twitter
    For Quick Alerts
    ALLOW NOTIFICATIONS  
    For Daily Alerts

    ಈ ವಾರ ರಿಲೀಸ್ ಆಗುತ್ತಿರುವ 'ಮೈಸೂರು' ಚಿತ್ರಕ್ಕಿದೆ ಒಡಿಶಾ ಲಿಂಕ್

    |

    ಇತ್ತೀಚೆಗೆ ಹೊಸಬರ ಸಿನಿಮಾಗಳು ಮತ್ತೆ ಥಿಯೇಟರ್‌ಗೆ ಲಗ್ಗೆ ಇಡುವುದಕ್ಕೆ ಶುರುಮಾಡಿದೆ. ಲಾಕ್‌ಡೌನ್‌ನಿಂದ ಚಿತ್ರಮಂದಿರಗಳಿಂದ ದೂರ ಸರಿದಿದ್ದ ಹೊಸ ಪ್ರತಿಭೆಗಳು ಮತ್ತೆ ಥಿಯೇಟರ್‌ ಕಡೆ ಮುಖ ಮಾಡುತ್ತಿವೆ. ಈ ಸಾಲಿನಲ್ಲಿ 'ಮೈಸೂರು' ಸಿನಿಮಾ ಕೂಡ ಸೇರಿಕೊಂಡಿದೆ. ಈ ಸಿನಿಮಾ ಎರಡು ಪ್ರಮುಖ ಪಾತ್ರಗಳು ಕೂಡ ಹೊಸ ಪ್ರತಿಭೆಗಳೇ. ಅಲ್ಲದೆ ಈ ಸಿನಿಮಾಗೆ ಒಡಿಶಾ ಲಿಂಕ್ ಕೂಡ ಇದೆ. ಈ ಕಾರಣಕ್ಕೆ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುವ ಎಲ್ಲಾ ಸಾಧ್ಯತೆಗಳೂ ಕೂಡ ಇದೆ.

    ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ವಾಸುದೇವ ರೆಡ್ಡಿ ಈ 'ಮೈಸೂರು' ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಹಲವು ತಿರುವುಗಳನ್ನು ಹೊಂದಿರುವ ಕಥೆ 'ಮೈಸೂರು' ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಇದೇ ಈ ಸಿನಿಮಾದ ಟ್ರೈಲರ್ ರಿಲೀಸ್ ಆಗಿ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು.

     ಯಶ್ ಸಿನಿಮಾ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲಂಸ್ ಯಶ್ ಸಿನಿಮಾ 'ಕೆಜಿಎಫ್ 2' ಟ್ರೈಲರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ ಹೊಂಬಾಳೆ ಫಿಲಂಸ್

    'ಮೈಸೂರು' ಸಿನಿಮಾದ ಕಥೆಯೇನು?

    ವಾಸುದೇವ ರೆಡ್ಡಿ 'ಮೈಸೂರು' ಸಿನಿಮಾದ ನಿರ್ದೇಶಕ. ಈ ವಿಶೇಷವಾದ ಟೈಟಲ್ ಸಿಕ್ಕಿರುವುದೇ ಅದೃಷ್ಟ. ಈ ಕಾರಣಕ್ಕೆ ಸಿನಿಪ್ರಿಯರಿಗೆ ಕಥೆಯ ಮೇಲೆ ಕುತೂಹಲ ಇದ್ದೇ ಇರುತ್ತೆ. ಇದೊಂದು ಕನ್ನಡತಿಯ ಕಥೆ. ಈ ಚಿತ್ರದ ನಾಯಕಿ ಮೈಸೂರು ಮೂಲದವರು. ಬೇರೆ ರಾಜ್ಯದಿಂದ ಮೈಸೂರಿಗೆ ನಾಯಕ ಬರುತ್ತಾನೆ. ಇಬ್ಬರ ಪರಿಚಯವಾಗಿ ಇಬ್ಬರೂ ಪ್ರೀತಿಯಲ್ಲಿ ಬೀಳುತ್ತಾರೆ. ನಾಯಕನಿಗೆ ಹೇಗೋ ನಕ್ಸಲ್ ಲಿಂಕ್ ಎಂದು ಕೋರ್ಟ್ ಮರಣದಂಡನೆಯನ್ನು ವಿಧಿಸುತ್ತದೆ. ಈ ವೇಳೆ ನಿಮ್ಮ ಕೊನೆಯ ಆಸೆ ಏನು ಎಂದು ಕೇಳುತ್ತಾರೆ. ಹೀರೋ ದೇವರನ್ನು ಆಸ್ಪತ್ರೆಗೆ ದಾನ ಮಾಡುವಂತೆ ಕೇಳಿಕೊಳ್ಳುತ್ತಾನೆ. ಇಷ್ಟು ಒಳ್ಳೆಯ ಮನಸ್ಸಿರುವ ವ್ಯಕ್ತಿ, ಕೆಟ್ಟವನಾಗಲು ಹೇಗೆ ಸಾಧ್ಯ ಎಂದು ಈತನ ಕೇಸ್ ರೀ-ಓಪನ್ ಆಗುತ್ತೆ. ಇಲ್ಲಿ ಕಥೆಯಲ್ಲಿ ತಿರುವುಗಳು ಸಿಗುತ್ತಾ ಹೋಗುತ್ತೆ.

