ರಮ್ಯಾ ನೆಚ್ಚಿನ ನಟಿ ಎಂದ ಸಂಸದ ಪ್ರತಾಪ್ ಸಿಂಹ: ಕಾಲೆಳೆದವರಿಗೆ ಮೈಸೂರು ಸಂಸದರ ಉತ್ತರ ಏನು?

ಮೋಹಕ ತಾರೆ ರಮ್ಯಾಗೆ ದೊಡ್ಡ ಅಭಿಮಾನಿ ಬಳಗ ಇದೆ. ಕೆಲ ವರ್ಷಗಳಿಂದ ರಮ್ಯಾ ಸಿನಿಮಾಗಳಲ್ಲಿ ನಟಿಸ್ತಿಲ್ಲ. ಆದರೆ ಆಕೆಯ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. 'ಉತ್ತರಕಾಂಡ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್‌ವುಡ್ ಕ್ವೀನ್ ಕಂಬ್ಯಾಕ್ ಮಾಡ್ತಿದ್ದಾರೆ. ಇತ್ತೀಚೆಗೆ ಸಂಸದ ಪ್ರತಾಪ್ ಸಿಂಹ ನಟಿ ರಮ್ಯಾ ಜೊತೆ ಫೋಟೊ ಕ್ಲಿಕ್ಕಿಸಿಕೊಂಡು ಶೇರ್ ಮಾಡಿದ್ದಾರೆ. ಅದಕ್ಕೆ ತರಹೇವಾರಿ ಕಾಮೆಂಟ್‌ಗಳು ಬರ್ತಿವೆ.

Mysuru MP Pratap Simha Says He is A Big Fan Of Kannada Actress Ramya

"ನಾನು ತುಂಬಾ ಇಷ್ಟಪಡುವ ಕನ್ನಡದ ನಟಿ ಮೋಹಕತಾರೆ ರಮ್ಯಾ ಮೇಡಂ ಜೊತೆ" ಎಂದು ಬರೆದ ಪ್ರತಾಪ್ ಸಿಂಹ ಫೋಟೊ ಹಂಚಿಕೊಂಡಿದ್ದಾರೆ. ಅದಕ್ಕೆ ನೆಟ್ಟಿಗರೊಬ್ಬರು "ಸಾಕಷ್ಟು ಸಂದರ್ಭಗಳಲ್ಲಿ ನೀವು ರಮ್ಯಾ ಅವರನ್ನು ಟೀಕಿಸಿದ್ದಿರಿ. ಈಗ ನೋಡಿದರೆ ನೀವು ಎಲ್ಲರಂತೆ ಎಂದು ಕಾಣಿಸುತ್ತಿದೆ" ಎಂದು ಕಾಮೆಂಟ್ ಮಾಡಿದ್ದಾರೆ. ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿರುವ ಸಂಸದರಾದ ಪ್ರತಾಪ್ ಸಿಂಹ, "ನಾನು ಈಗಲೂ ರಾಜಕೀಯವಾಗಿ ಟೀಕಿಸುತ್ತೇನೆ. ಆದರೆ ಆಕೆಯ ಅಭಿನಯ ನನಗೆ ಇಷ್ಟ" ಎಂದು ರಿಪ್ಲೆ ಮಾಡಿದ್ದಾರೆ.

Mysuru MP Pratap Simha Says He is A Big Fan Of Kannada Actress Ramya

ಕೆಲವರು ರಮ್ಯಾ ಅವರನ್ನು ಬಿಜೆಪಿ ಸೇರಿಸಿಕೊಳ್ಳಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ರಮ್ಯಾ ಬಿಜೆಪಿಗೆ ಸೇರ್ತಾರಾ? ಎಂದು ಕೇಳುತ್ತಿದ್ದಾರೆ. ಇನ್ನು ಸಿನಿಮಾಗಳ ವಿಚಾರಕ್ಕೆ ಬಂದರೆ ನಟಿ ರಮ್ಯಾ 'ನಾಗರಹಾವು' ನಂತರ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ನಿರ್ಮಿಸಿ ನಟಿಸೋದಾಗಿ ಘೋಷಿಸಿದ್ದರು. ಆದರೆ ನಂತರ ನಟನೆಗೆ ಹಿಂದೇಟು ಹಾಕಿದರು. ಆದರೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯ ಕೆಆರ್‌ಜಿ ಸ್ಟುಡಿಯೋಸ್‌ನ 'ಉತ್ತರಕಾಂಡ' ಚಿತ್ರದಲ್ಲಿ ಧನಂಜಯ ಜೋಡಿಯಾಗಿ ರಮ್ಯಾ ನಟಿಸ್ತಿದ್ದಾರೆ.

More from Filmibeat

English summary
Mysuru MP Pratap Simha Says He is A Big Fan Of Kannada Actress Ramya. Pratap Simha shares his fanboy moment with Ramya, see pic. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X