twitter
    For Quick Alerts
    ALLOW NOTIFICATIONS  
    For Daily Alerts

    ಪ್ರದರ್ಶನ ನಿಲ್ಲಿಸಿದ ಮೈಸೂರಿನ ಐತಿಹಾಸಿಕ ಚಿತ್ರಮಂದಿರ 'ಲಕ್ಷ್ಮಿ'

    By ಮೈಸೂರು ಪ್ರತಿನಿಧಿ
    |

    ಕೊರೊನಾ ವೈರಸ್ ಹೊಡೆತಕ್ಕೆ ಈಗಾಗಲೇ ಹಲವು ಚಿತ್ರಮಂದಿರಗಳು ಸಂಪೂರ್ಣವಾಗಿ ಪರದೆ ಮುಚ್ಚಿದ್ದು, ಈ ಸಾಲಿಗೆ ಇದೀಗ ಮೈಸೂರಿಗರ ಮನೆಮಾತಾಗಿದ್ದ ಮತ್ತೊಂದು ಚಿತ್ರಮಂದಿರ ಸೇರ್ಪಡೆಗೊಂಡಿದೆ.

    ಕಳೆದೊಂದು ವರ್ಷದಿಂದ ಬೆಂಬಿಡದೆ ಕಾಡುತ್ತಿರುವ ಕೊರೊನಾ‌ ಸಂಕಷ್ಟಕ್ಕೆ ಚಿತ್ರೋದ್ಯಮ ನಲುಗಿ ಹೋಗಿದೆ. ಇನ್ನೂ ಚಿತ್ರೋದ್ಯಮವನ್ನೇ ನಂಬಿ ಸಾಗುತ್ತಿದ್ದ ಚಿತ್ರಮಂದಿಗಳು ಸಹ ಬಾಗಿಲು ಮುಚ್ಚಿವೆ. ಕೊರೊನಾ‌ ತಂದೊಡ್ಡಿದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಲವು ಸಿನಿಮಾ ಮಂದಿರಗಳು ಶಾಶ್ವತವಾಗಿ ಬಾಗಿಲು ಮುಚ್ಚುತ್ತಿವೆ.

    ಶಾಶ್ವತವಾಗಿ ಬಾಗಿಲು ಹಾಕಿದ ಮೈಸೂರಿನ ಹಳೆಯ ಚಿತ್ರಮಂದಿರಶಾಶ್ವತವಾಗಿ ಬಾಗಿಲು ಹಾಕಿದ ಮೈಸೂರಿನ ಹಳೆಯ ಚಿತ್ರಮಂದಿರ

    ಈ ಸಾಲಿಗೆ ಮೈಸೂರಿಗರಿಗೆ ಚಿರಪರಿಚಿತವಾಗಿದ್ದ "ಲಕ್ಷ್ಮಿ" ಟಾಕೀಸ್ ಸೇರಿದ್ದು, ಲಕ್ಷ್ಮಿ ಚಿತ್ರಮಂದಿರ ಇದೀಗ ಇತಿಹಾಸದ ಪುಟ ಸೇರಿದೆ. ಇದರೊಂದಿಗೆ ಸುಮಾರು 71 ವರ್ಷಗಳ ಇತಿಹಾಸವುಳ್ಳ ಮೈಸೂರಿನ ಲಕ್ಷ್ಮಿ ಟಾಕೀಸ್ ತನ್ನ ಆಟ ನಿಲ್ಲಿಸಿದೆ.

    Mysuru Lakshmi Theatre Decided to End its show

    ಏಳು ದಶಕಗಳ ಕಾಲ ಸಿನಿ ಪ್ರಿಯರನ್ನು ರಂಜಿಸಿದ್ದ ಲಕ್ಷ್ಮೀ ಚಿತ್ರಮಂದಿರದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದರು. ಇದರಿಂದ ಹೊರಬರಲು ಕಷ್ಟವಾದ ಹಿನ್ನೆಲೆ ಚಿತ್ರಮಂದಿರವನ್ನು ಶಾಶ್ವತವಾಗಿ ಮುಚ್ಚಲು ನಿರ್ಧರಿಸಿದ್ದಾರೆ.

    1949 ರಿಂದ ಇಲ್ಲಿಯವರಿಗೆ ಸಿನಿ ಪ್ರಿಯರ ರಂಜಿಸುತ್ತಿದ್ದ ಚಿತ್ರಮಂದಿರ ಇನ್ನು ಮುಂದೆ ನೆನಪಿನಲ್ಲಿ ಮಾತ್ರ ಉಳಿಯಲಿದೆ. ಮೈಸೂರಿಗರಿಗೆ ಹಲವು ನೆನಪುಗಳನ್ನು ನೀಡಿರುವ ಲಕ್ಷ್ಮೀ ಟಾಕೀಸ್ ನಲ್ಲಿ ಕನ್ನಡ ಸೇರಿದಂತೆ 600ಕ್ಕೂ ಹೆಚ್ಚು ಚಿತ್ರಗಳ ಪ್ರದರ್ಶನ ಕಂಡಿದೆ.

    Recommended Video

    ಸಂಚಾರಿ Vijay ICUನಲ್ಲಿ ಗಂಭೀರ ಸ್ತಿಥಿಯಲ್ಲಿದ್ದಾರೆ | Filmibeat Kannada

    ಇತ್ತೀಚಿಗಷ್ಟೆ ಮೈಸೂರಿನ ಮಂಡಿ ಮೊಹಲ್ಲದಲ್ಲಿದ್ದ 'ಶ್ರೀ ಟಾಕೀಸ್' ಶಾಶ್ವತವಾಗಿ ಬಾಗಿಲು ಹಾಕಿತ್ತು. ಐದು ದಶಕಕ್ಕೂ ಹಳೆಯದಾದ ಈ ಚಿತ್ರಮಂದಿರ ಕೊರೊನಾ ಸಮಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತಾದ್ದರಿಂದ ಟಾಕೀಸ್‌ ಬಂದ್ ಮಾಡುವ ನಿರ್ಣಯವನ್ನು ಚಿತ್ರಮಂದಿರ ಮಾಲೀಕರು ಮಾಡಿದ್ದಾರೆ ಎನ್ನಲಾಗುತ್ತಿದೆ.

    English summary
    Lakshmi theatre in Mysuru which has entertained the people of Mysuru since the past 72-years has decided to end its show citing COVID19.
    Monday, June 14, 2021, 8:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X