»   » ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?

ಉಪೇಂದ್ರಗೆ 'H2O' ಕುಡಿಸಿದವರು ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರೆ.?

Posted By:
Subscribe to Filmibeat Kannada

'H2O' ಸಿನಿಮಾ ನೆನಪಿದ್ಯಾ? ಅಷ್ಟಕ್ಕೂ, ಅದನ್ನ ಮರೆಯೋಕಾದರೂ ಹೇಗೆ ಸಾಧ್ಯ ಹೇಳಿ.?

ಕರ್ನಾಟಕ-ತಮಿಳುನಾಡು ನಡುವಿನ 'ಕಾವೇರಿ' ವಿವಾದಕ್ಕೆ, 'ಪ್ರೀತಿ-ಪ್ರೇಮ'ದ ರೂಪ ಕೊಟ್ಟು, ನೀರಿನ ಕಿತ್ತಾಟಕ್ಕೆ ಅಂತ್ಯ ಹಾಡಲು ತಮ್ಮದೇ ಶೈಲಿಯಲ್ಲಿ ಫಾರ್ಮುಲಾ ಸಿದ್ಧ ಪಡಿಸಿ, 'H2O' ಚಿತ್ರವನ್ನು ಬೆಳ್ಳಿ ಪರದೆ ಮೇಲೆ ತಂದವರು ರಿಯಲ್ ಸ್ಟಾರ್ ಉಪೇಂದ್ರ.

n-lokanath-of-h2o-fame-to-direct-upendra-s-next

'H2O' ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದವರು ರಿಯಲ್ ಸ್ಟಾರ್ ಉಪೇಂದ್ರ ಆದರೂ, ಡೈರೆಕ್ಟರ್ ಕ್ಯಾಪ್ ತೊಟ್ಟವರು ಮಾತ್ರ ಇಬ್ಬರು. ಒಬ್ಬರು ರಾಜಾರಾಮ್ ಮತ್ತೊಬ್ಬರು ಎನ್.ಲೋಕನಾಥ್ ಅಂತ. ಇಬ್ಬರ ಪೈಕಿ ಎನ್.ಲೋಕನಾಥ್ (ಲೋಕಿ) ಉಪ್ಪಿಗೆ ಅತ್ಯಾಪ್ತ.

'H2O' ಚಿತ್ರದಲ್ಲಿ ಮೋಡಿ ಮಾಡಿದ್ದ ಉಪ್ಪಿ-ಲೋಕಿ ಜೋಡಿ, ಮತ್ತೊಮ್ಮೆ ಒಂದಾದ್ರೆ ಹೇಗೆ? ಈ ಆಲೋಚನೆ ಉಪ್ಪಿ ಹಾಗೂ ಲೋಕಿ ತಲೆಯಲ್ಲಿದೆ. ಮೂಲಗಳ ಪ್ರಕಾರ, ಎನ್.ಲೋಕನಾಥ್ ನಿರ್ದೇಶನದಲ್ಲಿ ಉಪೇಂದ್ರ ಬಣ್ಣ ಹಚ್ಚಲು ಮನಸ್ಸು ಮಾಡಿದ್ದಾರಂತೆ. [ಉಪ್ಪಿ ಮುಂದಿನ ಸಿನಿಮಾ ಟೈಟಲ್ ಏನು ಗೊತ್ತಾ?]

'H2O' ಚಿತ್ರದ ಮೂಲಕ ಎರಡು ರಾಜ್ಯಗಳನ್ನು ಅಲುಗಾಡಿಸಿದಂತೆ, ಈ ಬಾರಿ ಮತ್ತೊಮ್ಮೆ ಈ ಜೋಡಿ ಸೆನ್ಸೇಷನಲ್ ಟಾಪಿಕ್ ಆಯ್ದುಕೊಳ್ಳುತ್ತಾ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಉಪೇಂದ್ರ ಸದ್ಯ 'ಕಲ್ಪನಾ-2' ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಅದು ಮುಗಿದ ಮೇಲೆ ಹೊಸ ಚಿತ್ರದ ಮಾತು. ['ಕಲ್ಪನಾ-2' ಶೂಟಿಂಗ್ ಸೆಟ್ ನಲ್ಲಿ ನಡೆದ್ದೇನು? ಉಪೇಂದ್ರಗೆ ಏನಾಯ್ತು?]

ಉಪ್ಪಿ-ಲೋಕಿ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಹೊಸ ಚಿತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿಯನ್ನ ನಿಮ್ಮ ಮುಂದೆ ಇಟ್ಟಿದ್ದೀವಿ. ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ...

English summary
According to the sources, N.Lokanath of 'H2O' fame is all set to direct Real Star Upendra's next.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada