For Quick Alerts
  ALLOW NOTIFICATIONS  
  For Daily Alerts

  ಏಪ್ರಿಲ್ 23 ರಿಂದ ಮೈಸೂರು ಜಿಲ್ಲೆ ವ್ಯಾಪ್ತಿಯ ಚಿತ್ರಮಂದಿರಗಳು ಬಂದ್

  |

  ಕೊರೊನಾ‌ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆಯಲ್ಲಿ ಇಳಿಕೆಮುಖವಾಗಿದೆ. ಹೀಗಾಗಿ ಆರ್ಥಿಕ ನಷ್ಟ-ಹೊರೆಯಾಗುವ ಕಾರಣದಿಂದ ಮೈಸೂರಿನ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ ಮೈಸೂರು ಭಾಗದ ಚಿತ್ರಮಂದಿರ ಮಾಲೀಕರು.

  ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಸಂಖ್ಯೆಯಲ್ಲಿ ಏರಿಕೆಯಾಗಿರುವ ಪರಿಣಾಮ ಚಿತ್ರಮಂದಿರಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, ಏಪ್ರಿಲ್ 23ರಿಂದ ಅನಿರ್ಧಿಷ್ಟವಧಿ ಬಂದ್ ಮಾಡಲು ಚಿತ್ರಮಂದಿರ ಮಾಲೀಕರ ನಿರ್ಧಾರ ಕೈಗೊಂಡಿದ್ದಾರೆ.

  ಈ ಬಗ್ಗೆ ಮಾಹಿತಿ ನೀಡಿರುವ ರಾಜ್ಯ ಚಿತ್ರಮಂದಿರ ಒಕ್ಕೂಟದ ಕಾರ್ಯದರ್ಶಿ ರಾಜಾರಾಮ್, ಒಂದೆಡೆ ಕೊರೊನ ಎರಡನೇ ಅಲೆ ಹಿನ್ನೆಲೆ ಚಿತ್ರಮಂದಿರಕ್ಕೆ ಜನರು ಆಗಮಿಸುತ್ತಿಲ್ಲ. ಇದರ ಪರಿಣಾಮ ನಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ ಎಂದಿದ್ದಾರೆ.

  ''ಕೊರೊನಾದಿಂದ ಭಯದ ವಾತಾವರಣದ ಸೃಷ್ಟಿಯಾಗಿದ್ದು ಜನರು ಥಿಯೇಟರ್‌ಗೆ ಬರುತ್ತಿಲ್ಲ. ಇದೆ ವೇಳೆ ಮೈಸೂರು ಮಹಾನಗರ ಪಾಲಿಕೆಯು ಅವೈಜ್ಞಾನಿಕ ತೆರಿಗೆ ಹೆಚ್ಚಳವಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ'' ಎಂದಿದ್ದಾರೆ.

  ಮೈಸೂರು ಜಿಲ್ಲೆಯ ಬಹುತೇಕ ಚಿತ್ರಮಂದಿರಗಳು 23ರಿಂದ ಚಿತ್ರಪ್ರದರ್ಶನ ನಿಲ್ಲಿಸಲಿವೆ. ಕೆ.ಆರ್ ನಗರ ನಂಜನಗೂಡು, ಮೈಸೂರು ಸೇರಿದಂತೆ ಹಲವು ಕಡೆಗಳಲ್ಲಿ ಬಂದ್ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

  gym ನಲ್ಲಿ ಒಟ್ಟಿಗೆ ವರ್ಕೌಟ್ ಮಾಡಿದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ | Filmibeat Kannada

  ಈಗಾಗಲೇ ರಾಜ್ಯದಾದ್ಯಂತ ಚಿತ್ರಮಂದಿರಗಳ ಮೇಲೆ ರಾಜ್ಯ ಸರ್ಕಾರ ನಿರ್ಬಂಧ ಹೇರಿದೆ. ಚಿತ್ರಮಂದಿರಗಳ ಒಟ್ಟು ಸೀಟು ಸಾಮರ್ಥ್ಯದ ಅರ್ಧದಷ್ಟು ಪ್ರೇಕ್ಷಕರಿಗಷ್ಟೆ ಸಿನಿಮಾ ನೋಡಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. ಕೊರೊನಾ ಪ್ರಕರಣಗಳು ಹಠಾತ್ತನೆ ಏರಿಕೆಯಾದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿದೆ.

  English summary
  Due to rising of COVID cases Theater owners of Mysuru district decided to close theaters from April 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X