twitter
    For Quick Alerts
    ALLOW NOTIFICATIONS  
    For Daily Alerts

    ನಾಡಹಬ್ಬ 'ದಸರಾ'ದಲ್ಲಿ 'ಗಾನಯಾನ' ಕನ್ನಡ ಚಿತ್ರಗೀತೆಗಳ 'ಭಾವಯಾನ'

    By Suneetha
    |

    ನಮ್ಮ ನಾಡಹಬ್ಬ 'ದಸರಾ'ಗೆ ದಿನಗಣನೆ ಶುರುವಾಗಿದೆ. ಸಾಂಸ್ಕೃತಿಕ ನಗರಿ ಎಂದೇ ಕರೆಸಿಕೊಳ್ಳುವ ಮೈಸೂರು 'ದಸರಾ' ಹಬ್ಬದ ಹಿನ್ನಲೆಯಲ್ಲಿ ಮದುಮಗಳಂತೆ ಸಿಂಗಾರಗೊಂಡಿದೆ. ಈ ಸಂಭ್ರಮದ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡಲು ಗಾನಯಾನ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

    ಕನ್ನಡ ಚಲನಚಿತ್ರರಂಗದ ಸುಮಧುರ ಕನ್ನಡ ಚಲನಚಿತ್ರಗೀತೆಗಳ ಭಾವಯಾನ 'ಗಾನಯಾನ' ಕಾರ್ಯಕ್ರಮ ಅಕ್ಟೋಬರ್ 1 ರಂದು, ಕಲಾ ಮಂದಿರದಲ್ಲಿ ನಡೆಯುವ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಗೂ ಮುನ್ನ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.[ಅಕ್ಟೋಬರ್ 1ರಂದು ಧನುರ್ ಲಗ್ನದಲ್ಲಿ ದಸರಾಗೆ ಚಾಲನೆ]

    Mysuru Dasara: Kannada film Musical fest on October 1st

    ದಸರಾ ಚಲನಚಿತ್ರೋತ್ಸವ ಸಮಿತಿ ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಉದಯೋನ್ಮುಖ ಗಾಯಕ-ಗಾಯಕಿಯರು ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ.

    ಕನ್ನಡ ಚಿತ್ರರಂಗದ ಇತಿಹಾಸವನ್ನು ಚಿತ್ರಗೀತೆಗಳ ಮೂಲಕ ಮೆಲುಕು ಹಾಕುವ ಪ್ರಯತ್ನ ಇದಾಗಿದೆ. ವೃತ್ತಿ ರಂಗಭೂಮಿ ಹಿನ್ನೆಲೆಯ ಕನ್ನಡ ಚಲನಚಿತ್ರ ರಂಗ ಪೌರಾಣಿಕ ಚಿತ್ರಗಳಿಂದ ಆರಂಭಿಸಿ, ಸಾಮಾಜಿಕ ಚಿತ್ರಗಳಿಗೆ ಹೊರಳಿ, ಹೊಸ ಅಲೆಯ ಚಿತ್ರಗಳನ್ನು ನಿರ್ಮಿಸಿ ಇದೀಗ ಹೊಸ-ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮುಂದುವರಿಯುತ್ತಿದೆ. ಈ ಎಲ್ಲಾ ಕಾಲ ಘಟ್ಟಗಳನ್ನು ಗುರುತಿಸುವ ಪ್ರಯತ್ನವನ್ನು ಈ ವಿಶೇಷ ಕಾರ್ಯಕ್ರಮದ ಮೂಲಕ ಮಾಡಲಾಗಿದೆ.[ದಸರಾಗೆ ಕೈ ಬೀಸಿ ಕರೆಯುತ್ತಿದೆ ಸಿಂಗಾರಗೊಂಡ ಅರಮನೆ ನಗರಿ]

    Mysuru Dasara: Kannada film Musical fest on October 1st

    ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ಅಮೂಲ್ಯ ಕೊಡುಗೆ ನೀಡಿರುವ ಚಲನಚಿತ್ರ ಕಲಾವಿದರು, ತಂತ್ರಜ್ಞರು, ಗೀತರಚನಕಾರರು, ಗಾಯಕರು, ನಿರ್ದೇಶಕರು ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಮುಖರು ನೀಡಿರುವ ಕೊಡುಗೆಯನ್ನು ಸ್ಮರಿಸುವ ವಿಭಿನ್ನ ಯತ್ನವನ್ನು ಮಾಡಲಾಗಿದೆ.

    ಆಯ್ದ ಚಿತ್ರಗೀತೆಗಳನ್ನು ಪ್ರಸ್ತುತಪಡಿಸುತ್ತಲೇ, ಚಿತ್ರರಂಗದ ಇತಿಹಾಸವನ್ನು ಹಾಗೂ ವಿವಿಧ ಕಾಲಘಟ್ಟಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ ಉಂಟಾದ ಬದಲಾವಣೆಗಳನ್ನು ಬಿಂಬಿಸಲಾಗುವುದು. ಹಾಡಿನ ಜತೆಗೆ ಆಯಾ ಕಾಲಘಟ್ಟದ ಪ್ರಮುಖ ಚಿತ್ರಗಳ ತುಣಕುಗಳನ್ನು ಪ್ರದರ್ಶಿಸಲಾಗುವುದು.[ಮೈಸೂರು ದಸರಾ: ಅ.1ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣ]

    Mysuru Dasara: Kannada film Musical fest on October 1st

    ಮೈಸೂರಿನ ಹೆಸರಾಂತ ಸಂಗೀತ ಸಂಯೋಜಕರಾದ, ರಘುಲೀಲಾ ಸಂಗೀತ ಶಾಲೆಯ ಸುನೀತಾ ಚಂದ್ರಕುಮಾರ್ ಅವರು ಕಾರ್ಯಕ್ರಮದ ಸಮನ್ವಯ ನಿರ್ವಹಿಸುತ್ತಿದ್ದು, ಸಿ ವಿಶ್ವನಾಥ್( ಮ್ಯಾಂಡೋಲೀನ್), ಷಣ್ಮುಗ (ಕೀ ಬೋರ್ಡ್), ವಿನ್ಸೆಂಟ್ (ರಿದಂ ಸ್ಯಾಟ್), ಕಿರಣ್ (ತಬಲ) ಮುಂತಾದವರು ವಾದ್ಯ ಸಹಕಾರ ನೀಡಲಿದ್ದಾರೆ. ಶ್ರೇಯ ಕೆ ಭಟ್ಟ, ವಸುಧಾ ಶಾಸ್ತ್ರಿ, ನವನೀತ್ ಕೃಷ್ಣ, ಕಾರ್ತೀಕ ಹಾಗೂ ರಕ್ಷಿತಾ ಸುರೇಶ್ ಚಲನಚಿತ್ರ ಗೀತೆಗಳಿಗೆ ದನಿಯಾಗಲಿದ್ದಾರೆ.[ಮೈಸೂರು ದಸರಾ ಪೂಜಾ ವಿಧಿವಿಧಾನಗಳ ಸಂಪೂರ್ಣ ವಿವರಣೆ ಇಲ್ಲಿದೆ!]

    Mysuru Dasara: Kannada film Musical fest on October 1st

    ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಿರಿಯ ಚಲನಚಿತ್ರ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ಎಸ್.ಕೆ. ಭಗವಾನ್, ಹಿರಿಯ ಚಲನಚಿತ್ರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ನಟಿ ಸುಧಾರಾಣಿ, ನಿರ್ದೇಶಕ ಪವನ್ ಕುಮಾರ್, ನಟ ವಿಜಯ್ ಸೂರ್ಯ, ನಟಿ ಮಯೂರಿ ಮತ್ತು ನಟಿ ಕಾವ್ಯ ಶೆಟ್ಟಿ ಹಾಗೂ ಚಿತ್ರೋದ್ಯಮದ ಪ್ರಮುಖ ಗಣ್ಯರು ಭಾಗವಹಿಸಿ ದಸರಾ ಚಲನಚಿತ್ರೋತ್ಸವದ 'ಭಾವಯಾನ' ಕಾರ್ಯಕ್ರಮಕ್ಕೆ ವಿಶೇಷ ರಂಗು ನೀಡಲಿದ್ದಾರೆ.

    English summary
    Mysuru Dasara Special Programme: Kannada film Musical fest on October 1st.
    Friday, September 30, 2016, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X