ಸಾಮಾಜಿಕ ಜಾಲತಾಣ ಬಳಸಿ ವೇಶ್ಯಾವಾಟಿಕೆ: ಟಿಕ್‌-ಟಾಕ್ ಸ್ಟಾರ್ ಬಂಧನ

By ಮೈಸೂರು ಪ್ರತಿನಿಧಿ

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌-ಟಾಕ್ ಬಳಸಿಕೊಂಡು ಹೈಕೆಟ್ ಮಾದರಿಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವೊಂದನ್ನು ಮೈಸೂರು ಮೇಟಗಳ್ಳಿ ಪೊಲೀಸರು ಬೇಧಿಸಿದ್ದಾರೆ.

ಮಹಿಳೆ ಸುಮಾ ಎಂಬಾಕೆ ವೇಶ್ಯಾವಾಟಿಕೆ ಜಾಲವನ್ನು ನಡೆಸುತ್ತಿದ್ದು ಯುವಕರನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂ ಹಾಗೂ ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೂಲಕ ಸೆಳೆಯುತ್ತಿದ್ದಳಂತೆ.

ಸುಮಾ ಸಹ ಸ್ವತಃ ಟಿಕ್‌-ಟಾಕ್‌ ನಲ್ಲಿ ಆಕ್ಟಿವ್ ಆಗಿದ್ದು ಹಲವಾರು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಟಿಕ್‌-ಟಾಕ್ ಬ್ಯಾನ್ ಆದ ಬಳಿಕ ಎಪಿಕೆ ಮೂಲಕ ಟಿಕ್‌-ಟಾಕ್ ಅನ್ನು ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

Mysuru: Police Arrest Tik-Tok Star In Brothel House Case

ಸುಮಾ ಅನ್ನು 6 ತಿಂಗಳ ಹಿಂದೆ ವೇಶ್ಯಾವಾಟಿಕೆ ಅಡ್ಡೆಯೊಂದರಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ ಆಗ ಪೊಲೀಸರಿಗೆ ವಂಚಿಸಿದ್ದ ಸುಮಾ, 'ನಾನು ಸಂತ್ರಸ್ತೆ, ನನ್ನನ್ನು ಸುಳ್ಳು ಹೇಳಿ ಇಲ್ಲಿಗೆ ತಂದು ಬಿಡಲಾಗಿದೆ' ಎಂದು ಹೇಳಿ ಅಮಾಯಕತೆ ಪ್ರದರ್ಶಿಸಿದ್ದಳು. ಪೊಲೀಸರೇ ಸುಮಾ ಅನ್ನು ರಕ್ಷಿತ ಮಹಿಳೆ ಎಂದು ನೊಂದಾವಣೆ ಮಾಡಿ ಸಾಂತ್ವನ ಕೇಂದ್ರಕ್ಕೆ ಕಳಿಸಿದ್ದರು.

ಇದೀಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮೈಸೂರಿನ ಮೇಟಗಳ್ಳಿ ಪೊಲೀಸರು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಸುಮಾ ಹಾಗೂ ಮಧ್ಯವರ್ತಿ ಸಿದ್ಧರಾಜು ಎಂಬಾತನನ್ನು ಬಂಧಿಸಿದ್ದಾರೆ.

ಈಕೆಯು ಟಿಕ್‌ಟಾಕ್ ಮೂಲಕ ಮೈಸೂರು ಭಾಗದ ಯುವಕರನ್ನು ತನ್ನತ್ತ ಸೆಳೆದು ಬಳಿಕ ವೇಶ್ಯಾವಾಟಿಕೆ ಜಾಲಕ್ಕೆ ಯುವಕರನ್ನು ಸೆಳೆಯುತ್ತಿದ್ದಳು. ಆಕೆ ಸಾಮಾಜಿಕ ಜಾಲತಾಣಗಳಾದ ಟಿಕ್‌ ಟಾಕ್‌ ಫೇಸ್‌ ಬುಕ್‌ , ಇನಸ್ಟಾಗ್ರಾಮ್‌ ಮೂಲಕವೇ ತನ್ನ ಬಳಿಗೆ ಯುವಕರನ್ನು ಸೆಳೆಯುತಿದ್ದಳು.

More from Filmibeat

English summary
Mysuru police arrest tik-tok star Suma for running prostitute business. They also arrested a guy named Siddaraju in the case.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X