twitter
    For Quick Alerts
    ALLOW NOTIFICATIONS  
    For Daily Alerts

    ಇತಿಹಾಸ ಸೇರಿದ ಮೈಸೂರಿನ ಮತ್ತೊಂದು ಚಿತ್ರಮಂದಿರ ಸರಸ್ವತಿ

    By ಮೈಸೂರು ಪ್ರತಿನಿಧಿ
    |

    ಮಹಾಮಾರಿ ಕೊರೊನಾ ಸಂಕಷ್ಟದ ಹಿನ್ನೆಲೆ ಸಾಂಸ್ಕೃತಿಕ ನಗರಿ ಮೈಸೂರಿನ ಚಿತ್ರಮಂದಿರಗಳ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಕೋವಿಡ್ ಹೊಡೆತದಿಂದಾಗಿ ಮೈಸೂರಿನ ಮತ್ತೊಂದು ಚಿತ್ರಮಂದಿರ ತನ್ನ ಪ್ರದರ್ಶನ ನಿಲ್ಲಿಸುವ ಮೂಲಕ ಇತಿಹಾಸದ ಪುಟ ಸೇರಿದೆ.

    ಮೈಸೂರಿನ ಪ್ರಸಿದ್ಧ ಸರಸ್ವತಿ ಚಿತ್ರಮಂದಿರ ಇದೀಗ ನೆನಪಿನಂಗಳಕ್ಕೆ ಸರಿದಿದ್ದು, ಕೊರೊನ ಸಂಕಷ್ಟದಲ್ಲಿ ಸತತ ಒಂದೂವರೆ ವರ್ಷದಿಂದ ಚಿತ್ರಮಂದಿರ ತೆರೆಯದ ಕಾರಣ ಈ ಹಳೆಯ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚುವಂತಾಗಿದೆ.

    ಬಹು ವಿಶಾಲವಾದ ಮೈಸೂರಿನ ದೊಡ್ಡ ಚಿತ್ರಮಂದಿರ ಎಂದೇ ಪ್ರಸಿದ್ಧ ವಾಗಿದ್ದ ಸರಸ್ವತಿ ಚಿತ್ರಮಂದಿರ, ವರನಟ ಡಾ. ರಾಜ್ ಕುಮಾರ್ ಕುಟುಂಬ ಸದಸ್ಯರೊಂದಿಗೆ ಅತ್ಯಂತ ಆತ್ಮೀಯ ಒಡನಾಟ ಹೊಂದಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಹುತೇಕ ಚಿತ್ರಗಳು ಇದೆ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿತ್ತು.

    Mysores Theater Saraswathi Shutting Down Permanently

    ಆದರೀಗ ಮೈಸೂರಿನ ಸರಸ್ವತಿಪುರಂ ನಲ್ಲಿರುವ ಸರಸ್ವತಿ ಚಿತ್ರಮಂದಿರ ಬಾಗಿಲು ಮುಚ್ಚಿದ್ದು, ಈ ಬಗ್ಗೆ ಮಾಲೀಕರಿಂದ ಸಿಗದ ನಿಖರ ಕಾರಣ ಏನೆಂಬುದು ತಿಳಿದು ಬಂದಿಲ್ಲ. ಮಾಲೀಕರು ಚಿತ್ರಮಂದಿರವನ್ನು ಮುಚ್ಚಿ ಆ ಜಾಗವನ್ನು ಮಾರಾಟಕ್ಕೆ ಇಟ್ಟಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಖಾತ್ರಿ ಇಲ್ಲ.

    ಕೊರೊನಾ ಸಂಕಷ್ಟದಿಂದಾಗಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೈಸೂರಿನ ನಾಲ್ಕು ಪ್ರತಿಷ್ಠಿತ ಚಿತ್ರಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ. ಮೈಸೂರಿನ ಜನರಿಗೆ ಅತ್ಯಂತ ಚಿರಪರಿಚಿತವಾಗಿದ್ದ ಶಾಂತಲಾ, ಲಕ್ಷ್ಮಿ, ಶ್ರೀ ಟಾಕೀಸ್ ಚಿತ್ರಮಂದಿರ ಈಗಾಗಲೇ ಬಂದ್ ಆಗಿತ್ತು. ಇದೀಗ ಇದೇ ಸಾಲಿಗೆ ಸರಸ್ವತಿ ಚಿತ್ರಮಂದಿರವು ಸಹ ಸೇರ್ಪಡೆ ಆಗಿದೆ.

    ಕೆಲವು ತಿಂಗಳ ಮುಂಚೆ ಬಾಗಿಲು ಮುಚ್ಚಿದ್ದ ಮೈಸೂರಿನ ಲಕ್ಷ್ಮಿ ಚಿತ್ರಮಂದಿರವು ಏಳು ದಶಕಗಳ ಕಾಲ ಕನ್ನಡ ಸಿನಿಮಾಗಳನ್ನು ಪ್ರದರ್ಶಿಸಿತ್ತು. ಲಕ್ಷ್ಮೀ ಚಿತ್ರಮಂದಿರದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ಹೊರಬರಲು ಕಷ್ಟವಾದ ಹಿನ್ನೆಲೆ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದ್ದಾರೆ. 1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ. ಮೈಸೂರಿಗರಿಗೆ ಹಲವು ನೆನಪುಗಳನ್ನು ನೀಡಿರುವ ಲಕ್ಷ್ಮೀ ಟಾಕೀಸ್ ನಲ್ಲಿ ಕನ್ನಡ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದೆ.

    English summary
    Mysore's one of the oldest theater Sarswathi shutting permanently. Mysore's Shanthala, Sri Talkies, Lakshmi theaters closed already.
    Tuesday, September 21, 2021, 16:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X