    Mysuru Kannada Movie Releasing on March 4th

    ಸಿನಿಮಾದ ಕಥೆಯಲ್ಲಿ ಲವ್ ಸ್ಟೋರಿ ಇದೆ. ಜೊತೆ ಸಾಮಾಜಿಕ ಸಂದೇಶ ಕೂಡ ಇದೆ. ಸಂವಿತ್ ಹಾಗೂ ಪೂಜಾ ಇಬ್ಬರೂ ಕನ್ನಡ ಚಿತ್ರರಂಗಕ್ಕೆ ಹೊಸಬರು. ಈ ಮುದ್ದಾದ ಜೋಡಿಯನ್ನಿಟ್ಟುಕೊಂಡು ವಾಸುದೇವ ರೆಡ್ಡಿ ವಿಶಿಷ್ಟವಾದ ಕಥೆಯನ್ನು ಸಿನಿಪ್ರಿಯರಿಗೆ ತೋರಿಸಲು ಹೊರಟಿದ್ದಾರೆ.

    ಹೊಸ ದಾಖಲೆ ಬರೆದ ಸುದೀಪ್: ಹೊಸ ಎತ್ತರಗಳತ್ತ 'ವಿಕ್ರಾಂತ್ ರೋಣ'ಹೊಸ ದಾಖಲೆ ಬರೆದ ಸುದೀಪ್: ಹೊಸ ಎತ್ತರಗಳತ್ತ 'ವಿಕ್ರಾಂತ್ ರೋಣ'

    'ಮೈಸೂರು' ಚಿತ್ರಕ್ಕಿದೆ ಒಡಿಶಾ ಲಿಂಕ್

    ಅಂದಾಹಾಗೇ ಒಡಿಶಾ ಸಿನಿಮಾದ ಹೀರೋ ಸಂವಿತ್ ಒಡಿಶಾ ಮೂಲದವರು. ಈ ಸಿನಿಮಾ ಕಥೆಯಲ್ಲಿ ಒಡಿಶಾ ಲಿಂಕ್ ಇರುವುದರಿಂದ 'ಮೈಸೂರು' ಚಿತ್ರವನ್ನು ಕನ್ನಡ, ಒಡಿಶಾ, ಬೆಂಗಾಲಿ ಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಸದ್ಯ ಕನ್ನಡದಲ್ಲಿ ಇದೇ ವಾರ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಜ್ಯೂ. ನರಸಿಂಹರಾಜು, ಸತ್ಯಜಿತ್, ಕುರಿ ಪ್ರತಾಪ್, ಭಾಸ್ಕರ್ ಶೆಟ್ಟಿ, ಅಶೋಕ್ ಹೆಗ್ಡೆ, ಜೈಶ್ರೀ, ರವಿಕುಮಾರ್ ಮುಂತಾದವರು 'ಮೈಸೂರು' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

    Mysuru Kannada Movie Releasing on March 4th

    'ಮೈಸೂರು' ಸಿನಿಮಾವನ್ನು ಸುಮಾರು 40 ದಿನಗಳ ಕಾಲ ಶೂಟ್ ಮಾಡಲಾಗಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರು, ಉಡುಪಿ, ಭುವನೇಶ್ವರ್, ಪುರಿ ಸೇರಿದಂತೆ ಹಲವೆಡೆ ಸಿನಿಮಾವನ್ನು ಶೂಟ್ ಮಾಡಲಾಗಿದೆ. ರಘು ಶಾಸ್ತ್ರಿ, ರವಿಶಂಕರ್ ನಾಗ್, ಅನಿತಕೃಷ್ಣ ಬರೆದಿರುವ ಹಾಡುಗಳಿಗೆ ರಮಣಿ ಸುಂದರೇಶನ್, ಅನಿತಕೃಷ್ಣ, ವಿಜಯ್ ರಾಜ್ ಸಂಗೀತ ನೀಡಿದ್ದಾರೆ. ಕೃಷ್ಣ ಮಳವಳ್ಳಿ ಸಂಭಾಷಣೆ ಬರೆದಿದ್ದಾರೆ. ಭಾಸ್ಕರ್ ವಿ ರೆಡ್ಡಿ ಛಾಯಾಗ್ರಹಣ, ಸಿದ್ದು ಭಗತ್ ಸಂಕಲನ ಹಾಗೂ ಸ್ಟಾರ್ ನಾಗಿ, ಮೈಸೂರು ರಾಜು, ಸುಧಾಕರ್ ವಸಂತ್ ಅವರ ನೃತ್ಯ ನಿರ್ದೇಶನವಿದೆ.

    English summary
    Mysuru kannada movie releasing on march 4th. Mysuru movie is newcomer movie. Odisha based actor Samvith is the hero of the movie.
    Thursday, March 3, 2022, 14:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X