twitter
    For Quick Alerts
    ALLOW NOTIFICATIONS  
    For Daily Alerts

    ಅರ್ಜುನ್ ಜನ್ಯ ಆರೋಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ ವೈದ್ಯರ ತಂಡ

    |

    ತೀವ್ರ ಹೊಟ್ಟೆ ನೋವು, ಎದೆ ನೋವು, ಬೆನ್ನು ನೋವು ಕಾಣಿಸಿಕೊಂಡ ಹಿನ್ನಲೆ ಕಳೆದ ಭಾನುವಾರ ಆಸ್ಪತ್ರೆಗೆ ದಾಖಲಾದ ಅರ್ಜುನ್ ಜನ್ಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅರ್ಜುನ್ ಜನ್ಯ ಆರೋಗ್ಯ ಸ್ಥಿರವಾಗಿದೆ ಎಂದು ಮೈಸೂರಿನ ಆಸ್ಪತ್ರೆಯ ವೈದ್ಯರ ತಂಡ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

    Recommended Video

    ತಲೆ ನೋವು, ಬೆನ್ನು ನೋವು ಅಂತ ಆಸ್ಪತ್ರೆಗೆ ದಾಖಲಾದ ಅರ್ಜುನ್ ಜನ್ಯಾಗೆ ಕಾದಿತ್ತು ಅಚ್ಚರಿ | Arjun Janya

    ಗ್ಯಾಸ್ಟ್ರಿಕ್ ಮತ್ತು ಕಾರ್ಡಿಯಾಕ್ ಸಮಸ್ಯೆಯಿಂದ ಬಳಲುತ್ತಿರುವ ಅರ್ಜುನ್ ಜನ್ಯಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಾಕ್ಟರ್ ಆದಿತ್ಯ ಉಡುಪ ನೇತೃತ್ವದ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲುಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲು

    ''ಹೊಟ್ಟೆ ನೋವು, ಭೇದಿ, ತಲೆ ನೋವು, ಬೆನ್ನು ನೋವು, ಎದೆ ನೋವು ಕಾಣಿಸಿಕೊಂಡಿದ್ದರಿಂದ ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಗ್ಯಾಸ್ಟ್ರಿಕ್ ಸಮಸ್ಯೆ ಇರಬಹುದು ಅಂತ ಚಿಕಿತ್ಸೆ ಕೊಟ್ಮೇಲೆ ಚೇತರಿಸಿಕೊಂಡರು. ಬಳಿಕ ಇಸಿಜಿಯಲ್ಲಿ ಬದಲಾವಣೆ ಕಂಡು ಬಂತು. ಹೀಗಾಗಿ ಹಾರ್ಟ್ ಪ್ರಾಬ್ಲಂಗೆ ಸಂಬಂಧಪಟ್ಟ ಚಿಕಿತ್ಸೆ ನೀಡಿದ್ದೇವೆ. ಸರಿಯಾದ ಸಮಯಕ್ಕೆ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಮಾಡಿದ್ದೇವೆ. ಅರ್ಜುನ್ ಜನ್ಯ ಆರೋಗ್ಯ ಇದೀಗ ಸ್ಥಿರವಾಗಿದೆ. ಗಾಬರಿ ಪಡುವಂಥದ್ದು ಏನೂ ಇಲ್ಲ'' ಅಂತ ವೈದ್ಯರು ತಿಳಿಸಿದ್ದಾರೆ.

    Mysuru Hospital Doctors briefs about Arjun Janyas Health

    ''ಅರ್ಜುನ್ ಜನ್ಯ ಅವರಿಗೆ ಬೆನ್ನು ನೋವು, ಎದೆ ನೋವು ಮತ್ತು ತಲೆ ನೋವು ತುಂಬಾ ಜಾಸ್ತಿ ಇತ್ತು. ಹೀಗಾಗಿ ಇಸಿಜಿ ಮಾಡಿದ್ವಿ. ಇಸಿಜಿಯಲ್ಲಿ ಚೇಂಜಸ್ ಕಾಣಿಸಿತು. ಮಧ್ಯರಾತ್ರಿ ಆಂಜಿಯೋಗ್ರಾಮ್ ಮಾಡಿದ್ವಿ. ಈಗ ಅವರ ಆರೋಗ್ಯ ಸುಧಾರಿಸಿದೆ. ಎದೆ ನೋವು, ಬೆನ್ನು ನೋವು, ತಲೆ ನೋವು ವಾಸಿ ಆಗಿದೆ'' ಎಂದು ವೈದ್ಯ ಆದಿತ್ಯ ಉಡುಪ ಹೇಳಿದ್ದಾರೆ.

    English summary
    Mysuru Hospital Doctors Briefs About Arjun Janya's Health.
    Thursday, February 27, 2020, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X