್ಯ ಸ್ವೀಕರಿಸೋದಕ್ಕೆ ಎದೆಗಾರಿಕೆ ಬೇಕು. ಇದು ಕಾಂಗ್ರೆಸ್‌ನವರೇ ಮಾಡಿದ ಅಪರಾಧ. ಅದನ್ನು ಅವರೇ ನೋಡಲು ಹೇಗೆ ಸಾಧ್ಯ? ಎಂದು ಸಂಸದ ಪ್ರತಾಪ ಸಿಂಹ ಪ್ರಶ್ನಿಸಿದರು. ಮೈಸೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಜನರು ಚಿತ್ರವನ್ನು ನೋಡುತ್ತಿದ್ದಾರೆ. ಅವರಿಗೆ ಸತ್ಯದ ಅರಿವಾಗಿದೆ. 'ದಿ ಕಾಶ್ಮೀರ್ ಫೈಲ್ಸ್‌'ನಲ್ಲಿರುವ ಒಂದೊಂದು ದೃಶ್ಯವೂ ಸತ್ಯ. ಆದರೆ, ಕಾಂಗ್ರೆಸ್‌ನವರಿಗೆ ಈ ಚಿತ್ರವನ್ನು ನೋಡಲು ಆಗುವುದಿಲ್ಲ. ಅವರೇ ಮಾಡಿದ ಕರ್ಮ ಅವರೇ ಹೇಗೆ ನೋಡಲು ಸಾಧ್ಯ? ಈ ಸಿನಿಮಾವನ್ನು ಕಾಂಗ್ರೆಸ್‌ನವರು ನೋಡುವುದಕ್ಕೆ ಎದೆಗಾರಿಕೆ ಬೇಕು ಎಂದು ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.

    Recommended Video

    James ' ದಿ ಕಾಶ್ಮೀರ್ ಫೈಲ್ಸ್' ರೆಕಾರ್ಡ್ ಬ್ರೇಕ್ ಮಾಡಿದ 'ಜೇಮ್ಸ್' ಸಿನಿಮಾ James Movie New Record

    ಪಠ್ಯಕ್ರಮದಲ್ಲಿ ಭಗವದ್ಗೀತೆ ಅಳವಡಿಸಿದರೆ ಬೆಂಬಲಿಸುತ್ತೇನೆ. ಭಗವದ್ಗೀತೆ ಹಿಂದೂಗಳ ಧರ್ಮ ಗ್ರಂಥವಲ್ಲ. ಅದರಲ್ಲಿ ಜೀವನದ ನೀತಿ ಪಾಠವಿದೆ. ಕ್ರಿಶ್ಚಿಯನ್, ಇಸ್ಲಾಂ ರೀತಿ ಅಲ್ಲ ಅದು. ಒಂದೇ ದೇವರನ್ನು ಮಾತ್ರ ಪೂಜಿಸಿ ಎಂದು ಹೇಳುವುದಿಲ್ಲ. ''ಧರ್ಮ ಅಂದರೆ ಅದು ಸತ್ಯ. ಇದು ಒಂದು ಧರ್ಮಕ್ಕೆ ಸಿಮೀತ ಅಲ್ಲ. ಹಿಂದೂ ಧರ್ಮವೇ ಜೀವನ ಶೈಲಿ. ಇದನ್ನು ಶಾಲೆಯ ಹಂತದಲ್ಲಿ ತಿಳಿಸಬೇಕಾಗಿರುವುದು ಅಗತ್ಯ'' ಎಂದರು.

    ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವುದಕ್ಕೆ ಅಭ್ಯಂತರವಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಅವರು, ''ಅಂತಃಕರಣದಿಂದ ನೈಜವಾಗಿ ಹೇಳಿದ್ದರೆ ಸ್ವಾಗತಿಸುತ್ತೇನೆ. ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಯನ್ನೂ ಪಠ್ಯಕ್ರಮಕ್ಕೆ ಸೇರಿಸುವಂತೆ ಒತ್ತಾಯಿಸಲಿ'' ಎಂದರು.

    Mysore MP Pratap Simha says people should have courage to watch The Kashmir files

    ''ಭಗವದ್ಗೀತೆ ಹೊಟ್ಟೆ ತುಂಬಿಸುವುದಿಲ್ಲ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಮಾತನ್ನು ನಾನು ಸಂಪೂರ್ಣ ಒಪ್ಪುತ್ತೇನೆ. ಭಗವದ್ಗೀತೆ ಹೊಟ್ಟೆಯನ್ನಲ್ಲ, ತಲೆಯನ್ನು ತುಂಬಿಸುತ್ತದೆ. ಸತ್ಯದ ದಾರಿಯಲ್ಲಿ ಸಾಗುವುದನ್ನು ಕಲಿಸುತ್ತದೆ.'' ಎಂದು ಪ್ರತಾಪ್ ಸಿಂಹ ಟಾಂಗ್ ಕೊಟ್ಟಿದ್ದಾರೆ.

    'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಕಿತ್ತಾಟವೇನೆ ಇದ್ದರೂ, ಬಿಡುಗಡೆಯಾದಲ್ಲಿಂದ ಸಿನಿಮಾದ ಗಳಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬಾಕ್ಸಾಫೀಸ್‌ನಲ್ಲಿ ಈಗಾಗಲೇ ನೂರು ಕೋಟಿ ಬಾಚಿರುವ ಸಿನಿಮಾ 150 ಕೋಟಿ ಗಳಿಕೆಯತ್ತ ಮುನ್ನುಗ್ಗುತ್ತಿದೆ. ಆದರೆ, ಈ ಸಿನಿಮಾವನ್ನು ಮೆಚ್ಚಿಕೊಂಡು ಸಿನಿಮಾ ನೋಡುತ್ತಿರುವವರು ಒಂದು ಕಡೆಯಾದರೆ, ಇನ್ನೊಂದೆಡೆ ಸಿನಿಮಾದಲ್ಲಿರುವ ಸತ್ಯಾಂಶದ ಬಗ್ಗೆನೂ ಪ್ರಶ್ನೆ ಮಾಡುವವರ ಸಂಖ್ಯೆನೂ ಹೆಚ್ಚಾಗಿದೆ.

    English summary
    Mysore MP Pratap Simha says people should have courage to watch The Kashmir files. Here is the details.
    Sunday, March 20, 2022, 21:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X